ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ವರ್ಗದ ಜನರಿಗೆ 10 ಸಾವಿರ ಕೋಟಿ ರೂಪಾಯಿ ಸಹಾಯಧನ ನೀಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ತಗುಲಿ ಇಡೀ ದೇಶವೇ ಲಾಕ್ಡೌನ್ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಮೋದಿಯವರು ಯೋಜನೆಗೆ ಒಂದೊಂದು ಹೆಸರಿಟ್ಟು ಪ್ರಚಾರ ಪಡೆಯುವ ಬದಲು ಎಲ್ಲಾ ವರ್ಗದ ಜನರಿಗೆ ಸಹಾಯವಾಗುವಂತೆ ಪ್ಯಾಕೆಜ್ಗಳನ್ನು ಘೋಷಿಸಬೇಕು.
ಹೊರ ರಾಜ್ಯದಿಂದ ಜನರನ್ನು ಕರೆತರುವ ಸರ್ಕಾರದ ಆತುರದ ನಿರ್ಧಾರದಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಮೂರು ಪ್ಯಾಕೇಜ್ಗಳಲ್ಲಿ ಸರ್ಕಾರ ಕಾಫಿ ಬೆಳೆಗಾರರಿಗೆ ಯಾವುದೇ ನೆರವು ಘೋಷಿಸಿಲ್ಲ. ಇದರಿಂದ ಕಾಫಿ ಬೆಳೆಗಾರರು ಸಮಸ್ಯೆಗೀಡಾಗಿದ್ದಾರೆ ಎಂದರು.
ಸರ್ಕಾರ ಮದ್ಯದ ಅಂಗಡಿಯಿಂದ ಬರುವ ಆದಾಯದ ಮೇಲೆ ಆಡಳಿತ ನಡೆಸುತ್ತಿದೆ ಎಂದರೆ ಇಂತಹ ದಿವಾಳಿತನದ ಸರ್ಕಾರ ಮತ್ತೊಂದಿಲ್ಲ ಎಂದು ವ್ಯಂಗ್ಯವಾಡಿದರು.