ETV Bharat / state

ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ಕಲ್ಲು ಕುಸಿತ: ತಪ್ಪಿದ ಅನಾಹುತ

author img

By

Published : Aug 3, 2022, 12:40 PM IST

Updated : Aug 3, 2022, 5:17 PM IST

ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಕಲ್ಲುಗಳು ಮಳೆಯಿಂದಾಗಿ ಸಡಿಲಗೊಂಡು ಬಿದ್ದಿವೆ. ಈ ಹಿನ್ನೆಲೆ‌‌ ಸದ್ಯಕ್ಕೆ‌‌ ದೇವಾಲಯ ಪ್ರವೇಶ‌ ನಿರ್ಬಂಧಿಸಲಾಗಿದೆ.

ವಿಂಧ್ಯಗಿರಿ ಬೆಟ್ಟದಲ್ಲಿ ಕಲ್ಲು ಕುಸಿತ
Vindhyagiri hills

ಹಾಸನ/ಶ್ರವಣಬೆಳಗೂಳ: ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಕುಂಭ ದ್ರೋಣ ಮಳೆಗೆ ಶ್ರವಣಬೆಳಗೊಳದ ಬೆಟ್ಟವೇ ಅಲುಗಾಡಿದೆ. ವಿಂಧ್ಯಗಿರಿ ಬೆಟ್ಟದ ಕೋಟೆಯ ಕಲ್ಲುಗಳು ಮಳೆಯಿಂದಾಗಿ ಸಡಿಲಗೊಂಡು ಬಿದ್ದಿವೆ. ಅದೃಷ್ಟವಶಾತ್​ ‌ಯಾವುದೇ ಅನಾಹುತ ಸಂಭವಿಸಿಲ್ಲ.

ಹೌದು, ಒಂದೂವರೆ ತಿಂಗಳಿನಿಂದ ಸುರಿದ ಭಾರಿ ಮಳೆಗೆ ವಿಶ್ವವಿಖ್ಯಾತ ಎಂಟನೇ ಅದ್ಭುತಗಳಲ್ಲಿ ಒಂದಾಗಿರುವ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಕಾಂಪೌಂಡ್ ಕುಸಿದಿದೆ. ಬೆಟ್ಟ ಹತ್ತಿ ದರ್ಶನಕ್ಕೆ ಹೋಗುವ ಕೊನೆಯ ಮೆಟ್ಟಿಲಿಗೆ ಹಾಕಿರುವ ಕಾಂಪೌಂಡ್ ವರುಣನ ಆರ್ಭಟಕ್ಕೆ ಕೊಚ್ಚಿ ಹೋಗಿದೆ. ಕಾಂಪೌಂಡಿನ ಕಲ್ಲುಗಳು ಮೆಟ್ಟಿಲುಗಳ ಮೇಲೆ ಬಂದು ಬಿದ್ದಿದ್ದು ಪ್ರವಾಸಿಗರು ಹತ್ತಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿದೆ.

ವಿಂಧ್ಯಗಿರಿ ಬೆಟ್ಟದಲ್ಲಿ ಕಲ್ಲು ಕುಸಿತ

ಇನ್ನು ಬೆಟ್ಟದ ತಪಲಿನ ಕೆಳಗಿರುವ ವಿಶ್ರಾಂತಿ ಸ್ಥಳದಲ್ಲಿ ಬೃಹತ್ ಬೆಟ್ಟದ ಮೇಲಿನ ಕಲ್ಲೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಘಟನೆ ರಾತ್ರಿ ನಡೆದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಮಳೆ ಆರ್ಭಟಕ್ಕೆ ಜಿಲ್ಲೆಯಲ್ಲಿ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಸಂಪೂರ್ಣ ಹಾಳಾಗಿವೆ.

ಕೋಡಿಮಠ ಶ್ರೀಗಳ ಭವಿಷ್ಯ: ಕೋಡಿಮಠ ಶ್ರೀಗಳು ಹೇಳಿದ ಭವಿಷ್ಯ ನಿಜವಾಗಿದೆ. ಶುಭಕೃತ ನಾಮ ಸಂವತ್ಸರ ಶುಭವಾಗುವುದಿಲ್ಲ, ಅಶುಭವೇ ಜಾಸ್ತಿ ಎಂದಿದ್ದರು. ಅದೇ ರೀತಿ ವಿಶ್ವವಿಖ್ಯಾತ ಬೃಹತ್ ಬೆಟ್ಟದ ಮೇಲಿನ ಗಟ್ಟಿಮುಟ್ಟಾದ ತಡೆಗೋಡೆ ಕುಸಿದಿದೆ ಎಂದ್ರೆ ಕೊಂಬದ್ರೋಣ ಮಳೆ ಬರದ ನಾಡಲ್ಲಿ ಘರ್ಜಿಸುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ಎಂಎಲ್​ಎ ಸಿಎನ್ ಬಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ಮಾಧ್ಯಮಗಳಿಗೆ ದೂರವಾಣಿ ಮುಖಾಂತರ ತಿಳಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಪುರಾತತ್ವ ಇಲಾಖೆಯ ಮಾರ್ಗದರ್ಶನದಡಿ ರಿಪೇರಿ ಮಾಡುವಂತೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫೆಬ್ರವರಿಯಲ್ಲಿ ಹೇಳಿದ ಭವಿಷ್ಯ ನಿಜವಾಗಿದೆ, ದೇಶವನ್ನೇ ವರಣ ಅಲ್ಲಾಡಿಸುತ್ತಿದ್ದಾನೆ: ಕೋಡಿಮಠ ಶ್ರೀ

Last Updated : Aug 3, 2022, 5:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.