ಹಾಸನ: ಬಿಸಿಲ ಝಳಕ್ಕೆ ಕಾದು ಕಾವಲಿಯಂತಿದ್ದ ಧರೆಗೆ ಮಳೆ ತಂಪೆರೆದೆ. ಜಿಲ್ಲೆಯಲ್ಲಿ ನಿನ್ನೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಗಾಳಿ, ಮಳೆಯೊಂದಿಗೆ ಮಳೆಯ ಸಿಂಚನವಾಗಿದೆ.
ಸಂಜೆ 3 ಗಂಟೆಗೆ ಶುರುವಾದ ಮಳೆ 4 ಗಂಟೆವರೆಗೆ ಮುಂದುವರೆಯಿತು. ಶಾಂತಿಗ್ರಾಮ, ಮೊಸಳೆ ಹೊಸಹಳ್ಳಿ, ಸಕಲೇಶಪುರ ಹಾಗೂ ಬೇಲೂರು ವ್ಯಾಪ್ತಿಯಲ್ಲಿ ಮಳೆಯಾಗಿದೆ.