ಬೇಲೂರು (ಹಾಸನ): ಜಮೀನು ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಬೇಲೂರು ತಾಲೂಕಿನ ಹಳೇಬೀಡು ರಸ್ತೆಯ ಬಂಟೇನಹಳ್ಳಿಯಲ್ಲಿ ಕೇಳಿಬಂದಿದೆ.
ಇರ್ಫಾನ್ ಮಾರಾಣಾಂತಿಕ ಹಲ್ಲೆಗೊಳಗಾದ ವ್ಯಕ್ತಿ ಆಗಿದ್ದು, ಮುನ್ವರ್ ಹಲ್ಲೆ ಮಾಡಿದ ಆರೋಪಿ. ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಮುನ್ವರ್ ಹಾಗೂ ಇರ್ಫಾನ್ ನಡುವೆ ಜಗಳ ನಡೆದಿದೆ. ಈ ವೇಳೆ ಮುನ್ವರ್ ಮನೆಯಲ್ಲಿದ್ದ ಮಾರಕಾಸ್ರ್ತದಿಂದ ಇರ್ಫಾನ್ ಮುಖದ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಗಾಯಗೊಂಡಿರುವ ಇರ್ಫಾನ್ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹಲ್ಲೆ ಮಾಡಿದ ಆರೋಪಿ ಮುನ್ವರ್ ತಲೆಮರೆಸಿಕೊಂಡಿದ್ದು, ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.