ಚನ್ನರಾಯಪಟ್ಟಣ (ಹಾಸನ): ಮುಬೈನಿಂದ ಬಂದ ಜನರನ್ನು ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ರಸ್ತೆಯಲ್ಲಿರುವ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಶಾಲೆಯ ಸುತ್ತಮುತ್ತ (ಒಂದು ಕಿ.ಮೀ.) ಜನರ ಓಡಾಟಕ್ಕೆ ನಿರ್ಬಂಧಿಸಲಾಗಿದೆ.
ಎರಡೇ ದಿನದಲ್ಲಿ ತಾಲೂಕಿನಲ್ಲಿ 9 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇವರು ಮುಂಬೈನಿಂದ ಬಂದಿದ್ದರು. ಕ್ವಾರಂಟೈನ್ ಕೇಂದ್ರದ ಮುಂಭಾಗದ ರಸ್ತೆಗೆ ಬ್ಯಾರಿಕೇಡ್ ಹಾಕಿ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಸುಮಾರು 171 ಮಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಶಾಲೆಯ ಮುಂಭಾಗದ ರಸ್ತೆ ನುಗ್ಗೇಹಳ್ಳಿ-ತಿಪಟೂರು ರಸ್ತೆಗೆ ಸಂಪರ್ಕಿಸಲಿದೆ.