ಹಾಸನ: ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪ್ರಗತಿ ಸಾಧಿಸಲು ಸಾಧ್ಯವಾಗದೇ ಇದ್ದ ಮುಖ್ಯ ಯೋಜನಾಧಿಕಾರಿಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸರ್ಕಾರ ಸಾಕಷ್ಟು ಹಣ ನೀಡಿದೆ. ಕೆಲಸ ಮಾಡಿಸೋಕೆ ನಿಮಗೇನು ತೊಂದರೆ? ಅಲ್ರೀ ಇಷ್ಟೊಂದು ಬೇಜವಾಬ್ದಾರಿತನದಿಂದ ಕೆಲಸ ಮಾಡ್ತಿದ್ದೀರಲ್ಲಾ ಈ ಕೆಲಸ ಬಿಟ್ಟು ಬೇರೆ ಏನಾದ್ರೂ ಕೆಲಸ ಇದ್ಯಾ? ಎಂದು ಮುಖ್ಯ ಯೋಜನಾಧಿಕಾರಿ ನಾಗರಾಜ್ರನ್ನು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಕೆಲಸ ಮಾಡೋದಕ್ಕೆ ಆಗಲ್ಲ ಎಂದ ಮೇಲೆ ಮನೆಗೆ ಹೋಗಿ ಎಂದು ಗರಂ ಆದರು.
ಓದಿ: ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ: ಖಾಲಿ ಬಿಂದಿಗೆ ಹಿಡಿದು ಜನರ ಪ್ರತಿಭಟನೆ
ವಿವಿಧ ಇಲಾಖೆಗಳ ಕಾರ್ಯವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸಚಿವರು, ಬೇಜವಾಬ್ದಾರಿತನದ ಕೆಲಸ ಮಾಡುತ್ತಾ ಸರ್ಕಾರದ ಸಂಬಳ ಪಡೆಯುತ್ತಿರುವ ಅಧಿಕಾರಿಗಳ ಬಗ್ಗೆ ನಿಗಾ ಇಡುವಂತೆ ಸಿಇಓಗೆ ಸೂಚಿಸಿದರು. ಜೊತೆಗೆ ಸರ್ಕಾರದ ಕೆಲಸಗಳನ್ನು ಅಧಿಕಾರಿಗಳಿಂದ ಕಾಲ-ಕಾಲಕ್ಕೆ ಮಾಡಿಸುವಂತೆ ಶಾಸಕರಿಗೆ ಸಲಹೆ ನೀಡಿದರು.