ETV Bharat / state

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿ ಸಿದ್ದತೆ ನಡೆಸಲು ಪರಿಶೀಲನೆ: ಜಿಲ್ಲಾಧಿಕಾರಿ ಆರ್.ಗಿರೀಶ್

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ವ್ಯವಸ್ಥಿತ ರೀತಿಯಲ್ಲಿ ತ್ವರಿತವಾಗಿ ಎಲ್ಲಾ ಅಗತ್ಯ ಪೂರ್ವ ಸಿದ್ದತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿ, ಸರದಿ ಸಾಲಿನಲ್ಲಿ ಬರುವ ಭಕ್ತಾಧಿಗಳಿಗೆ ಯಾವ ಸಮಸ್ಯೆ ಉಂಟಾಗದಂತೆ ನಿಗಾವಹಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಪೂರ್ವಭಾವಿ ಸಿದ್ದತಾ ಸಭೆ
author img

By

Published : Oct 2, 2019, 10:13 AM IST

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ವ್ಯವಸ್ಥಿತ ರೀತಿಯಲ್ಲಿ ತ್ವರಿತವಾಗಿ ಎಲ್ಲಾ ಅಗತ್ಯ ಪೂರ್ವ ಸಿದ್ದತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿ, ಸರದಿ ಸಾಲಿನಲ್ಲಿ ಬರುವ ಭಕ್ತಾಧಿಗಳಿಗೆ ಯಾವ ಸಮಸ್ಯೆ ಉಂಟಾಗದಂತೆ ನಿಗಾವಹಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರ ಉಪಸ್ಥಿತಿಯಲ್ಲಿ ಹಾಸನಾಂಬ ಜಾತ್ರಾ ಮಹೋತ್ಸವ ಕುರಿತಂತೆ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು ದೇವರ ಸುಗಮ ದರ್ಶನಕ್ಕೆ ಪೂರಕವಾಗಿ ಹಾಗೂ ಯಾವುದೇ ಸಾಂಪ್ರಾದಾಯಿಕ ವಿಧಿ ವಿಧಾನಗಳಿಗೆ ಕುಂದುಕೊರತೆ ಉಂಟಾಗದಂತೆ ಸಿದ್ದತೆ ನಡೆಸಲು ನಿರ್ದೇಶನ ನೀಡಿದರು. ದೇವಸ್ಥಾನ ಪ್ರವೇಶದ್ವಾರಗಳು ಸೇರಿದಂತೆ ಜಿಲ್ಲೆಗೆ ಬೆಂಗಳೂರು, ಮಂಗಳೂರು, ಮೈಸೂರು, ಬೇಲೂರು ಮಾರ್ಗದಿಂದ ಆಗಮಿಸುವ ಭಕ್ತಾಧಿಗಳನ್ನು ಸ್ವಾಗತಿಸಲು ಆಕರ್ಷಕ ಸ್ವಾಗತ ಕಮಾನುಗಳನ್ನು ತಯಾರಿಸಿ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಕ್ತಾಧಿಗಳಿಗೆ ಯಾವ ಸಮಸ್ಯೆ ಉಂಟಾಗದಂತೆ ನಿಗಾವಹಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಸ್ಥಳಗಳಲ್ಲಿ ಜಾತ್ರಾ ಮಹೋತ್ಸೋವದ ಮಾಹಿತಿ, ದೇವಿಯ ದರ್ಶನದ ವೇಳಾಪಟ್ಟಿ ಹಾಗೂ ವಿಶೇಷ ದರ್ಶನದ ಬಗ್ಗೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ಫಲಕಗಳನ್ನು ಅಳವಡಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಆಕರ್ಷಣೀಯವಾಗಿರಬೇಕು, ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳ ಬಗ್ಗೆಯೂ ಡಿಜಿಟಲ್ ಡಿಸೈನ್ ಬೋರ್ಡ್‍ಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸುವ ಕಾರ್ಯಗಳಾಗಲಿ ಎಂದರು.

ಇನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರು ಮಾತನಾಡಿ ದೇವಸ್ಥಾನದ ಪ್ರಮುಖ ಬೀದಿಗಳಲ್ಲಿನ ರಸ್ತೆ ಸಮಸ್ಯೆಯನ್ನು ನಿವಾರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಹೇಳಿದರು. ಸರದಿ ಸಾಲಿನಲ್ಲಿ ದೇವಿಯ ದರ್ಶನ ಮಾಡುವ ಭಕ್ತಾಧಿಗಳಿಗೆ ಯಾವುದೇ ಸಮಸ್ಯೆಯಾಗಬಾರದು. ಅವಶ್ಯಕವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಿಳಿಸಿದರು. ವಿಶೇಷ ದರ್ಶನ ಹಾಗೂ ಗಣ್ಯರ ದರ್ಶನಕ್ಕೆ ಯಾವುದೇ ಗೊಂದಲಗಳಾಗದಂತೆ ಶಿಷ್ಠಾಚಾರದಲ್ಲೂ ಲೋಪವಾಗದಂತೆ ಕಾರ್ಯ ನಿರ್ವಹಿಸಿ ಎಂದು ಅವರು ಸಲಹೆ ನೀಡಿದರು. ಪ್ರಭಾರ ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜ್ ಅವರು ಮಾತನಾಡಿ ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಭಕ್ತಾದಿಗಳಿಗೆ ಪ್ರಸಾದ, ಲಾಡು ವಿನಿಯೋಗಕ್ಕೂ ಕ್ರಮವಹಿಸಲಾಗಿದೆ ಎಂದರು. ದೇವಾಸ್ಥಾನದ ಆಚಾರ, ವಿಚಾರ, ಔಪಚಾರಿಕ ನಿಯಮಗಳ ಕುರಿತ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್, ನಗರಸಭೆ ಪೌರಾಯುಕ್ತರಾದ ಕೃಷ್ಣಮೂರ್ತಿ, ನಗರಾಭಿವೃದ್ದಿ ಕೋಶದ ಜಗದೀಶ್, ತಹಸಿಲ್ದಾರ್ ಮೇಘನಾ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Intro:ಹಾಸನ : ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ವ್ಯವಸ್ಥಿತ ರೀತಿಯಲ್ಲಿ ತ್ವರಿತವಾಗಿ ಎಲ್ಲಾ ಅಗತ್ಯ ಪೂರ್ವ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರ ಉಪಸ್ಥಿತಿಯಲ್ಲಿ ಹಾಸನಾಂಬ ಜಾತ್ರಾ ಮಹೋತ್ಸವ ಕುರಿತಂತೆ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು ದೇವರ ಸುಗಮ ದರ್ಶನಕ್ಕೆ ಪೂರಕವಾಗಿ ಹಾಗೂ ಯಾವುದೇ ಸಾಂಪ್ರಾದಾಯಿಕ ವಿಧಿ ವಿಧಾನಗಳಿಗೆ ಕುಂದು ಉಂಟಾಗದಂತೆ ಸಿದ್ದತೆ ನಡೆಸಲು ನಿರ್ದೇಶನ ನೀಡಿದರು.
ದೇವಸ್ಥಾನ ಪ್ರವೇಶದ್ವಾರಗಳು ಸೇರಿದಂತೆ ಜಿಲ್ಲೆಗೆ ಬೆಂಗಳೂರು, ಮಂಗಳೂರು, ಮೈಸೂರು, ಬೇಲೂರು ಮಾರ್ಗದಿಂದ ಆಗಮಿಸುವ ಭಕ್ತಾಧಿಗಳನ್ನು ಸ್ವಾಗತಿಸಲು ಆಕರ್ಷಕ ಸ್ವಾಗತ ಕಮಾನುಗಳನ್ನು ತಯಾರಿಸಿ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಸ್ಥಳಗಳಲ್ಲಿ ಜಾತ್ರಾ ಮಹೋತ್ಸೋವದ ಮಾಹಿತಿ, ದೇವಿಯ ದರ್ಶನದ ವೇಳಾಪಟ್ಟಿ ಹಾಗೂ ವಿಶೇಷ ದರ್ಶನದ ಬಗ್ಗೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ಫಲಕಗಳನ್ನು ಅಳವಡಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಆಕರ್ಷಣೀಯವಾಗಿರಬೇಕು, ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳ ಬಗ್ಗೆಯೂ ಡಿಜಿಟಲ್ ಡಿಸೈನ್ ಬೋರ್ಡ್‍ಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸುವ ಕಾರ್ಯಗಳಾಗಲಿ ಎಂದರು.
         ದೇವಸ್ಥಾನದ ಇತಿಹಾಸ ಸಾರುವ ಸುಂದರವಾದ ಸ್ತಬ್ದ ಚಿತ್ರ ನಗರ ಹಾಗೂ ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿ ಸಂಚರಿಸುವ ಕಾರ್ಯಕ್ರಮವನ್ನು ರೂಪಿಸಿ, ಇದೇ ರೀತಿ ಮೊದಲ ಹಾಗೂ ಕಡೆಯ ದಿನ ಕಲಾತಂಡಗಳ ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.
ಭಕ್ತಾಧಿಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ನಡೆಯಲಿ, ಅಲ್ಲದೇ, ಹಾಸನಾಂಬ ದೇವಿಯ ದರ್ಶನಕ್ಕೆ ಸಾಗುವ ಸರದಿ ಸಾಲಿನಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಗಳಾಗಬೇಕು ಹಾಗೂ ಅವುಗಳ ವ್ಯವಸ್ಥಿತ ನಿರ್ವಹಣೆಯಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರು ಮಾತನಾಡಿ ದೇವಸ್ಥಾನದ ಪ್ರಮುಖ ಬೀದಿಗಳಲ್ಲಿನ ರಸ್ತೆ ಸಮಸ್ಯೆಯನ್ನು ನಿವಾರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ಸರದಿ ಸಾಲಿನಲ್ಲಿ ದೇವಿಯ ದರ್ಶನ ಮಾಡುವ ಭಕ್ತಾಧಿಗಳಿಗೆ ಯಾವುದೇ ಸಮಸ್ಯೆಯಾಗಬಾರದು. ಅವಶ್ಯಕವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಿಳಿಸಿದರು.
ವಿಶೇಷ ದರ್ಶನ ಹಾಗೂ ಅತೀ ಗಣ್ಯರ ದರ್ಶನಕ್ಕೆ ಯಾವುದೇ ಗೊಂದಲಗಳಾಗದಂತೆ ಶಿಷ್ಠಾಚಾರದಲ್ಲೂ ಲೋಪವಾಗದಂತೆ ಕಾರ್ಯ ನಿರ್ವಹಿಸಿ ಎಂದು ಅವರು ಸಲಹೆ ನೀಡಿದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜ್ ಅವರು ಮಾತನಾಡಿ ಈಗಾಗಲೇ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಭಕ್ತಾದಿಗಳಿಗೆ ಪ್ರಸಾದ, ಲಾಡು ವಿನಿಯೋಗಕ್ಕೂ ಕ್ರಮವಹಿಸಲಾಗಿದೆ ಎಂದರು.
ದೇವಾಸ್ಥಾನದ ಆಚಾರ, ವಿಚಾರ, ಔಪಚಾರಿಕ ನಿಯಮಗಳ ಕುರಿತ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್, ನಗರಸಭೆ ಪೌರಾಯುಕ್ತರಾದ ಕೃಷ್ಣಮೂರ್ತಿ, ನಗರಾಭಿವೃದ್ದಿ ಕೋಶದ ಜಗದೀಶ್, ತಹಸಿಲ್ದಾರ್ ಮೇಘನಾ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.