ಹಾಸನ: ನಗರದ 35ನೇ ವಾರ್ಡಿನ ಸಮಸ್ಯೆ ಆಲಿಸಲು ಬಂದಾಗ ಯಾವ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದಿದ್ದರಿಂದ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳಾದವರು ಯಾವುದೇ ಒಂದು ಪಕ್ಷದ ಪರ ಕೆಲಸ ಮಾಡಲು ಹೋಗಬಾರದು. ಕೂಡಲೇ ವೇದಿಕೆ ಬಳಿ ಬರುವಂತೆ ಸೂಚಿಸಿದರು. ನನಗೆ ಕೆಲಸ ಇಲ್ಲದೇ ಇಲ್ಲಿಗೆ ಬಂದಿಲ್ಲ, ಜನರ ಸಮಸ್ಯೆ ಆಲಿಸುವುದಕ್ಕೆ ಬಂದಿದ್ದೇನೆ. ನಗರಸಭೆ ಕಮಿಷನರ್ಗೆ ಕರೆ ಮಾಡಿದರೇ ಕೋರ್ಟ್ ಇದೆ ಎನ್ನುತ್ತಿದ್ದಾರೆ. ತಹಶೀಲ್ದಾರ್ ರವರು ಇದುವರೆಗೂ ಒಂದು ದಿನ ಇಂತಹ ಕಾರ್ಯಕ್ರಮಕ್ಕೆ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಕೇಳಿದ್ದಾರಾ.. ಎಲ್ಲಾ ಅಧಿಕಾರಿಗಳಿಗೂ ಕೋರ್ಟ್ ಇದಿಯಾ ಎಂದು ಸಂಸದ ಪ್ರಜ್ವಲ್ ರೇವಣ್ಣ ಗರಂ ಆದರು.ಅಲ್ಲದೇ ಸಭೆಗೆ ಗೈರಾದ ಅಧಿಕಾರಿಗಳಿಗೆಲ್ಲಾ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ರು.
ಒಬ್ಬ ಎಂಪಿಗೆ ಮತ್ತು ಇಲ್ಲಿಗೆ ನನ್ನನ್ನು ಕರೆದಿರುವ ಜನರಿಗೆ ಗೌರವ ವಿಲ್ಲವೇ? 35 ನೇ ವಾರ್ಡಿನ ನಿವಾಸಿಗಳು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬಂದಿದ್ದಾರೆ. ಅಧಿಕಾರಿಗಳಿಗೆ ಅಧಿಕಾರ ಇರುವುದೇ ಜನರ ಕಷ್ಟ ಕೇಳುವುದಕ್ಕೆ. ಅಧಿಕಾರಿಗಳು ಯಾರ ಕಡೆಯಿಂದಾದರೂ ಅಧಿಕಾರಕ್ಕೆ ಬಂದಿರಲಿ ಇಲ್ಲಿಗೆ ಬಂದು ಸಂಸದರಿಗೆ ಒಂದು ಗೌರವ ತೋರಿಸುವುದು ಬೇಡವೇ? ಈ ವಾರ್ಡಿನಲ್ಲಿ ಲ್ಯಾಂಡ್ ಅಕ್ವೇರ್ ಸಮಸ್ಯೆ ಇದೆ. ರಸ್ತೆ ಅಭಿವೃದ್ಧಿಯಾಗಿಲ್ಲ. ಚರಂಡಿ ವಾಸನೆ ಹೊಡೆಯುತ್ತಿದೆ. ಯಾರಾದರೂ ವಾರ್ಡಿಗೆ ಬಂದಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಚರ್ಚೆ ಮಾಡಲಾಗುವುದು. ಯಾರೆ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಕರೆದಂತಹ ಸಂದರ್ಭದಲ್ಲಿ ಹಾಜರಿರಬೇಕು ಎಂದು ಎಚ್ಚರಿಕೆ ನೀಡಿದರು. ಫಲಾನುಭವಿಗಳಿಗೆ ಸರಕಾರದ ಯೋಜನೆಗಳು ಲಭ್ಯವಾಗಬೇಕು ಎಂದರು.