ETV Bharat / state

ನಕಲು ಸಾಹಿತ್ಯ ರಚಿಸುವ ಕವಿಗಳು ಯಾರೂ ಆಗಬಾರದು: ಡಾ. ದೊಡ್ಡರಂಗೇಗೌಡ - Dr. The Large Range Gowda

ನಕಲು ಸಾಹಿತ್ಯ ರಚಿಸುವ ಕವಿಗಳು ಯಾರೂ ಆಗಬಾರದು ಎಂದು ಹಿರಿಯ ಸಾಹಿತಿ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರು ಸಲಹೆ ನೀಡಿದರು.

hassan
ರಾಜ್ಯ ಮಟ್ಟದ 4ನೇ ವರ್ಷದ ಕವಿ-ಕಾವ್ಯ ಸಂಭ್ರಮ ಕಾರ್ಯಕ್ರಮ
author img

By

Published : Oct 18, 2020, 7:36 PM IST

ಹಾಸನ: ಸಾಹಿತ್ಯದ ರಚನೆಗಳು ದೊಡ್ಡ ಸಾಲುಗಳಾಗಬೇಕಾಗಿಲ್ಲ. ನಾಲ್ಕು ಸಾಲುಗಳಾದರೂ ಸ್ವಂತಿಕೆ ಎನ್ನುವುದು ಇರಬೇಕು. ನಕಲು ಸಾಹಿತ್ಯ ರಚಿಸುವ ಕವಿಗಳು ಯಾರೂ ಆಗಬಾರದು ಎಂದು ಹಿರಿಯ ಸಾಹಿತಿ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಕಿವಿಮಾತು ಹೇಳಿದರು.

ರಾಜ್ಯ ಮಟ್ಟದ 4ನೇ ವರ್ಷದ ಕವಿ-ಕಾವ್ಯ ಸಂಭ್ರಮ ಕಾರ್ಯಕ್ರಮ

ನಗರದ ಸಾಲಗಾಮೆ ರಸ್ತೆ ಅರಳೀಕಟ್ಟೆ ವೃತ್ತದ ಬಳಿ ಇರುವ ಸಂಸ್ಕೃತ ಭವನದಲ್ಲಿ​ ಮಾಣಿಕ್ಯ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ 4ನೇ ವರ್ಷದ ಕವಿ-ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕವಿಗಳಾದವರಲ್ಲಿ ತಮ್ಮದೇಯಾದ ಸಾಹಿತ್ಯ ಇರಬೇಕು. ಆದರೇ ಇಂದು ಮುಖಪುಟದ ಕವಿಗಳು ಹೆಚ್ಚಾಗಿದ್ದಾರೆ. ಇಂತಹ ಕವಿಗಳು ಎಲ್ಲಾ ಭಾಗಗಳಲ್ಲೂ ಇರುತ್ತಾರೆ. ಸಾಹಿತ್ಯದಲ್ಲಿ ನಾಲ್ಕು ಸಾಲಾದರೂ ಸ್ವಂತಿಕೆ ಇರಲಿ. ಬೇರೆಯವರು ಬರೆದ ಸಾಹಿತ್ಯವನ್ನು ಬರೆಯಬಾರದು ಎಂದು ಸಾಹಿತಿಗಳಿಗೆ ಸಲಹೆ ನೀಡಿದರು.

ಜಗತ್ತಿನಲ್ಲಿ ಎಲ್ಲಿಂದ ಎಲ್ಲಿಗಾದರೂ ಹೋದರೂ ಸಾಹಿತ್ಯ ಯಾವತ್ತು ಕೂಡ ದುಷ್ಟ ಆಲೋಚನೆಗಳನ್ನು ಬಿತ್ತುವುದಿಲ್ಲ, ಬೆಳೆಯುವುದಿಲ್ಲ. ಅದೇ ಸಾಹಿತ್ಯದ ಶ್ರೇಷ್ಟತೆಯಾಗಿದೆ. ಸಾಹಿತ್ಯದಲ್ಲಿ ಸೃಜನಶೀಲತೆ ಇರುತ್ತದೆ. ಅದು ಮಾನವನ ದೇಹ ಪೂರಕವಾಗಿದೆ. ಕವಿಯಾದವನು ಒಳಿತನ್ನೇ ಇಷ್ಟ ಪಡುತ್ತಾ ಹೋಗುತ್ತಾನೆ ಹೊರತು ಮನುಕುಲಕ್ಕೆ ಕೆಡಕನ್ನು ಬಯಸುವುದಿಲ್ಲ ಎಂದರು.

ಸಮಾರಂಭದಲ್ಲಿ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ, ಎನ್. ಶೈಲಜಾ ಹಾಸನ ದತ್ತಿ ಪುರಸ್ಕಾರ, ರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ, ಹೊಯ್ಸಳ ಸಾಹಿತ್ಯ ಪ್ರಶಸ್ತಿ, ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಪ್ರತಿಭಾ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.