ಸಕಲೇಶಪುರ: ಕೊರೊನಾ ವೈರಸ್ ಹರಡದಂತೆ ನಿಗಾ ವಹಿಸಲು ದೇಶದಾದ್ಯಂತ ಲಾಕ್ಡೌನ್ ನಿಯಮ ಜಾರಿ ಮಾಡಲಾಗಿದೆ. ಈ ವೇಳೆ, ಯಾರೋ ಮನೆಯಿಂದ ಹೊರಬರದೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಆದರೆ ಹಾಸನದ ಸಕಲೇಶಪುರದಲ್ಲಿ ತರಕಾರಿ ಕೊಳ್ಳಲು ಜನ ಮುಗಿಬಿದ್ದ ಘಟನೆ ನಡೆದಿದೆ. ಜನರಿಗೆ ಒಳಿತು ಮಾಡುವ ಉದ್ದೇಶದಿಂದ ರೈತರಿಂದಲೇ ನೇರವಾಗಿ ಖರೀದಿಸಿದ್ದ ತರಕಾರಿಗಳನ್ನು ಇಲ್ಲಿನ ಟಿಎಪಿಸಿಎಂಎಸ್ ಆವರಣದಲ್ಲಿ ಮಾರುಕಟ್ಟೆರ ವ್ಯವಸ್ಥೆ ಮಾಡಲಾಗಿತ್ತು.
ಮೊದಲು ಕೇವಲ ಬೀನ್ಸ್ ಮಾತ್ರ ಮಾರುಕಟ್ಟೆಗೆ ಬಂದಿದ್ದ ಹಿನ್ನೆಲೆ ಜನರು ಅಷ್ಟಾಗಿ ಮಾರುಕಟ್ಟೆಗೆ ಆಗಮಿಸಿರಲಿಲ್ಲ. ಈಗ ಮಾರುಕಟ್ಟೆಯ ಸಮಯದ ಕೇವಲ ಬೆಳಗ್ಗೆ 9ರಿಂದ 12ಗಂಟೆಯವರೆಗೆ ಮಾತ್ರ ಇದ್ದು ಟೊಮಾಟೋ, ಈರುಳ್ಳಿ, ಆಲೂಗೆಡ್ಡೆ ಸೇರಿದಂತೆ ಇತರ ತರಕಾರಿಗಳು ಮಾರುಕಟ್ಟೆಗೆ ಬರುವಾಗ ತುಸು ವಿಳಂಬವಾಗಿತ್ತು. ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ತರಕಾರಿಗಾಗಿ ಜನ ಸರತಿ ಸಾಲಿನಲ್ಲಿ ನಿಂತಿದ್ದು ಆತಂಕಕಾರಿಯಾಗಿದ್ದು ಗುರುವಾರ ಪಟ್ಟಣದ ಎರಡು ಮೂರು ಕಡೆ ತರಕಾರಿ ಮಾರಾಟದ ವ್ಯವಸ್ಥೆ ಮಾಡುವ ಸಾಧ್ಯತೆಯಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಸಿಪಿಎಮ್ಎಸ್ ಅಧ್ಯಕ್ಷ ಲೋಹಿತ್ ಕೌಡಹಳ್ಳಿ, ಗ್ರಾಹಕರು ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಉಚ್ಚಂಗಿ ಭಾಗದಲ್ಲಿ ರೈತರಿಂದ ಬೀನ್ಸ್ ನೇರ ಖರೀದಿ ಮಾಡಿ ಇಲ್ಲಿ ಮಾರಾಟಕ್ಕೆ ಇಡಲಾಗಿದೆ. ಗುರುವಾರದಿಂದ ಬೇರೆ ಜಾಗದಲ್ಲೂ ಸಹ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.
ಇನ್ನು ಟಿಎಪಿಸಿಎಂಎಸ್ನ ಈ ಕಾರ್ಯಕ್ಕೆ ಜನರು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಈ ಕುರಿತು ಮಾತನಾಡಿದ ಗ್ರಾಹಕ ಮಲ್ನಾಡ್ ಜಾಕೀರ್ ತರಕಾರಿ ದರಗಳು ದುಬಾರಿಯಾಗಿದ್ದು, ಇಂತಹ ಸಂದರ್ಭದಲ್ಲಿ ಟಿಎಪಿಸಿಎಮ್ಎಸ್ ಈ ರೀತಿ ತರಕಾರಿ ಮಾರಾಟದ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದಿದ್ದಾರೆ.