ETV Bharat / state

ಅ.17ಕ್ಕೆ ಹಾಸನಾಂಬೆ ಉತ್ಸವ : ತರತುರಿಯಲ್ಲಿ ಸಾಗುತ್ತಿರುವ ಸಿದ್ಧತಾ ಕಾರ್ಯದ ವಿರುದ್ಧ ಜನರ ಆಕ್ರೋಶ

ಅ.17ರಂದು ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಕೇವಲ 5 ದಿನಗಳು ಮಾತ್ರ ಬಾಕಿ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಈ ವೇಳೆ ನಗರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಸಿದ್ಧತಾ ಕಾರ್ಯ ತರತುರಿಯಲ್ಲಿ ನಡೆಯುತ್ತಿದ್ದು, ಇದು ಎಷ್ಟರ ಮಟ್ಟಿಗೆ ಬಾಳಿಕೆ ಬರುತ್ತದೆ ಎಂದು ಸಾರ್ವನಜಿಕರು ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Oct 12, 2019, 11:02 AM IST

Hasanamba fair

ಹಾಸನ: ನಾಡಹಬ್ಬ ದಸರಾ ನಂತರ ನಗರದಲ್ಲಿ ನಡೆಯುವ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಆದರೆ ನಗರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಸಿದ್ಧತಾ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ಹಾಸನಾಂಬೆ ಉತ್ಸವಕ್ಕೆ ತರತುರಿಯಲ್ಲಿ ಸಾಗುತ್ತಿರುವ ಕಾಮಗಾರಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಅ.17ರಂದು ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಕೇವಲ 5 ದಿನಗಳು ಮಾತ್ರ ಬಾಕಿ ಇವೆ. ನಗರದಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಹಾಳಾಗಿದ್ದು, ರಸ್ತೆ ಕಾಮಗಾರಿ ತರಾತುರಿಯಲ್ಲಿ ನಡೆದಿದ್ದು, ಆತುರಕ್ಕೆ ಬಿದ್ದು ನಗರಸಭೆ ಅವಾಂತರವನ್ನು ಸೃಷ್ಟಿ ಮಾಡುತ್ತಿದೆ ಎಂಬ ಆತಂಕ ಜನರಲ್ಲಿ ಮೂಡಿದೆ.

ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಅರ್ಧ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಿದ್ದು, ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಸುರಸ್ತೆ ಕಾರ್ಯದಿಂದ ನೀರು ಸರಬರಾಜು ಪೈಪ್ ಒಡೆದಿದ್ದು, ಇದನ್ನು ಗಮನಿಸಿದ ಗುತ್ತಿಗೆದಾರ ಡಾಂಬರು ಹಾಕಿದ್ದು, ಡಾಂಬರು ಹಾಕಿದ ರಸ್ತೆಗೆ ನೀರು ನುಗ್ಗಿ ಕೆರೆಯಂತಾಗಿದೆ. ಇಷ್ಟು ದುಸ್ತರವಾಗಿ ಮಾಡಿರುವ ಈ ಕಾಮಗಾರಿ ಎಷ್ಟು ದಿನ ಬಾಳಿಕೆ ಬರುವುದು ಎಂಬುದು ಒಂದು ಪ್ರಶ್ನೆಯಾದರೆ, ಅಧಿಕಾರಿಗಳ ನಿರ್ಲಕ್ಷಕ್ಕೆ ಸರ್ಕಾರಿ ಹಣ ಪೋಲಾಗುತ್ತಿರುವುದು ಮತ್ತೊಂದು ದುರಂತವಾಗಿದೆ.

ಎನ್​ಆರ್ ವೃತ್ತದಿಂದ ಸಂತೆಪೇಟೆ ಮಾರ್ಗವಾಗಿ ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಶೇ.25ರಷ್ಟು ಕೆಲಸ ಬಾಕಿ ಇದೆ. ಉಳಿದಿರುವ ಕಾಮಗಾರಿ ಕೇವಲ 5 ದಿನಗಳಲ್ಲಿ ಮುಗಿಯುವುದೆ ಎಂಬ ಅನುಮಾನ ಉಂಟಾಗಿದೆ. ದೇವಾಲಯ ಸುತ್ತಮುತ್ತ ರಸ್ತೆಗಳಲ್ಲಿ ಅಪಘಾತ ಉಂಟು ಮಾಡುವ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ನಗರಸಭೆ ಅಧಿಕಾರಿಗಳು ಅಲ್ಲಲ್ಲಿ ಕಲ್ಲು ಮಣ್ಣು ಸುರಿದು ಕೆಲ ರಸ್ತೆಗಳು ಬಂದ್ ಮಾಡಿದ್ದಾರೆ.

ಹಾಸನಾಂಬೆ ದೇವಾಲಯಕ್ಕೆ ಪ್ರತಿವರ್ಷ ಕೋಟಿ ಕೋಟಿ ಆದಾಯ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಬರುತ್ತಿದ್ದರು ಜಿಲ್ಲಾಡಳಿತ ಮಾತ್ರ ದೇವಾಲಯದ ಅಭಿವೃದ್ಧಿಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನೂರಾರು ವರ್ಷಗಳಿಂದ ಅಪಾರ ಭಕ್ತರನ್ನು ದೇವಾಲಯ ಹೊಂದಿದ್ದರು ಇಲ್ಲಿಯವರೆಗೂ ಶಾಶ್ವತ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೇವಲ ಒಂದು ವಾರ ಮಾತ್ರ ಬಾಕಿ ಇರುವಾಗ ಕೆಲಸಗಳು ಮಾಡುತ್ತಿದ್ದು, ಜಿಲ್ಲಾಡಳಿತ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಹಾಸನ : ದಸರಾ ನಂತರ ನಡೆಯುವ ಹಾಸನದ ಹಾಸನದ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಆದರೆ ನಗರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಸಿದ್ಧತಾ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ತಿಂಗಳ 17ರ ಗುರುವಾರ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು ಅಂದೇ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯುತ್ತದೆ. ಇದಕ್ಕೆ ಕೇವಲ 5 ದಿನಗಳು ಮಾತ್ರ ಬಾಕಿ ಇವೆ. ನಗರದಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಹಾಳಾಗಿದ್ದು, ರಸ್ತೆ ಕಾಮಗಾರಿ ತರಾತುರಿಯಲ್ಲಿ ನಡೆದಿದ್ದು ಆತುರಕ್ಕೆ ಬಿದ್ದು ನಗರಸಭೆ ಅವಾಂತರವನ್ನು ಸೃಷ್ಟಿ ಮಾಡಿದೆ.

ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಅರ್ಧ ರಸ್ತೆಯಲ್ಲಿ ಮಾತ್ರ ಸಂಚರಿಸುವ ಅನಿವಾರ್ಯತೆ ಇದೆ. ಪರಿಣಾಮ ಇಡೀ ನಗರ ತುಂಬಾ ಇರುವ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ.

ದೇವಾಲಯಕ್ಕೆ ಸಂಪರ್ಕದ ಹೊಸಲೈನ್ ರಸ್ತೆ ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ಆದರೆ ರಸ್ತೆಯಲ್ಲಿ ನೀರು ಸರಬರಾಜು ಪೈಪ್ ಒಡೆದಿರುವುದನ್ನು ಗಮನಿಸಿದ ಗುತ್ತಿಗೆದಾರ ಡಾಂಬರು ಹಾಕಿಸಿದ್ದು ಅರ್ಧಗಂಟೆಯಲ್ಲೇ ಡಾಂಬರು ಹಾಕಿದ ರಸ್ತೆಗೆ ನೀರು ನುಗ್ಗಿ ಕೆರೆಯಂತಾಗಿದ್ದು, ಈ ಕಾಮಗಾರಿ ಎಷ್ಟು ದಿನ ಬಾಳಿಕೆ ಬರುವುದು ಎಂಬುದು ಒಂದು ಪ್ರಶ್ನೆಯಾದರೆ, ಅಧಿಕಾರಿಗಳ ನಿರ್ಲಕ್ಷಕ್ಕೆ ಸರ್ಕಾರಿ ಹಣ ಪೋಲಾಗುತ್ತಿರುವುದು ಮತ್ತೊಂದು ದುರಂತವಾಗಿದೆ.

ಎನ್‌ ಆರ್ ವೃತ್ತದಿಂದ ಸಂತೆಪೇಟೆ ಮಾರ್ಗವಾಗಿ ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಶೇಕಡಾ 25ರಷ್ಟು ಕೆಲಸ ಬಾಕಿ ಇದೆ. ಉಳಿದಿರುವ ಕಾಮಗಾರಿ 5 ದಿನಗಳಲ್ಲಿ ಮುಗಿಯುವುದು ಅನುಮಾನ ಆಗಿದೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಬರುವ ನಿರೀಕ್ಷೆಯಲ್ಲಿ ರಸ್ತೆ ಸರಿಪಡಿಸದಿದ್ದರೆ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ದೇವಾಲಯ ಸುತ್ತಮುತ್ತ ರಸ್ತೆಗಳು ಅಪಘಾತ ಉಂಟುಮಾಡುವ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ನಗರಸಭೆ ಅಧಿಕಾರಿಗಳು ಅಲ್ಲಲ್ಲಿ ಕಲ್ಲು ಮಣ್ಣು ಸುರಿದು ಕೆಲ ರಸ್ತೆಗಳು ಬಂದ್ ಆಗಿದೆ.

ಅಲ್ಲದೆ ಪ್ರತಿವರ್ಷ ಕೋಟಿ ಕೋಟಿ ಆದಾಯ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಬರುತ್ತಿದ್ದರು ಜಿಲ್ಲಾಡಳಿತ ಮಾತ್ರ ದೇವಾಲಯದ ಅಭಿವೃದ್ಧಿಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನೂರಾರು ವರ್ಷಗಳಿಂದ ಅಪಾರ ಭಕ್ತರನ್ನು ದೇವಾಲಯ ಹೊಂದಿದ್ದರು ಇಲ್ಲಿಯವರೆಗೂ ಶಾಶ್ವತ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೇವಲ ಒಂದು ವಾರ ಮಾತ್ರ ಬಾಕಿ ಇರುವಾಗ ಕೆಲಸಗಳು ಮಾಡುತ್ತಿದ್ದು, ಜಿಲ್ಲಾಡಳಿತ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವಾರು ಪವಾಡಗಳನ್ನು ಹೊಂದಿರುವ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಾಲಯಕ್ಕೆ ಕಳೆದ ವರ್ಷಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ.

ಇದನ್ನು ದೇವಾಲಯ ಅಭಿವೃದ್ಧಿಗೆ ಬಳಸುವ ಅವಕಾಶ ಇದ್ದರೂ ಜಿಲ್ಲಾಡಳಿತ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯ ಮತ್ತು ಹೊರ ರಾಜ್ಯದ ಲಕ್ಷಾಂತರ ಭಕ್ತರನ್ನು ಹೊಂದಿರುವ ದೇವಿಯ ದರ್ಶನಕ್ಕೆ ಯಾವುದೇ ತೊಂದರೆ ಆಗದೇ ಕಾಮಗಾರಿ ಶೀಘ್ರವಾಗಿ ಮುಗಿಸಲಿ, ಹಾಸನಾಂಬೆ ಉತ್ಸವ ಚೂರಿಯಾಗಿ ಜರುಗಲಿ ಎಂಬುದು ಜನರ ಆಶಯವಾಗಿದೆ.

ಬೈಟ್ 1: ಎಚ್.ವಿ. ಮಂಜುನಾಥ್, ಸ್ಥಳೀಯರು.

ಬೈಟ್ 2 : ಭಾರತಿ, ಸ್ಥಳೀಯರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.