ETV Bharat / state

ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಬೇಕಿದೆ ಆಧುನಿಕ ತಂತ್ರಜ್ಞಾನ: ಶಾಸಕ ಪ್ರೀತಂ ಗೌಡ ಪ್ರತಿಪಾದನೆ

author img

By

Published : Jan 23, 2020, 7:48 PM IST

ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿಗಳ ಕಸ ವಿಲೇವಾರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ ಅಗತ್ಯವಿದ್ದು, ಅಗಿಲೆಯಲ್ಲಿ ಪ್ರಾಯೊಗಿಕವಾಗಿ ಇದನ್ನು ಪ್ರಾರಂಭಿಸುವಂತೆ ಶಾಸಕ ಪ್ರೀತಂ ಜೆ ಗೌಡ ತಿಳಿಸಿದ್ದಾರೆ.

Modern technology is essential to the permanent solution of the garbage disposal problem: MLA, Preetam J Gowda
ಕಸ ವಿಲೇವಾರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನ ಅಗತ್ಯ: ಶಾಸಕ ಪ್ರೀತಂ ಜೆ ಗೌಡ

ಹಾಸನ: ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿಗಳ ಕಸ ವಿಲೇವಾರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ ಅಗತ್ಯವಿದ್ದು, ಅಗಿಲೆಯಲ್ಲಿ ಪ್ರಾಯೊಗಿಕವಾಗಿ ಇದನ್ನು ಪ್ರಾರಂಭಿಸುವಂತೆ ಶಾಸಕ ಪ್ರೀತಂ ಜೆ ಗೌಡ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಕಸ ವಿಂಗಡಣೆ ಮತ್ತು ವಿಲೇವಾರಿ ಹೊಸ ತಂತ್ರಜ್ಞಾನ ಬಳಕೆ ಕುರಿತು ಚರ್ಚೆ ನಡೆಸಲಾಯಿತು.

ಕಸ ವಿಲೇವಾರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನ ಅಗತ್ಯ: ಶಾಸಕ ಪ್ರೀತಂ ಜೆ ಗೌಡ ಪ್ರತಿಪಾದನೆ

ಈ ವೇಳ ಮಾತನಾಡಿದ ಟ್ರಾಶ್‌ಕಾನ್ ಸಂಸ್ಥೆಯ ಸಿಇಒ ನಿವೇಧ ಮಾತನಾಡಿ, ಹಸಿ ಹಾಗೂ ಒಣ ಕಸಗಳ ವರ್ಗೀಕರಣ ಮತ್ತು ಅದನ್ನು ಜೈವಿಕ ಗೊಬ್ಬರ,ಜೈವಿಕ ಇಂಧನ ಹಾಗೂ ಇತರ ಉಪ ಉತ್ಪನ್ನಗಳನ್ನಾಗಿ ಪರಿವರ್ತಿಸಿ, ಬಳಸುವ ಬಗೆ ಹಾಗೂ ಅದಕ್ಕೆ ತಮ್ಮ ಸಂಸ್ಥೆಯಲ್ಲಿರುವ ಯಾಂತ್ರಿಕ ಸಲಕರಣೆಗಳ ಬಗ್ಗೆ ವಿವರಿಸಿದರು.

ಶಾಸಕ ಪ್ರೀತಂ ಜೆ ಗೌಡ ಮಾತನಾಡಿ, ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿಗಳ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಬೇಕಿದೆ. ಇದಕ್ಕಾಗಿ ಸ್ವಚ್ಛ ಭಾರತ್ ಯೋಜನೆಯಡಿ ಜಿಲ್ಲಾ ಪಂಚಾಯ್ತಿಯಲ್ಲಿ 5.15 ಕೋಟಿ ರೂಪಾಯಿ ಲಭ್ಯವಿದೆ ಎಂದರು. ಇದಲ್ಲದೇ, ಪ್ರತಿ ಗ್ರಾಮ ಪಂಚಾಯ್ತಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ತಲಾ 20 ಲಕ್ಷ ರೂಪಾಯಿಗಳನ್ನ ಕೇಂದ್ರ ಸರ್ಕಾರ ಒದಗಿಸುತ್ತದೆ. ಇದನ್ನ ಒಟ್ಟು ಸೇರಿಸಿ ಅಗಿಲೆಯಲ್ಲಿ ಸಮಗ್ರ ಕಸವಿಲೇವಾರಿ ವ್ಯವಸ್ಥೆ ಮಾಡಬಹುದು ಅಥವಾ ಐದಾರು ಗ್ರಾಮ ಪಂಚಾಯ್ತಿಗಳನ್ನ ಸೇರಿಸಿ ಒಂದೊಂದು ವ್ಯವಸ್ಥಿತ ಘಟಕ ಸ್ಥಾಪಿಸಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಮೊದಲಿಗೆ ಜಿಲ್ಲೆಯ ಅಧಿಕಾರಿಗಳ ತಂಡ ಬೆಂಗಳೂರಿಗೆ ತೆರಳಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಕಸವಿಲೇವಾರಿ ಯಂತ್ರಗಳು ಮತ್ತು ಅದರ ಕಾರ್ಯಕ್ಷಮತೆ ಮತ್ತು ಹಾಸನ ನಗರಕ್ಕೆ ಇದರಿಂದಾಗಬಹುದಾದ ಅನುಕೂಲಗಳನ್ನು ಪರಿಶೀಲಿಸಿ ಬರುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಅಧಿಕಾರಿಗಳ ಭೇಟಿ ನಂತರ ಅವರ ಅಭಿಪ್ರಾಯ ಆಧರಿಸಿ ಮೊದಲಿಗೆ ಒಂದೆರಡು ಸಲಕರಣೆಗಳನ್ನು ಅಳವಡಿಸಿ ಅದರ ಫಲಶೃತಿ ಪರಿಶೀಲಿಸಿ ಇತರ ಯಾಂತ್ರಿಕ ಅಳವಡಿಕೆಗೆ ನಿರ್ಧಾರ ಮಾಡಬಹುದಾಗಿದೆ ಎಂದರು.

ಚರ್ಚೆಯಲ್ಲಿ ಜನವರಿನ 28 ರಂದು ಬಿಬಿಎಂಪಿಗೆ ಅಧಿಕಾರಿಗಳ ತಂಡ ಭೇಟಿ ಮಾಡಿ ಪರಿಶೀಲಿಸಲು ಸಂಸ್ಥೆಯಲ್ಲಿ ತೀರ್ಮಾನಿಸಲಾಯಿತು.

Intro:
ಹಾಸನ  : ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿಗಳ ಕಸ ವಿಲೇವಾರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ ಅಗತ್ಯವಿದ್ದು, ಅಗಿಲೆಯಲ್ಲಿ ಪ್ರಾಯೊಗಿಕವಾಗಿ ಇದನ್ನು ಪ್ರಾರಂಭಿಸುವಂತೆ ಶಾಸಕ ಪ್ರೀತಂ ಜೆ ಗೌಡ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಕಸ ವಿಂಗಡಣೆ ಮತ್ತು ವಿಲೇವಾರಿ ಹೊಸ ತಂತ್ರಜ್ಞಾನ ಬಳಕೆ ಕುರಿತು ಚರ್ಚೆ ಮತ್ತು ಪವರ್ ಪಾಯಿಂಟ್ ಪ್ರೆಸೆಂಟೇಷನ್ ನಡೆಸಲಾಯಿತು.
ಟ್ರ್ಯಾಷ್‌ಕಾನ್ ಸಂಸ್ಥೆಯ ನಿವೇಧ ಮಾತನಾಡಿ, ಹಸಿ ಹಾಗೂ ಒಣ ಕಸಗಳ ವರ್ಗೀಕರಣ ಮತ್ತು ಅದನ್ನು ಜೈವಿಕ ಗೊಬ್ಬರ, ಜೈವಿಕ ಇಂಧನ ಹಾಗೂ ಇತರೆ ಉಪ ಉತ್ಪನ್ನಗಳನ್ನಾಗಿ ಪರಿವರ್ತಿಸಿ ಬಳಸುವ ಬಗೆ ಹಾಗೂ ಅದಕ್ಕೆ ತಮ್ಮ ಸಂಸ್ಥೆಯಲ್ಲಿರುವ ಯಾಂತ್ರಿಕ ಸಲಕರಣೆಗಳ ಬಗ್ಗೆ ವಿವರಿಸಿದರು.
ಶಾಸಕ ಪ್ರೀತಂ ಜೆ ಗೌಡ ಮಾತನಾಡಿ, ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿಗಳ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಬೇಕಿದೆ. ಸ್ವಚ್ಛ ಭಾರತ್ ಯೋಜನೆಯಡಿ ಜಿಲ್ಲಾ ಪಂಚಾಯ್ತಿಯಲ್ಲಿ ೩.೧೫ ಕೋಟಿ ರೂಪಾಯಿ ಲಭ್ಯವಿದೆ ಎಂದರು.
ಇದಲ್ಲದೆ ಪ್ರತಿ ಗ್ರಾಮ ಪಂಚಾಯ್ತಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ತಲಾ ೨೦ ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ ಇದನ್ನು ಒಟ್ಟು ಸೇರಿಸಿ ಅಗಿಲೆಯಲ್ಲಿ ಸಮಗ್ರ ಕಸವಿಲೇವಾರಿ ವ್ಯವಸ್ಥೆ ಮಾಡಬಹುದು ಅಥವಾ ಐದಾರು ಗ್ರಾಮ ಪಂಚಾಯ್ತಿಗಳನ್ನು ಸೇರಿಸಿ ಒಂದೊಂದು ವ್ಯವಸ್ಥಿತ ಘಟಕ ಸ್ಥಾಪಿಸಬಹುದಾಗಿದೆ ಎಂದು  ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಮೊದಲಿಗೆ ಜಿಲ್ಲೆಯ ಅಧಿಕಾರಿಗಳ ತಂಡ ಬೆಂಗಳೂರಿಗೆ ತೆರಳಿ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಕಸವಿಲೇವಾರಿ ಯಂತ್ರಗಳು ಮತ್ತು ಅದರ ಕಾರ್ಯಕ್ಷಮತೆ ಮತ್ತು ಹಾಸನ ನಗರಕ್ಕೆ ಇದರಿಂದಾಗಬಹುದಾದ ಅನುಕೂಲಗಳನ್ನು ಪರಿಶಿಲಿಸಿ ಬರುವಂತೆ ಸೂಚನೆ ನೀಡಿದರು.
ತಾವು ಸಹ ಅಧಿಕಾರಿಗಳ ತಂಡದೊಂದಿಗೆ ಬಿ.ಬಿ.ಎಂ.ಪಿ. ಕಸ ವಿಲೇವಾರಿ ಘಟಕವನ್ನು ಪರಿಶೀಲಿಸುವುದಾಗಿ ಶಾಸಕ ಪ್ರೀತಂ ಜೆ ಗೌಡ ತಿಳಿಸಿದರಲ್ಲದೆ, ಒಟ್ಟಾರೆ ನಗರ ಹಾಗೂ ಅದರ ಅಕ್ಕ-ಪಕ್ಕದ ಗ್ರಾಮ ಪಂಚಾಯ್ತಿಗಳಲ್ಲಿ ಯಾವುದೇ ಅನೈರ್ಮಲ್ಯ ಸಮಸ್ಯೆ ಮುಂದುವರಿಯದಂತೆ ಗಮನಹರಿಸುವುದು ನಮ್ಮ ಆಧ್ಯತೆಯಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಅಧಿಕಾರಿಗಳ ಭೇಟಿ ನಂತರ ಅವರ ಅಭಿಪ್ರಾಯ ಆಧರಿಸಿ ಮೊದಲಿಗೆ ಒಂದೆರಡು ಸಲಕರಣೆಗಳನ್ನು ಅಳವಡಿಸಿ ಅದರ ಫಲಶೃತಿ ಪರಿಶಿಲಿಸಿ ಇತರ ಯಾಂತ್ರಿಕ ಅಳವಡಿಕೆಗೆ ನಿರ್ಧಾರ ಮಾಡಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ಕಸ ವಿಲೇವಾರಿ ಆಧುನಿಕ ತಂತ್ರಜ್ಞಾನ ಬಳಕೆ ಅಗತ್ಯ ಆದರೆ ಸಂಪೂರ್ಣ ಕಸವನ್ನು ಸದ್ಭಳಕೆ, ಸಾಧನಗಳನ್ನಾಗಿ ಪರಿವರ್ತಿಸುವುದನ್ನು ಖಾತರಿಪಡಿಸಿಕೊಳ್ಳಬೇಕಿದೆ. ಸ್ಥಳೀಯ ಸಂಸ್ಥೆಗಳಿಗೆ ಈ ಹೊರೆ ಉಳಿಯದಿದ್ದರೆ, ಇಂತಹ ಯೋಜನೆಗಳನ್ನು ಜಾರಿಗೆ ತರುವುದು ಸಮರ್ಪಕ ವೆನಿಸುತ್ತದೆ ಎಂದರು.
ಜ.೨೮ ರಂದು ಬಿ.ಬಿ.ಎಂ.ಪಿ.ಗೆ ಅಧಿಕಾರಿಗಳ ತಂಡ ಭೇಟಿ ಮಾಡಿ ಪರಿಶೀಲಿಸಲು ಸಂಸ್ಥೆಯಲ್ಲಿ ತೀರ್ಮಾನಿಸಲಾಯಿತು.
     ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿಸುವ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು, ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಸಹ ತ್ಯಾಜ್ಯ ವಸ್ತುಗಳ ಸೂಕ್ತ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಟ್ರಾಶ್‌ಕಾನ್ ಎಂಬ ಕಂಪನಿಯು ತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆಗೆ ಹೊಸ ಮಾರ್ಗ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ.
ಟ್ರಾಶ್‌ಕಾನ್ ಕಂಪನಿಯು ತ್ಯಾಜ್ಯ ವಸ್ತುಗಳಲ್ಲಿ ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕಿಸಿ ಅವುಗಳಲ್ಲಿರುವ ನೀರಿನ ಅಂಶವನ್ನು ತೆಗೆದು, ಪ್ರತ್ಯೇಕಿಸಲಾದ ತ್ಯಾಜ್ಯದಿಂದ Bio- Briquettes (ಇಟ್ಟಿಗೆಗಳು) ಹಾಗೂ Board   ಗಳನ್ನು ತಯಾರಿಸಿ ಅವುಗಳ ಮರುಬಳಕೆ ಮಾಡುವುದರಿಂದ ತ್ಯಾಜ್ಯ ವಸ್ತುಗಳನ್ನು ಶಾಶ್ವತವಾಗಿ ನಿರ್ವಹಣೆ ಮಾಡುಬಹುದಾಗಿದೆ ಎಂದು ತಮ್ಮ ಪವರ್ ಪಾಯಿಂಟ್ ಪ್ರೆಸೆಂಟೇಶನ್ ನಲ್ಲಿ ಕಂಪನಿಯ ಸಿ.ಇ.ಒ ಹಾಗೂ ಸಂಸ್ಥಾಪಕ ನಿವೇಧ ಆರ್.ಎಂ ಸಭೆಗೆ ವಿವಿರಿಸಿದರು.

ಬೈಟ್ ೧ : ಆರ್. ಗಿರೀಶ್, ಜಿಲ್ಲಾಧಿಕಾರಿ.

ಬೈಟ್ ೨ : ಪ್ರೀತಂ ಜೆ. ಗೌಡ, ಶಾಸಕ.

ಬೈಟ್ ೩ : ನಿವೇಧ ಟ್ರ್ಯಾಷ್‌ಕಾನ್ ಸಂಸ್ಥೆ ಅಧಿಕಾರಿ.  

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.