ETV Bharat / state

ವರ್ಗಾವಣೆಗೊಂಡ ತಹಶೀಲ್ದಾರ್​.. ಅಧಿಕಾರಿಯ ಕಾರ್ಯ ನೆನೆದು ವೇದಿಕೆ ಮೇಲೆ ಕಣ್ಣೀರಿಟ್ಟ ಶಾಸಕ - etv bharat karnataka

ವರ್ಗಾವಣೆಗೊಂಡ ದಕ್ಷ ತಹಶೀಲ್ದಾರ್ - ಕೆಎಎಸ್​ ಅಧಿಕಾರಿ ಕಾರ್ಯವೈಖರಿ ನೆನೆದು ಕಣ್ಣೀರಿಟ್ಟ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ- ಅರಕಲಗೂಡು ತಹಶೀಲ್ದಾರ್ ಶ್ರೀನಿವಾಸ್​ಗೆ ಬೀಳ್ಕೊಡುಗೆ.

MLA was in tears
ವರ್ಗಾವಣೆಗೊಂಡ ತಹಶೀಲ್ದಾರ್​ ಕಾರ್ಯ ನೆನೆದು ವೇದಿಕೆ ಮೇಲೆ ಕಣ್ಣೀರಿಟ್ಟ ಶಾಸಕ!
author img

By

Published : Jan 11, 2023, 6:58 PM IST

ತಹಶೀಲ್ದಾರ್ ಶ್ರೀನಿವಾಸ್​ಗೆ ಬೀಳ್ಕೊಡುಗೆ ಸಮಾರಂಭ

ಹಾಸನ: ಅಧಿಕಾರಿಯೊಬ್ಬರು ವರ್ಗಾವಣೆ ಆಗಿದ್ದಕ್ಕೆ ಕ್ಷೇತ್ರದ ಶಾಸಕರೇ ಕಣ್ಣೀರಿಟ್ಟಂತಹ ಅಪರೂಪದ ಮತ್ತು ವಿಶೇಷ ಪ್ರಸಂಗ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಈ ರೀತಿಯ ಘಟನೆ ನಡೆದಿದೆ. ವರ್ಗಾವಣೆಗೊಂಡ ಅಧಿಕಾರಿಯೊಬ್ಬರನ್ನ ಬೀಳ್ಕೊಡುವ ಸಂದರ್ಭದಲ್ಲಿ ಶಾಸಕ ವೇದಿಕೆಯ ಭಾಷಣದಲ್ಲಿ ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ. ಸಾಮನ್ಯವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಸಂಘರ್ಷವನ್ನು ನಾವು ಕೇಳಿರುತ್ತಿವೆ ಆದರೆ ಈ ಘಟನೆ ಅಧಿಕಾರಿ ಮತ್ತು ಜನಪ್ರತಿನಿಧಿಯ ನಡುವೆನ ಅವಿನಾಭಾವ ಸಂಬಂಧವನ್ನು ತೋರಿಸಿಕೊಟ್ಟಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ, ಕೆ ಆರ್ ಶ್ರೀನಿವಾಸ್ ಮುಂಬಡ್ತಿ ಪಡೆದು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮತ್ತು ಅರಕಲಗೂಡು ಅಭಿಮಾನಿಗಳ ಸಂಘ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ವಿವಿಧ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ತಹಶೀಲ್ದಾರ್ ಶ್ರೀನಿವಾಸ್ ದಂಪತಿಗೆ ಮತ್ತು ಪೋಷಕರಿಗೆ ಹೂವಿನ ಮಳೆಗರೆದು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ಎ ಟಿ ರಾಮಸ್ವಾಮಿ ಅವರು 'ನನ್ನ ಆಪ್ತ ಮೀತ್ರನನ್ನು ಕಳುಹಿಸಿಕೊಡುತ್ತಿದ್ದೇನೆಂಬ ದುಃಖ ನನ್ನಲಿದೆ. ಶ್ರೀನಿವಾಸ್ ಅವರು ನಮ್ಮ ತಾಲೂಕಿಗೆ ತಹಶೀಲ್ದಾರ್​ ಆಗಿ ಬಂದ ನಂತರ 4200 ಪೌತಿ ಖಾತೆಗಳನ್ನು ಮಾಡಿದ್ದೀರಿ. ಅದನ್ನು ನಾನು ಸ್ಮರಿಸುತ್ತೇನೆ' ಎಂದರು.

ಅರಕಲಗೂಡು ತಾಲೂಕಿನ ಜನತೆ ಅವರನ್ನು ಯಾವತ್ತೂ ಮರೆಯುವುದಿಲ್ಲ: ನಾನು ಇತಿಹಾಸದಲ್ಲಿಯೇ ತಾಲೂಕು ಕಚೇರಿಗೆ ಬಂದಂತಹ ವ್ಯಕ್ತಿಗಳಿಗೆ ಆತ್ಮೀಯತೆಯಿಂದ ಬರಮಾಡಿಕೊಂಡು ಕಾಫಿ, ಟೀ ನೀಡಿ ಉಪಚರಿಸುವ ವ್ಯಕ್ತಿಯನ್ನು ನೋಡಿರುವುದು ಇದೇ ಮೊದಲ ಬಾರಿ. ಇದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅಂತಹ ವ್ಯಕ್ತಿ ತಾಲೂಕಿನಲ್ಲಿ ಸಾಕಷ್ಟು ರೈತಪರ ಕಾರ್ಯಗಳನ್ನು ಮಾಡಿದ್ದಾರೆ. ನೀವು ನಮ್ಮ ಮನಸ್ಸಿನಲ್ಲಿ ಉಳಿಯಲಿಲ್ಲ, ಹೃದಯದಲ್ಲಿ ಉಳಿದಿದ್ದೀರಿ. ಅರಕಲಗೂಡು ತಾಲೂಕಿನ ಜನತೆ ಅವರನ್ನು ಯಾವತ್ತೂ ಮರೆಯುವುದಿಲ್ಲ ಎಂದು ಮಾತು ಮುಂದುವರೆಸಿದಾಗ ಶಾಸಕರು ಒಂದು ಕ್ಷಣ ಗದ್ಗದಿತರಾಗಿ ದುಃಖದಿಂದ ಕಣ್ಣೀರಿಟ್ಟಿದ್ದಾರೆ.

ತಮ್ಮ ಪ್ರೀತಿಯನ್ನು ಎಂದು ಮರೆಯಲು ಸಾಧ್ಯವಿಲ್ಲ: ನನ್ನಗೆ ಆತ್ಮೀಯವಾದ ಬೀಳ್ಕೊಡುಗೆ ಏರ್ಪಡಿಸಿರುವುದಕ್ಕೆ ನಾನು ಅಭಾರಿಯಾಗಿದ್ದೇನೆ. ತಮ್ಮ ಪ್ರೀತಿಯನ್ನು ಎಂದು ಮರೆಯಲು ಸಾಧ್ಯವಿಲ್ಲ. ಒಂದು ವರ್ಷ ಆಡಳಿತದಲ್ಲಿ ಆದ್ಯತೆ ನೀಡಿದ್ದು ಭ್ರಷ್ಟಾಚಾರ ಮುಕ್ತ ಮತ್ತು ಲಂಚ ಮುಕ್ತ ಆಡಳಿತ ನೀಡಬೇಕು ಎಂದಾಗಿತ್ತು. ನಾನು ಕೂಡ ತುಮಕೂರು ಜಿಲ್ಲೆಯವನು, ನನ್ನ ತಂದೆ ಒಬ್ಬ ರೈತ, ತಾಲೂಕು ಕಚೇರಿಗೆ ಒಬ್ಬ ರೈತ ಹೋದರೆ ಯಾವ ರೀತಿಯ ಕಷ್ಟ ಇರುತ್ತೆ ಎಂಬುದು ನನಗೆ ಗೊತ್ತಿದೆ. ಅದಕ್ಕೆ ಮುಂದಿನ ದಿನಗಳಲ್ಲಿ ರೈತರಿಗೆ ಆ ಕಷ್ಟ ಬರಬಾರದು. ನನ್ನ ಕಚೇರಿಗೆ ಬರುವ ಯಾವುದೇ ರೈತರನ್ನು ನಾನು ದೇವರಂತೆ ಭಾವಿಸಿ ಸತ್ಕರಿಸುತ್ತೇನೆ. ಹೆಣ್ಣು ಮಗು ಹೇಗೆ ತವರು ಮನೆ ಬಿಟ್ಟು ಹೋಗುವಾಗ ಎಷ್ಟು ನೋವಾಗುತ್ತದೆಯೋ ಅಷ್ಟು ನೋವು ನನಗಾಗಿದೆ ಎಂದು ಶಾಸಕರ ಮಾತುಗಳನ್ನು ನೆನೆದು ತಹಶೀಲ್ದಾರ್ ಶ್ರೀನಿವಾಸ್ ಅವರೂ ಸಹ ಕಣ್ಣೀರಿಟ್ಟರು.

ಇದನ್ನೂ ಓದಿ:ಹಾಸನ: ಸನ್ನಡತೆ ಆಧಾರದಲ್ಲಿ 186 ರೌಡಿಶೀಟರ್​ಗಳಿಗೆ ಹೊಸ ಬದುಕಿಗೆ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.