ಹಾಸನ : ಭಾರತದಲ್ಲಿ ಹಿಂದೂಗಳು ಮೂರನೇ ಸ್ಥಾನದಲ್ಲಿದ್ದು, ಕ್ರಿಶ್ಚಿಯನ್ ಧರ್ಮ ಮೊದಲಿಗರಿದ್ದಾರೆ. ಮುಸ್ಲಿಂ ಪಂಗಡವನ್ನ ಎದುರಾಕಿಕೊಂಡ್ರೆ ನಿಮ್ಮನ್ನ ಕೋಳಿಗಳನ್ನ ಕೂಡಿಹಾಕುವ ಹಾಗೆ ನಿಮ್ಮನ್ನ ಕೂಡಿಹಾಕುತ್ತಾರೆ. ಅವರಿಗೆ ಅಂತಾರಾಷ್ಟ್ರೀಯ ನಂಟಿದೆ. ಹುಷಾರಾಗಿರುವ ಎಂದು ಅರಸೀಕೆರೆಯ ಶಾಸಕ ಕೆ.ಎಂ.ಶಿವಲಿಂಗಗೌಡ ತಮ್ಮ ಕಾರ್ಯಕರ್ತರಿಗೆ ಹೇಳಿದ್ದಾರೆ.
ನಿಜಾಮುದ್ದೀನ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕಳೆದ ಒಂದೂವರೆ ತಿಂಗಳ ಹಿಂದಿನಿಂದಲೇ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ರು. ಅಲ್ಲಿಗೆ ಸಾಮಾನ್ಯ ಮುಸ್ಲಿಮರು ಅಲ್ಲದೇ ದೇಶದ ಪ್ರಮುಖ ಮುಸ್ಲಿಂ ಗಣ್ಯರು ಆಗಮಿಸಿದ್ದರು. ಕಲಬುರಗಿಯಲ್ಲಿ ಸಾವಾದ ಬಳಿಕವೇ ಸರ್ಕಾರ ಇದರ ಬಗ್ಗೆ ಜಾಗೃತಿ ವಹಿಸಿಬೇಕಿತ್ತು. ಮತ್ತು ದೆಹಲಿಯ ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ಆಡಳಿತ ಇದನ್ನ ಪ್ರಶ್ನೆ ಮಾಡಬೇಕಿತ್ತು ಎಂದಿದ್ದಾರೆ.
ಇನ್ನು ಮುಸ್ಲಿಂ ಧರ್ಮದವರನ್ನ ಈ ದೇಶದಿಂದ ಬಿಟ್ಟು ಓಡಿಸೋದಿಕ್ಕಾಗುತ್ತಾ...? ಆಗಲ್ಲ ಎಂದ ಮೇಲೆ ಸರ್ವಾಂಗವನ್ನ ಮುಚ್ಚಿಕೊಂಡು ಕೂತುಕೊಳ್ಳಿ ಎಂದು ಅವರು ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.