ETV Bharat / state

ರಾಜಘಟ್ಟದ ಯುಜಿಡಿ ಕಾಮಗಾರಿಗೆ ಶಾಸಕ ಪ್ರೀತಮ್ ಗೌಡ ಚಾಲನೆ - ರಾಜಘಟ್ಟದ ಯುಜಿಡಿ ಕಾಮಗಾರಿ

ನನೆಗುದಿಗೆ ಬಿದ್ದಿದ್ದ ರಾಜಘಟ್ಟ ಪ್ರದೇಶದಲ್ಲಿನ ಯುಜಿಡಿ ಕಾಮಗಾರಿಗೆ ಶಾಸಕ ಪ್ರೀತಮ್ ಜೆ. ಗೌಡ ಚಾಲನೆ ನೀಡಿದರು. 35 ಲಕ್ಷ ರೂ.ಗಳ ಯುಜಿಡಿ ಸಂಪರ್ಕ ಕಾಮಗಾರಿಯಿಂದ ಈ ಭಾಗದ ಕೊಳಚೆ ನೀರಿನ ಸಮಸ್ಯೆ ಬಗೆಹರಿಯಲಿದೆ.

MlA Pretam Gowda inauguration UGD project
ರಾಜಘಟ್ಟದ ಯುಜಿಡಿ ಕಾಮಗಾರಿಗೆ ಶಾಸಕ ಪ್ರೀತಮ್ ಗೌಡ ಚಾಲನೆ
author img

By

Published : May 14, 2020, 5:59 PM IST

ಹಾಸನ: ನಗರದ ಸಮೀಪವಿರುವ ರಾಜಘಟ್ಟದಲ್ಲಿ 35 ಲಕ್ಷ ರೂ.ಗಳ ಯುಜಿಡಿ ಕಾಮಗಾರಿಗೆ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಗುದ್ದಲಿ ಪೂಜೆ ನೆರವೇರಿಸಿದರು.

ರಾಜಘಟ್ಟದ ಯುಜಿಡಿ ಕಾಮಗಾರಿಗೆ ಶಾಸಕ ಪ್ರೀತಮ್ ಗೌಡ ಚಾಲನೆ
ನಂತರ ಮಾತನಾಡಿದ ಅವರು, ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಂದ ರಾಜಘಟ್ಟ ಭಾಗದ ನಗರಸಭೆ ಸದಸ್ಯ ರಕ್ಷಿತ್ ಮತ್ತು ಮಂಜೆಗೌಡ, ಗವೀಗೌಡ ಹಾಗೂ ಇಲ್ಲಿನ ಜನರು ಯುಜಿಡಿ ಸಮಸ್ಯೆ ಎದುರಿಸುತ್ತಿದ್ದರು. ಗವೇನಹಳ್ಳಿ, ರಾಜಘಟ್ಟ ಹಾಗೂ ಪ್ರಗತಿ ನಗರದ ಎಲ್ಲಾ ಕೊಳಚೆ ನೀರು ಚನ್ನಪಟ್ಟಣ ಕೆರೆಗೆ ಸೇರಿ ಕಲುಷಿತವಾಗಿತ್ತು. ಹಾಸನ ನಗರಸಭೆಯು ಇದನ್ನು ಚಾಲೇಂಜ್​ ಆಗಿ ತೆಗೆದುಕೊಂಡು ಸರಿಪಡಿಸಲು ಮುಂದಾಗಿದೆ. ಈ ಕೊಳಚೆ ನೀರನ್ನು ಕೆರೆ ಪಕ್ಕದಲ್ಲಿರುವ ಯುಜಿಡಿಗೆ ಸಂಪರ್ಕ ಮಾಡುವ ಕಾಮಗಾರಿ ನಿರ್ವಹಿಸುತ್ತಿದೆ ಎಂದರು. 35 ಲಕ್ಷ ರೂ.ಗಳ ಯುಜಿಡಿ ಸಂಪರ್ಕ ಕಾಮಗಾರಿಯಿಂದ ಈ ಭಾಗದ ಕೊಳಚೆ ನೀರಿನ ಸಮಸ್ಯೆ ಬಗೆಹರಿಯಲಿದೆ. ಶೀಘ್ರ ಕಾಮಗಾರಿ ಮುಗಿಸಿ ಮುಂದೆ ಇನ್ನು 75 ಲಕ್ಷ ರೂ.ಗಳ ಕಾಮಗಾರಿಗಳನ್ನು ಇನ್ನೊಂದು ತಿಂಗಳಲ್ಲಿ ಕೈಗೆತ್ತಿಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇನ್ನು ಖಾಸಗಿ ಲೇಔಟ್‌ದಾರರು ಬಫರ್ ಝೋನ್​ ಒತ್ತುವರಿ ಮಾಡಿಕೊಂಡು ಸಿಡಿಪಿ ರಸ್ತೆಯ ಜಾಗದಲ್ಲಿ ರಸ್ತೆ ಮಾಡಲು ಹೊರಟಿರುವ ಬಗ್ಗೆ ಇಲ್ಲಿನ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ. ತಕ್ಷಣ ಸರ್ವೆ ಮಾಡಿಸಿ ಹಳೆ ನಕ್ಷೆಯನ್ನು ಪರಿಶೀಲಿಸಲು ಆದೇಶ ಮಾಡಿದ್ದೇನೆ. ಏನಾದರೂ ರಸ್ತೆ ಒತ್ತುವರಿಯಾಗಿದ್ದರೆ ಅವರಿಗೆ ನೋಟಿಸ್ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.