ಹಾಸನ: ರಾಜಕೀಯ ದ್ವೇಷಕ್ಕೆ ಉದ್ಘಾಟನೆಗೆ ಸಿದ್ಧಗೊಂಡಿದ್ದ ಫುಡ್ ಕೋರ್ಟ್ ನಾಮಫಲಕದಲ್ಲಿದ್ದ ಬಿಜೆಪಿ ಶಾಸಕ ಪ್ರೀತಮ್ ಗೌಡರ ಭಾವಚಿತ್ರವನ್ನು ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಕಿಡಿಗೇಡಿಗಳು ಪ್ರೀತಮ್ ಗೌಡರ ಭಾವಚಿತ್ರವನ್ನು ಹಾನಿ ಮಾಡಿವಿಕೃತಿ ಮೆರೆದು ಎಸ್ಕೇಪ್ ಆಗಿದ್ದಾರೆ. ಹಾಸನ ನಗರದ ಎಂ.ಜಿ.ರಸ್ತೆಯ ಕ್ರೀಡಾಂಗಣದ ಸಮೀಪ ನೂತನವಾಗಿ ಪುಡ್ ಕೋರ್ಟ್ ಮಾಡಲಾಗುತ್ತಿದೆ. ಇಲ್ಲಿ ಅಳವಡಿಸಲಾಗಿದ್ದ ಬೋರ್ಡ್ಗೆ ಹಾನಿ ಮಾಡಿರುವ ಕಿಡಿಗೇಡಿಗಳು ಅದರಲ್ಲಿದ್ದ ಶಾಸಕ ಪ್ರೀತಮ್ ಗೌಡ ಭಾವಚಿತ್ರವನ್ನು ಕಲ್ಲಿನಿಂದ ಹೊಡೆದು ಹಾನಿ ಮಾಡಿದ್ದಾರೆ.
ನಗರದ ವಿವಿಧೆಡೆ ಬೀದಿ ಬದಿಯಲ್ಲಿ ಆಹಾರ ಪದಾರ್ಥ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಕಳೆದ ವರ್ಷ ನಗರದ ಸಾಲಗಾಮೆ ರಸ್ತೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಒಳಗೊಂಡ ಅತ್ಯಾಧುನಿಕ ಫುಡ್ ಕೋರ್ಟ್ ನಿರ್ಮಾಣ ಅಗಿತ್ತು. ಅದೇ ರೀತಿದೆ ಎಂ.ಜಿ.ರಸ್ತೆಯಲ್ಲಿಯೂ ಪುಡ್ ಕೋರ್ಟ್ ನಿರ್ಮಾಣ ಹಂತದಲ್ಲಿದ್ದು, ಉದ್ಘಾಟನೆಗೆ ಸಿದ್ದವಾಗಿದ್ದ ಲೈಟಿಂಗ್ ಬೋರ್ಡನ್ನು ಕಿಡಿಗೇಡಿಗಲು ತಡರಾತ್ರಿ ಹಾನಿ ಮಾಡಿದ್ದಾರೆ. ನೆರಳು, ನೀರು, ಸುಸಜ್ಜಿತ ವ್ಯವಸ್ಥೆಯೊಂದಿಗೆ ಒಂದೇ ಕಡೆ ಜನರಿಗೆ ಅನುಕೂಲ ಆಗೋ ನಿಟ್ಟಿನ ಯೋಜನೆ ಉದ್ಘಾಟನೆಗೂ ಮುನ್ನವೇ ಐದು ಕಡೆ ಅಳವಡಿಸಿರುದ್ದ ಭಾವಚಿತ್ರ ಸಹಿತ ಬೋರ್ಡ್ಗೆ ಎರಡು ಕಡೆ ಕಲ್ಲೆಸೆದಿರೋ ಕಿಡಿಗೇಡಿಗಳು ಶಾಸಕ ಪ್ರೀತಮ್ ಗೌಡ ಭಾವಚಿತ್ರ ಹಾನಿಗೊಳಿಸಿದ್ದಾರೆ.
ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಇದು ಅಭಿವೃದ್ಧಿ ಸಹಿಸದ ವಿಪಕ್ಷ ನಾಯಕರ ಹಾಗೂ ಕಾರ್ಯಕರ್ತರ ಕೃತ್ಯ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಐದು ಭಾವಚಿತ್ರದ ಬೋರ್ಡುಗಳಲ್ಲಿಿ ಎರಡು ಭಾವಚಿತ್ರಕ್ಕೆ ಹಾನಿಯಾಗಿದೆ.
ಇನ್ನು ಈ ಕೃತ್ಯದ ಬಗ್ಗೆ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಹಾಸನದಲ್ಲಿ ಪ್ರೀತಮ್ ಗೌಡರು ಶಾಸಕರಾದ ಬಳಿಕ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿವೆ. ನಗರದಲ್ಲಿ ಎಲ್ಲೆಡೆ ಪ್ರಗತಿ ಆಗುತ್ತಿದೆ. ಇದನ್ನು ಸಹಿಸದ ವಿರೋಧ ಪಕ್ಷದವರ ಕೃತ್ಯ ಇದು ಎನ್ನೋ ಅನುಮಾನ ಇದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ. ಯಾರೇ ಈ ಕೃತ್ಯ ಎಸಗಿದ್ದರೂ ಅವರ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ: ಬಂಡೆಗಳನ್ನೇ ಜೀರ್ಣಿಸಿಕೊಂಡವರಿಗೆ ಟೀಕೆ ಯಾವ ಲೆಕ್ಕ?: ಡಿಕೆಶಿಗೆ ಹೆಚ್ಡಿಕೆ ಟಾಂಗ್