ETV Bharat / state

ಆನೆ ಕಾರಿಡಾರ್ ನಿರ್ಮಾಣ ನಮ್ಮ ಪ್ರಮುಖ ಬೇಡಿಕೆ: ಶಾಸಕ ಹೆಚ್.ಕೆ.ಕುಮಾರಸ್ವಾಮಿ

ಸಕಲೇಶಪುರ ತಾಲೂಕಿನ ಹೆತ್ತೂರು ಭಾಗದಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಇದನ್ನ ನೀವು ಈ ಬಾರಿ ಮಾಡಿಸಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯಗೆ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದರು.

Hassan
ಆನೆ ಕಾರಿಡಾರ್ ನಿರ್ಮಾಣ ನಮ್ಮ ಪ್ರಮುಖ ಬೇಡಿಕೆ: ಶಾಸಕ ಹೆಚ್.ಕೆ.ಕುಮಾರಸ್ವಾಮಿ
author img

By

Published : Mar 21, 2021, 8:55 PM IST

ಸಕಲೇಶಪುರ/ ಹಾಸನ: ಕಾಡಾನೆ ಹಾವಳಿ ನಿಯಂತ್ರಿಸಲು ಈ ಬಾರಿ ಆನೆ ಕಾರಿಡಾರ್ ನಿರ್ಮಾಣ ಮಾಡಲೇಬೇಕು ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದರು.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳದಲ್ಲಿ ಮಾತನಾಡಿದ ಅವರು, ಕಾಡಾನೆ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಿ ಪ್ರಧಾನಿ ಭೇಟಿ ಮಾಡಿ ಮನವರಿಕೆ ಮಾಡಿಕೊಡಬೇಕು. ಹಾಗೆಯೇ ಅತಿವೃಷ್ಟಿ, ಅನಾವೃಷ್ಟಿ ಬಗ್ಗೆಯೂ ಚರ್ಚೆ ನಡೆಸಿ ತಾಲೂಕಿನ ಹೆತ್ತೂರು ಭಾಗದಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಇದನ್ನ ನೀವು ಈ ಬಾರಿ ಮಾಡಿಸಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗ್ರಹಿಸಿದರು.

ಆನೆ ಕಾರಿಡಾರ್ ನಿರ್ಮಾಣ ನಮ್ಮ ಪ್ರಮುಖ ಬೇಡಿಕೆ: ಶಾಸಕ ಹೆಚ್.ಕೆ.ಕುಮಾರಸ್ವಾಮಿ

ಈಗಾಗಲೇ 3 ಸಾವಿರದ 300 ಎಕರೆ ಪ್ರದೇಶದಲ್ಲಿ ಆನೆ ಕಾರಿಡಾರ್ ಪ್ರಸ್ತಾಪವಾಗಿದೆ. ಇದಕ್ಕೆ ಸುಮಾರು 400 ಕೋಟಿ ರೂ. ಬೇಕಾಗಬಹುದೆಂಬ ಅಂದಾಜು ಮಾಡಲಾಗಿದೆ. 200 ಕೋಟಿ ರೂ. ಹೆಚ್ಚಾದ್ರು ಪರವಾಗಿಲ್ಲ. ಸರ್ಕಾರಕ್ಕೆ ಕಾರಿಡಾರ್ ಆಗಬೇಕು ಎಂದು ಒತ್ತಾಯ ಮಾಡಿ, ಕೇಂದ್ರ ಪರಿಸರ ಖಾತೆ ಸಚಿವರನ್ನು ಭೇಟಿ ಮಾಡಿ ಪ್ರಧಾನಿ ಮೋದಿಯವರಿಗೆ ಮನವರಿಕೆ ಮಾಡಿ. ಅಲ್ಲದೇ ಕಾಫಿ ಬೆಳೆ ರೈತರಿಗೆ ಪ್ರತಿ ತಿಂಗಲು 50 ಚೀಲ ಗೊಬ್ಬರ ನೀಡುವ ಯೋಜನೆ ಅವೈಜ್ಞಾನಿಕವಾಗಿದ್ದು, ಸಮರ್ಪಕವಾಗಿ ಸಿಗುವಂತೆ ಮಾಡುವ ಕೆಲಸ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಮೊದಲು 4 ತಿಂಗಳು ಮಳೆಯಾಗುತ್ತಿತ್ತು. ಆದ್ರೆ ಈಗ ವರ್ಷ ಪೂರ್ತಿ ಮಳೆಯಾಗುತ್ತಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂಭವಿಸಿ ರೈತರು ಸಂಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್​​ಗಳಲ್ಲಿ ಸಾಲದ ಅಸಲಿ ಹಣವನ್ನು ಪಾವತಿಸಿದ್ರೆ ಬಡ್ಡಿ ಮನ್ನಾ ಯೋಜನೆಯ ಬದಲಿಗೆ ಸಾಲ ಮನ್ನಾವನ್ನೇ ಮಾಡಬೇಕು. ಎಲ್ಲಾ ರೈತರಿಗೆ ಸಬ್ಸಿಡಿ ದರದಲ್ಲಿ 10 ಹೆಚ್​ಪಿ ಮೋಟಾರ್ ನೀಡುತ್ತಿದ್ದು, ಅದನ್ನು ಕಾಫಿ ಬೆಳಗಾರರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಇನ್ನು ಜನ ಪ್ರತಿನಿಧಿಗಳನ್ನು ಕೆಳಗೆ ಕೂರಿಸಿ ಅಧಿಕಾರಿಗಳನ್ನು ತಲೆಯ ಮೇಲೆ ಕೂರಿಸುವಂತಹ ಕೆಲಸ ಸರ್ಕಾರದಿಂದ ಆಗುತ್ತಿದೆ. ಅದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಬೇಸರ ವ್ಯಕ್ತಪಡಿಸಿದ್ರು. ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಉಪಚುನಾವಣೆ ನಂತರ ಈ ಭಾಗದ ಶಾಸಕರು, ಮುಖಂಡರು ಹಾಗೂ ಬೆಳೆಗಾರ ಸಂಘಟನೆಗಳ ಮುಖಂಡರ ನಿಯೋಗವನ್ನು ದೆಹಲಿಗೆ ನನ್ನ ನೇತೃತ್ವದಲ್ಲಿಯೇ ಕರೆದುಕೊಂಡು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇನೆ. ಮತ್ತು ಅರಣ್ಯ ಸಚಿವರೇ ತಾಲೂಕು ಕೇಂದ್ರಕ್ಕೆ ಬಂದು ಕಾಡಾನೆ ಸಮಸ್ಯೆಯನ್ನು ತಿಳಿದುಕೊಂಡಿದ್ದಾರೆ. ರಾಜ್ಯ ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿದೆ. ಆದ್ದರಿಂದ ಕೇಂದ್ರ ಪರಿಸರ ಸಚಿವರೊಂದಿಗೆ ಪ್ರಧಾನಿಯವರನ್ನೂ ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಿ ಪರಿಹಾರದ ಬೇಡಿಕೆ ಸಲ್ಲಿಸಲಾಗುವುದು ಎಂದರು.

ರಸಗೊಬ್ಬರ ಬೆಲೆ ಏರಿಕೆಯಾಗಿರುವುದರಿಂದ ಸರ್ಕಾರ ಸಬ್ಸಿಡಿ ದರದಲ್ಲಿ ಗೊಬ್ಬರ ಮಾರುವ ಬೇಡಿಕೆಯನ್ನು ಕೇಂದ್ರ ರಸಗೊಬ್ಬರ ಸಚಿವ ಸದಾನಂದಗೌಡರ ಬಳಿ ಚರ್ಚೆ ನಡೆಸುತ್ತೇನೆ. ಸಾಧ್ಯವಾದರೆ ಬೆಳೆಗಾರರ ಸಂಘಟನೆಯವರನ್ನು ಭೇಟಿ ಮಾಡಿಸಿ ಮುಕ್ತವಾಗಿ ಚರ್ಚೆ ನಡೆಸಲು ಅವಕಾಶ ಕಲ್ಪಿಸುತ್ತೇನೆ. ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಆಗಿರುವ ಒತ್ತುವರಿ ಸಮಸ್ಯೆಗೆ ಕೇರಳ ಮಾದರಿ ಯೋಜನೆ ಜಾರಿಗೆ ತರುವ ಚಿಂತನೆ ನಡೆದಿದೆ ಎಂದರು.

ಇನ್ನು ಎರಡು ದಿನಗಳ ಕಾಲ ನಡೆದ ಕೃಷಿ ಮೇಳ ಇಂದು ಮುಕ್ತಾಯವಾಗಿದ್ದು, ಮೇಳದಲ್ಲಿ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕಾಫಿ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳು, ಔಷಧಿ, ಗೊಬ್ಬರ ಹಾಗೂ ಇತರೆ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ವಿಶೇಷ ಅಂದ್ರೆ ಕೃಷಿ ಮೇಳಕ್ಕೆ ಈ ಬಾರಿ ವಿವಿಧ ಕಂಪನಿಯ ಕಾರುಗಳು ಆಗಮಿಸಿ ಗಮನ ಸೆಳೆದವು. ಜೊತಗೆ ಕಾರುಗಳ ಪ್ರದರ್ಶನವನ್ನು ಖುದ್ದು ಉಸ್ತುವಾರಿ ಸಚಿವರು ನೋಡುವ ಮೂಲಕ ನಮ್ಮ ಕೃಷಿಕರಿಗೂ ಕಡಿಮೆ ಬಡ್ಡಿ ದರದಲ್ಲಿ ಕಾರು ನೀಡಿ ಅದರಲ್ಲಿ ಓಡಾಡುವಂತೆ ಮಾಡಿ ಎಂದು ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.