ಹಾಸನ (ಅರಸೀಕೆರೆ): ಕೋವಿಡ್ನಿಂದ ಸಾವಿಗೀಡಾದ ಪಟ್ಟಣದ ದಲಿತ ಮುಖಂಡನ ಅಂತ್ಯಕ್ರಿಯೆಯಲ್ಲಿ ಶಾಸಕರು ಪಿಪಿಟಿ ಕಿಟ್ ಧರಿಸಿ ಭಾಗಿಯಾಗಿದ್ದಲ್ಲದೇ, ಶವಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.
ಕೋವಿಡ್ನಿಂದ ಮೃತಪಟ್ಟ ತಾಲೂಕಿನ ದಲಿತ ಮುಖಂಡ ಮತ್ತು ಮೀಸೆ ರಾಮಣ್ಣ (54) ಅವರ ಅಂತ್ಯಕ್ರಿಯೆಯಲ್ಲಿ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗಿಯಾಗಿದ್ದರು.
ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನ ವಾರಸುದಾರರಿಗೆ ನೀಡದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಯೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಈ ವೇಳೆ ಪಾರ್ಥಿವ ಶರೀರವನ್ನ ನೋಡಲು ಬಂದ ಶಾಸಕರು ಪಿಪಿಇ ಕಿಟ್ ಧರಿಸಿ ಮೃತದೇಹದ ದರ್ಶನ ಪಡೆದರು. ಬಳಿಕ ಶ್ರದ್ದಾಂಜಲಿ ವಾಹನದಲ್ಲಿ ತೆರಳಿದ ಅವರು ಅರಸೀಕೆರೆ ಹೊರವಲಯದ ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ರಾಜ್ಯದಲ್ಲಿ ಇದುವರೆಗೂ ಯಾವ ರಾಜಕಾರಣಿಗಳು ಸಹ ಇಂತಹ ಕಾರ್ಯ ನಡೆಸಿಲ್ಲ. ಈ ಹಿನ್ನಲೆಯಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.