ETV Bharat / state

ಹಾಸನದಲ್ಲಿ ಅಪ್ರಾಪ್ತೆ ಆತ್ಮಹತ್ಯೆ... ದುರಂತಕ್ಕೆ ಕಾರಣವಾಯ್ತಾ ತ್ರಿಕೋನ ಪ್ರೇಮ?! - ಅದ್ದಿಹಳ್ಳಿ ಗ್ರಾಮದ ಬಾಲಕಿ ಆತ್ಮಹತ್ಯೆ

ಅಪ್ರಾಪ್ತೆಯೊಬ್ಬಳು ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವೋ? ಅಥವಾ ತ್ರಿಕೋನ ಪ್ರೇಮವೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

minior-girl-committed-suicide-in-hasan
ಹಾಸನದಲ್ಲಿ ಅಪ್ರಾಪ್ತೆ ಆತ್ಮಹತ್ಯೆ.
author img

By

Published : Aug 25, 2020, 3:10 AM IST

ಹಾಸನ: ಅಪ್ರಾಪ್ತೆಯೊಬ್ಬಳು ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯಲ್ಲಿ ನಡೆದಿದೆ. ಆತ್ಯಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಹಾಸನ ಜಿಲ್ಲೆಯ ಶಾಂತಿಗ್ರಾಮದ ಅದ್ದಿಹಳ್ಳಿ ಗ್ರಾಮದ 17 ವರ್ಷದ ಸುಪ್ರಿಯಾ (ಹೆಸರು ಬದಲಿಸಲಾಗಿದೆ) ಎಂಬುವಳೆ ಮೃತ ಬಾಲಕಿ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವೋ? ಅಥವಾ ತ್ರಿಕೋನ ಪ್ರೇಮವೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಬೇಸರದಿಂದ ಆತ್ಮಹತ್ಯೆ?

ಮೃತಳ ತಾಯಿ 15 ವರ್ಷಗಳ ಹಿಂದೆಯೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಕೆ ತನ್ನ ತಂದೆಯ ಜೊತೆ ಇದ್ದು, ಮತ್ತೊಬ್ಬ ಸಹೋದರಿ ಅಜ್ಜಿಯ ಮನೆಯಲ್ಲಿದ್ದಳು. ಅಲ್ಲದೆ ತಾಯಿಯ ಕೊರತೆ ಎದುರಾಗಬಾರದೆೆಂದು ಬಾಲಕಿಯ ತಂದೆ ಎರಡನೇ ಮದುವೆಯಾಗಿದ್ದರು. ಆದರೆ ಎರಡನೇ ಹೆಂಡತಿಯು ಸಂಸಾರ ನಡೆಸದೆ, ತಾನು ಪ್ರೀತಿಸಿದವನೊಂದಿಗೆ ಓಡಿಹೋಗಿದ್ದಳು. ಹೀಗಾಗಿ ಬೇಸರಗೊಂಡಿದ್ದ ಬಾಲಕಿ ನೇಣಿಗೆ ಶರಣಾಗಿದ್ದಾಳೆ ಎಂಬ ಮಾತುಗಳು ಕೇಳಿಬಂದಿವೆ.

ಹಾಸನದಲ್ಲಿ ಅಪ್ರಾಪ್ತೆ ಆತ್ಮಹತ್ಯೆ.

ಆತ್ಮಹತ್ಯೆಗೆ ಕಾರಣವಾಯ್ತಾ ತ್ರಿಕೋನ ಪ್ರೇಮ?

ಬಾಲಕಿ ಹಾಗೂ ಆಕೆಯ ಕಾಲೇಜಿನವನಾದ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಮೂಲದ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಇನ್ನೊಂದೆಡೆ ಹಾಸನ ಮೂಲದ ಅರುಣ್ ಎಂಬಾತ ಅವಳನ್ನು ಪ್ರೀತಿಸುತ್ತಿದ್ದ. ಆದರೆ ಬಾಲಕಿಯು ಅರುಣನ ಪ್ರೀತಿಯನ್ನ ನಿರಾಕರಿಸಿದ್ದಳು ಎನ್ನಲಾಗಿದೆ.

ಆದರೆ ತಾನು ಪ್ರೀತಿಸಿದ ಹುಡುಗಿ ಹಾಗೂ ಪ್ರೀತಿ ಬೇರೆ ಯಾರಿಗೂ ಸಿಗಬಾರದು ಎಂದು ಅರುಣ್, ಗಣೇಶನ ಹಬ್ಬದ ದಿನ ಬಾಲಕಿಯ ಮನೆಗೆ ಬಂದು ರೂಮಿನಲ್ಲಿ ಅವಿತುಕೊಂಡಿದ್ದ. ಈ ವೇಳೆ ದೇವಾಲಯಕ್ಕೆ ಹೋಗಿದ್ದ ಪೋಷಕರು ಮನೆಗೆ ಬರುತ್ತಿರುವುದನ್ನು ಕಂಡು ಅಲ್ಲಿಂದ ಓಡಿಹೋಗಿದ್ದಾನೆ. ಇದೇ ಸಮಯಕ್ಕೆ ಬಾಲಕಿಯೂ ಕೂಡ ಮನೆಯಿಂದ ಹೊರ ಬಂದಿದ್ದಾಳೆ. ಇದನ್ನು ಪ್ರತ್ಯಕ್ಷವಾಗಿ ಕಂಡ ಪೋಷಕರು ತಪ್ಪಾಗಿ ಭಾವಿಸಿ ಅವಳಿಗೆ ಮನಬಂದಂತೆ ಬೈದಿದ್ದರು. ಅವಳು ಏನೇ ಹೇಳಿದರೂ ಪೋಷಕರು ನಂಬುವ ಸ್ಥಿತಿಯಲ್ಲಿರಲಿಲ್ಲ. ಘಟನೆಯಿಂದ ಅಪ್ರಾಪ್ತೆ ತೀವ್ರ ಬೇಸರಗೊಡಿದ್ದಳು, ಇದರಿಂದಲೇ ನೇಣಿಗೆ ಶರಣಾಗಿದ್ದಾಳೆ ಎಂದೂ ಹೇಳಲಾಗುತ್ತಿದೆ.

ಇನ್ನೊಂದೆಡೆ ಘಟನೆ ಬಳಿಕ ಬಾಲಕಿಯ ಪ್ರಿಯಕರ ಪೊಲೀಸರಿಗೆ ಕರೆ ಮಾಡಿ, ಇದು ಸಹಜ ಸಾವಲ್ಲ. ಆಕೆಯ ಮೇಲೆ ಅರುಣ್​ ಅತ್ಯಾಚಾರ ಮಾಡಿದ್ದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಿ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಇತ್ತ ಅರುಣ್​ ಕೂಡ ಮೂರು ದಿನದಿಂದ ನಾಪತ್ತೆಯಾಗಿದ್ದಾನೆ. ಸದ್ಯ ಶಾಂತಿಗ್ರಾಮ ಪೊಲೀಸ್​ ಠಾಣೆಯಲ್ಲಿ ಕೌಟುಂಬಿಕ ಕಲಹದಿಂದ ಅಪ್ರಾಪ್ತೆ ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿದ್ದು, ವಿಶೇಷ ತಂಡದಿಂದ ತನಿಖೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.