ಹಾಸನ: ಜಿಲ್ಲೆಯಲ್ಲಿ ಫೀವರ್ ಕ್ಲಿನಿಕ್‍ಗಳಲ್ಲಿ ತಪಾಸಣೆ ನಡೆಸುವ ವೈದ್ಯರಿಗೂ ಕೊರೊನಾ ಪಿ.ಪಿ.ಕಿಟ್ಗಳನ್ನು ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅವರು ಪಿ.ಪಿ.ಕಿಟ್ಗಳನ್ನು ವಿತರಿಸುವಂತೆ ಮಾಡಿದ ಮನವಿಗೆ ಸಚಿವರು ಪೂರಕ ನಿರ್ಧಾರ ಪ್ರಕಟಿಸಿದರು.
ಹಾಸನ ವೈದ್ಯಕೀಯ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಪಾಸಣೆ ಹಾಗೂ ಚಿಕಿತ್ಸೆಗೆ 400 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್-19 ಆಸ್ಪತ್ರೆನಲ್ಲಿ (ಜಿಲ್ಲಾ ಆಸ್ಪತ್ರೆ) ಶಂಕಿತರು ಹಾಗೂ ಸೋಂಕಿತರಿಗೆ ಐಸೋಲೇಷನ್ ವ್ಯವಸ್ಥೆ ಮಾಡಿ. ಖಾಸಗಿ ಆಸ್ಪತ್ರೆಗಳು ನಿರಂತರ ಸೇವೆ ಒದಗಿಸುವಂತೆ ಸೂಚನೆ ನೀಡಿ. ಆ್ಯಂಬುಲೆನ್ಸ್ಗಳು ಸರ್ಕಾರಿ ಆಸ್ಪತ್ರೆಗಳಿಗೇ ಬರುವಂತೆ ಎಚ್ಚರಿಕೆ ನೀಡಿ ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಲಸಿಗರು, ಕಾರ್ಮಿಕರು ನಿರ್ಗತಿಕರು ಆಹಾರಕ್ಕಾಗಿ ಪರಿಸತಪಿಸಬಾರದು. ಆಹಾರ ಪೂರೈಕೆ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು. ಸಭೆಯಲ್ಲಿ ಕೊಳಗೇರಿ ನಿವಾಸಿಗಳ ಜೊತೆಯಲ್ಲಿ ಎಲ್ಲಾ ಬಡವರಿಗೂ ಹಾಲು ವಿತರಣೆಯಾಗಬೇಕು ಎಂದು ಜನಪ್ರತಿನಿಧಿಗಳು ಅಭಿಪ್ರಾಯಪಟ್ಟರು. ಪ್ರತಿ ಕುಟುಂಬಕ್ಕೂ ಅರ್ಧ ಲೀಟರ್ನಂತೆ ವಿತರಿಸಲು ಆಯಾ ಕ್ಷೇತ್ರ ಶಾಸಕರು ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದರು.
ಏಪ್ರಿಲ್ 14ರವರೆಗೂ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬಾರದು. ಹೋಮ್ ಕ್ವಾರಂಟೈನ್ ಹಾಗೂ ಸೂಪರವೈಸರ್ ನಿಗಾ ಘಟಕಗಳಲ್ಲಿ ಇರುವವರ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ. ಎಲ್ಲ ರೀತಿಯ ತಪಾಸಣೆ ನಡೆಸಿ ಎಂದು ಸೂಚಿಸಿದರು. ಅದೇ ರೀತಿ ಪಡಿತರ ವಿತರಣೆಗೆ ವ್ಯವಸ್ಥೆ ಬಗ್ಗೆಯೂ ಚರ್ಚಿಸಲಾಯಿತು.