ETV Bharat / state

ಮೆಡಿಕಲ್ ಉದ್ಯಮಿ ಅಪಹರಿಸಿ ದರೋಡೆ: ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ - hassan news Medical entrepreneur abduction

ಮೆಡಿಕಲ್ ಉದ್ಯಮಿಯೊಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಿದ ಘಟನೆ ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

hassan
ಮೆಡಿಕಲ್ ಉದ್ಯಮಿ ಅಪಹರಣ
author img

By

Published : Jan 4, 2020, 8:30 PM IST

ಹಾಸನ: ಮೆಡಿಕಲ್ ಉದ್ಯಮಿಯೊಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಿ, ದಾಖಲೆಗಳಿಗೆ ಬಲವಂತದಿಂದ ಸಹಿ ಮಾಡಿಸಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿರುವ ಮೆಡಿಕಲ್ ಉದ್ಯಮಿ ಅಪಹರಣ ಪ್ರಕರಣ

ನಗರದ ಮಂಗಳಾ ಆಸ್ಪತ್ರೆಯಲ್ಲಿ ಮೆಡಿಕಲ್‌ ಸ್ಟೋರ್ ನಡೆಸುತ್ತಿರುವ ರಾಘವೇಂದ್ರ ನಗರದ ನಿವಾಸಿ ಸಂತೋಷ್‌ ಜೈನ್‌ ಅವರು ಕೆಲಸ ಮುಗಿಸಿ ಹೋಗುತ್ತಿದ್ದಾಗ, ಅವರನ್ನು ರಾಜೀವ್‌ ನರ್ಸಿಂಗ್ ಕಾಲೇಜು ಬಳಿ ಜೆಸಿಬಿ ಮಂಜ ಎಂಬಾತ ಹಾಗೂ ಇತರ 8 ಮಂದಿ ಕಾರಿನಲ್ಲಿ ಅಪಹರಿಸಿದ್ದಾರೆ. ಬಳಿಕ ಅವರನ್ನು ನಗರದಿಂದ ಹೊರಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಅವರ ಬಳಿಯಿದ್ದ 1.30 ಲಕ್ಷ ರೂ. ಕಿತ್ತುಕೊಂಡು, ಮೊದಲೇ ಸಿದ್ದಪಡಿಸಿದ್ದ ದಾಖಲೆಗಳಿಗೆ ಅವರಿಂದ ಸಹಿ ಹಾಕಿಸಿಕೊಂಡು ನಂತರ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆ ಚುನಾವಣೆ ವೇಳೆ ರಾಜಕೀಯ ಪಕ್ಷವೊಂದರ ಅಭ್ಯರ್ಥಿಗಾಗಿ ದೇಣಿಗೆ ನೀಡುವಂತೆ ವ್ಯಕ್ತಿಯೊಬ್ಬರು ಧಮಕಿ ಹಾಕಿದ್ದರು. ನಂತರ ಪೊಲೀಸರ ಸಮ್ಮುಖದಲ್ಲಿ ಆತ ನನಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದರು. ಅಪಹರಣದ ಹಿಂದೆ ಅವರೇ ಇರಬಹುದು ಎಂದು ದೂರುದಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಸಂಬಂಧ ಬಡಾವಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Intro:ಹಾಸನ : ಮೆಡಿಕಲ್ ಉದ್ಯಮಿಯೊಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಿ, ದಾಖಲೆಗಳಿಗೆ ಬಲವಂತದಿಂದ ಸಹಿ ಮಾಡಿಸಿರುವ ಘಟನೆ ಹಾಸನ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಮಂಗಳ ಆಸ್ಪತ್ರೆಯಲ್ಲಿ ಮೆಡಿಕಲ್‌ ಸ್ಟೋರ್ ನಡೆಸುತ್ತಿರುವ ರಾಘವೇಂದ್ರ ನಗರದ ನಿವಾಸಿ ಸಂತೋಷ್‌ ಜೈನ್‌ ಅವರು ಕೆಲಸ ಮುಗಿಸಿ ಹೋಗುತ್ತಿದ್ದಾಗ  ರಾಜೀವ್‌ ನರ್ಸಿಂಗ್ ಕಾಲೇಜು ಬಳಿ ಜೆಸಿಬಿ ಮಂಜ ಹಾಗೂ ಇತರ 8 ಮಂದಿ ಕಾರಿನಲ್ಲಿ ಅಪಹರಿಸಿದ್ದಾರೆ.

ಬಳಿಕ ಅವರನ್ನು ನಗರದಿಂದ ಹೊರಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಅವರ ಬಳಿಯಿದ್ದ 1.30 ಲಕ್ಷ ರೂ. ಕಿತ್ತುಕೊಂಡು, ಮೊದಲೇ ಸಿದ್ದಪಡಿಸಿದ್ದ ದಾಖಲೆಗಳಿಗೆ ಅವರಿಂದ ಸಹಿ ಹಾಕಿಸಿಕೊಂಡು ನಂತರ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆ ಚುನಾವಣೆ ವೇಳೆ ರಾಜಕೀಯ ಪಕ್ಷವೊಂದರ ಅಭ್ಯರ್ಥಿಗಾಗಿ ದೇಣಿಗೆ ನೀಡುವಂತೆ ವ್ಯಕ್ತಿಯೊಬ್ಬರು ಧಮಕಿ ಹಾಕಿದ್ದರು. ನಂತರ ಪೊಲೀಸರ ಸಮ್ಮುಖದಲ್ಲಿ ಆತ ನನಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದರು. ಅಪಹರಣದ ಹಿಂದೆ ಅವರೇ ಇರಬಹುದು ಎಂದು ದೂರುದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಡಾವಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೈಟ್ 1 : ಸಂತೋಷ್ ಜೈನ್, ಉದ್ಯಮಿ.

ಬೈಟ್ 2 : ವಿನಯ್, ಕಾರ್ ಚಾಲಕ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:೦

Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.