ETV Bharat / state

ಗಾಂಧೀಜಿ ಜೀವನ ಸಂದೇಶವನ್ನು ಎಲ್ಲರೂ ರೂಡಿಸಿಕೊಳ್ಳಬೇಕು: ಶಿವಲಿಂಗೇಗೌಡ - ಗಾಂಧೀಜಿಯವರ 150ನೇ ಜನ್ಮದಿನೋತ್ಸವ

ಬ್ರಿಟಿಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದು ಎಲ್ಲಾ ಕಡೆಯಲ್ಲೂ ಹಿಂಸೆಯಿಂದ ಹೋರಾಟ ನಡೆಸಿದ್ದರೆ, ಭಾರತದಲ್ಲಿ ಅಹಿಂಸೆಯಿಂದ ಹೋರಾಟ ನಡೆಸಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದು, ಮಹಾತ್ಮ  ಗಾಂಧೀಜಿಯವರ ಜೀವನ ಸಂದೇಶವನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಎಂದು ಶಾಸಕ ಶಿವಲಿಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ

ಶಿವಲಿಂಗೇಗೌಡ
author img

By

Published : Oct 3, 2019, 12:01 AM IST

ಹಾಸನ: ಬ್ರಿಟಿಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದು ಎಲ್ಲಾ ಕಡೆಯಲ್ಲೂ ಹಿಂಸೆಯಿಂದ ಹೋರಾಟ ನಡೆಸಿದ್ದರೆ, ಭಾರತದಲ್ಲಿ ಅಹಿಂಸೆಯಿಂದ ಹೋರಾಟ ನಡೆಸಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದು, ಮಹಾತ್ಮ ಗಾಂಧೀಜಿಯವರ ಜೀವನ ಸಂದೇಶವನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಎಂದು ಶಾಸಕ ಶಿವಲಿಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಶಾಸಕ ಶಿವಲಿಂಗೇಗೌಡ ಮಾತನಾಡಿದ್ದಾರೆ
ಜಿಲ್ಲೆಯ ಅರಸೀಕೆರೆಯ ಕಸ್ತೂರಬಾ ರಾಷ್ಟ್ರೀಯ ಗಾಂಧಿ ಸ್ಮಾರಕ ಟ್ರಸ್ಟ್ ನಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜನೆ ಮಾಡಲಾಗಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ರು.

ಗೈಡ್ ಲೈನ್ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ:
ಸ್ವಚ್ಛತಾ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಗಾಂಧಿ ಜಯಂತಿಯನ್ನು ಆಚರಿಸಬೇಕು ಎಂದು ಗೈಡ್‌ಲೈನ್‌ ಶಾಲೆಯ ಅಧ್ಯಕ್ಷ ಕೆ.ಆರ್.ರಮೇಶ್ ಅಭಿಪ್ರಾಯಪಟ್ಟರು. ಶ್ರವಣಬೆಳಗೊಳದ ಹೊರ ವಲಯದಲ್ಲಿರುವ ಸಂತೆ ಮೈದಾನವನ್ನು ಶ್ರಮಧಾನದೊಂದಿಗೆ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿದರು.
ಗಾಂಧೀಜಿಯವರ 150ನೇ ಜನ್ಮದಿನೋತ್ಸವ ಅಂಗವಾಗಿ ನಗರದ ಗೈಡ್‌ಲೈನ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ ವತಿಯಿಂದ ಹಮ್ಮಿಕೊಂಡಿದ್ದ ಸಂತೆ ಮೈದಾನ ಸ್ವಚ್ಛತಾ ಕಾರ್ಯಕ್ರಮ ಬಳಿಕ ರಮೇಶ್ ಮಾತನಾಡಿದರು. ಎಲ್ಲೆಂದರಲ್ಲಿ ಕಸ ಎಸೆಯುವ ಮೂಲಕ ನಾವೇ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಇನ್ನು ವಿಷಯುಕ್ತ ಪ್ಲಾಸ್ಟಿಕನ್ನು ಬಳಕೆ ಮಾಡುವ ಮೂಲಕ ಪರಿಸರ ಹಾಳಾಗುತ್ತಿದ್ದು ಆರೋಗ್ಯದ ಮೇಲೂ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತಿದೆ. ಹಾಗಾಗಿ ನಾವೆಲ್ಲರೂ ನಮ್ಮ ಮತ್ತು ನಮ್ಮ ಪರಿಸರವನ್ನು ಹಸಿರುಯುಕ್ತ ಮಾಡಿಕೊಂಡು ಬದುಕ ಬೇಕು, ಇಲ್ಲವಾದರೆ ಮುಂದೊಂದು ದಿನ ಪರಿಸರವೇ ನಮಗೆ ಮಾರಕವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

Intro:ಹಾಸನ: ನಮ್ಮ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಬ್ರಿಟಿಷರ ರೀತಿ-ನೀತಿಗಳು ಕಾರಣವಾಗಿದೆ ಎಂದು ಶಾಸಕ ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.

ಜಿಲ್ಲೆಯ ಅರಸೀಕೆರೆಯ ಕಸ್ತೂರಬಾ ರಾಷ್ಟ್ರೀಯ ಗಾಂಧಿ ಸ್ಮಾರಕ ಟ್ರಸ್ಟ್ ನಲ್ಲಿ ಆಯೋಜನೆ ತಾಲ್ಲೂಕು ಆಡಳಿತದ ವತಿಯಿಂದ ಮಾಡಲಾಗಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ರು.

ಬ್ರಿಟಿಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದು ಎಲ್ಲಾ ಕಡೆಯಲ್ಲೂ ಹಿಂಸೆಯಿಂದ ಹೋರಾಟ ನಡೆದಿದ್ದರೆ,. ಭಾರತದಲ್ಲಿ ಅಹಿಂಸೆಯಿಂದ ಹೋರಾಟ ನಡೆಸಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದು, ಮಹಾತ್ಮ ಗಾಂಧೀಜಿ. ಗಾಂಧೀಜಿಯವರ ಜೀವನ ಸಂದೇಶವನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಎಂದ್ರು. ಕರ್ನಾಟಕದ ಅರಸೀಕೆರೆಯಲ್ಲಿ ಗಾಂಧೀಜಿಯವರ ಚಿತಾಬಸ್ಮ ಹೊಂದಿದ ಸ್ಮಾರಕವಿದ್ದು, ಇತ್ತೀಚೆಗೆ ಇಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಕೋಟ್ಯಾಂತರ ರೂಪಾಯಿ ರೂಗಳಲ್ಲಿ ನಡೆದಿದ್ದು, ಇದನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಬ್ರಿಟಿಷರ ರೀತಿ-ನೀತಿಗಳು ಕಾರಣವಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಗಾಂಧೀಜಿಯವರ ಸಿದ್ಧಾಂತವು ಇತ್ತಿಚಿನ ದಿನದಲ್ಲಿ ಬಹಳ ಅವಶ್ಯಕತೆಯಿದೆ ಎಂದ್ರು.

ಎತ್ತಿನಹೊಳೆ ಕಾಮಗಾರಿಗೆ 12 ಸಾವಿರ ಕೋಟಿ ಯೋಜನೆಯಾಗಿದ್ದು, ರಾಜ್ಯದ 27 ತಾಲೂಕಿನ ರೈತರಿಗೆ ಯೋಜನೆಯಿಂದ ಅನುಕೂಲವಾಗಲಿದೆ. ಆದ್ರೆ ಅದು ಸಾಗುತ್ತಿರುವ ರೀತಿ ನೋಡಿದರೆ 25 ವರ್ಷಗಳಾದರೂ ಮುಗಿಯುವುದಿಲ್ಲ ಎನಿಸುತ್ತದೆ. ಮೊನ್ನೆ ಬಂದ ನೆರೆ ಪ್ರವಾಹದಿಂದ 131 ಟಿಎಂಸಿ ನೀರು ಹರಿದು ಸಮುದ್ರ ಸೇರಿದೆ. ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರವು ಹಣವನ್ನು ಕಡಿತಗೊಳಿಸಲಿದೆ ಇದೆ ಎಂಬ ಮಾತು ಕೇಳಿಬರುತ್ತಿದೆ ಒಂದುವೇಳೆ ಹಣವನ್ನು ಕಡಿತಗೊಳಿಸಿ ಯೋಜನೆಯು ನಿಧಾನಗತಿಯಲ್ಲಿ ಸಾಗಿದರೆ ಗಾಂಧಿಯವರ ಮಾರ್ಗದಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದ್ರು.

ಬೈಟ್: ಕೆ.ಎಂ.ಶಿವಲಿಂಗೇಗೌಡ, ಅರಸೀಕೆರೆ ಶಾಸಕ.

ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ರವರು ಮಾತನಾಡಿ ಪ್ಲಾಸ್ಟಿಕ್ ಮುಕ್ತ ಭಾರತ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅಂಗಡಿಗಳಿಗೆ ದಾಳಿ ಮಾಡಿ ಪ್ಲಾಸ್ಟಿಕ್ ತೆಗೆದುಕೊಂಡು ಹೋದರೆ ಆಗುವುದಿಲ್ಲ ಎಲ್ಲಿ ಪ್ಲಾಸ್ಟಿಕ್ಕನ್ನು ತಯಾರಿಸುತ್ತಾರೆ ಅಂತಹ ಉದ್ದಿಮೆಗಳಿಗೆ ಬೀಗ ಹಾಕಿಸಬೇಕು. ಅಧಿಕಾರಿಗಳಿಗೆ ಹಾಗೂ ಪ್ರಧಾನಮಂತ್ರಿಯವರಿಗೆ ಇದು ಕಷ್ಟದ ಕೆಲಸವಲ್ಲ. ಆದ್ದರಿಂದ ಈ ಕೂಗು ಪ್ರಧಾನಮಂತ್ರಿಯವರಿಗೆ ತಲುಪಬೇಕು ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ರು.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.