ಅರಕಲಗೂಡು : ತಾಲೂಕಿನ ಕೊಣನೂರು, ಚಿಕ್ಕಹಳ್ಳಿ ಹಾಗೂ ದೊಡ್ಡಮಗ್ಗೆ ಪಂಚಾಯತಿ ವ್ಯಾಪ್ತಿಗಳ ಕಸ ವಿಲೇವಾರಿ ಮಾಡಲು ಬೃಹತ್ ಘಟಕ ಸ್ಥಾಪಿಸಲು ಚಿಕ್ಕಮಗ್ಗೆ ಕಾವಲು ಗ್ರಾಮದ ಸರ್ವೇ ನಂ. 1 ರಲ್ಲಿ ಸರ್ವೇ ನಡೆಸಿ 2 ಎಕರೆ ವಿಸ್ತೀರ್ಣವನ್ನು ಅಳತೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಬಿ. ಎಸ್. ರಾಘವೇಂದ್ರ ಮಾತನಾಡಿ, ತಹಸೀಲ್ದಾರ್‌ರವರ ಆದೇಶದಂತೆ ಕೆರೆ ಒತ್ತುವರಿ ತೆರವುಗೊಳಿಸಲು ಪಾರಸನಹಳ್ಳಿ ಗ್ರಾಮದ ಸರ್ವೇ ನಂ 2 ರಲ್ಲಿರುವ ಮಾಳಿಗೆ ಕಟ್ಟೆಯ 1.38 ಗುಂಟೆ, ಸರ್ವೇ ನಂ 8 ರಲ್ಲಿರುವ ಕೆರೆ. ಸರ್ವೇ ನಂ 9 ರಲ್ಲಿರುವ ತಿಮ್ಮನ ಕಟ್ಟೆಯ 1.18 ಗುಂಟೆ, ಸರ್ವೇ ನಂ 24 ರಲ್ಲಿರುವ ಚಿಕ್ಕನ ಕಟ್ಟೆಯ 5.14 ಗುಂಟೆ, ಸರ್ವೇ ನಂ 44 ರಲ್ಲಿರುವ ಕೆರೆ ಹಾಗೂ ಸರ್ವೇ ನಂ 7 ರಲ್ಲಿರುವ ಈರಯ್ಯನ ಕಟ್ಟೆಯ 0.35 ಗುಂಟೆ ವಿಸ್ತೀರ್ಣವನ್ನು ಸರ್ವೇ ಮಾಡಲಾಗಿದೆ ಎಂದರು.
ಜೊತೆಗೆ ಮುಜರಾಯಿ ದೇವಸ್ಥಾನಗಳ ಜಮೀನಿನ ಒತ್ತುವರಿ ತೆರವುಗೊಳಿಸಲೂ ಸಹ ಭೂ ಮಾಮಪಕರೊಂದಿಗೆ ಅಳತೆ ನಡೆಸಲಾಯಿತು ಎಂದು ತಿಳಿಸಿದರು.
ಅಳತೆ ಕಾರ್ಯದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಸಂಜಿತ್ ಕುಮಾರ್, ರವಿಪೂಜಾರಿ, ಭೂಮಾಪಕರುಗಳು, ಗ್ರಾಮಪಂಚಾಯತಿ ಕಾರ್ಯದರ್ಶಿ ಪುರುಷೋತ್ತಮ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.