ಬೇಲೂರು : ನೀರಿಲ್ಲದ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೆಬೀಡು ಹೋಬಳಿ ಗೌರಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿ ಬಂದ ಚಿರತೆ ರಾತ್ರಿ ವೇಳೆ ಗ್ರಾಮದ ಸಮೀಪದ ಬಾವಿಯಲ್ಲಿ ಬಿದ್ದಿದೆ. ಸುಮಾರು 5 ವರ್ಷದ ಗಂಡು ಚಿರತೆ ಎಂದು ಗುರುತಿಸಲಾಗಿದೆ. ಇಂದು ಬೆಳಗಿನ ಜಾವ 4.30ರ ವೇಳೆ ಜಮೀನಿನ ಬಾವಿಯಲ್ಲಿ ಚಿರತೆ ಕಂಡ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ಚಿರತೆಗೆ ಅರವಳಿಕೆ ಮದ್ದು ನೀಡಿ, ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದಾರೆ. ಚಿರತೆ ಕಂಡು ಬೆಚ್ಚಿದ ಗ್ರಾಮಸ್ಥರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ತಹಶೀಲ್ದಾರ್ ಎನ್ ವಿ ನಟೇಶ್, ಸಿಪಿಐ ಸಿದ್ದರಾಮೇಶ್ವರ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ವಲಯ ಅರಣ್ಯಾಧಿಕಾರಿ ಮರಿಸ್ವಾಮಿ, ಅರವಳಿಕೆ ತಜ್ಞ ಡಾ.ಮುರಳಿ ಮತ್ತು ಸಿಬ್ಬಂದಿಗಳಾದ ಸುಭಾಷ್ ಚಂದ್ರ, ಅರ್ಜುನ್, ಸಂತೋಷ್, ಕುಮಾರ್, ಹಳೇಬೀಡು ಪಿಎಸ್ಐ ಶಕುಂತಲಾ, ದೇವರಾಜ್, ಮತ್ತು ಇತರ ಸಿಬ್ಬಂದಿ ಇದ್ದರು.