ETV Bharat / state

ರಾಜ್ಯ ಸಾರಿಗೆ ಸಂಸ್ಥೆಯನ್ನ ಸರ್ಕಾರದಲ್ಲಿ ವಿಲೀನಗೊಳಿಸಲು ಆಗ್ರಹಿಸಿ ನೌಕರರ ಪ್ರತಿಭಟನೆ..

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಲು ಆಗ್ರಹಿಸಿ ಹಾಸನದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ರು.

protest
ಸಾರಿಗೆ ನೌಕರರ ಪ್ರತಿಭಟನೆ
author img

By

Published : Jan 14, 2020, 7:19 PM IST

ಹಾಸನ: ತಮ್ಮನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯ್ತು.

ಸಾರಿಗೆ ನೌಕರರ ನೋವುಗಳು ಸರ್ಕಾರಕ್ಕೆ ಅರ್ಥವಾಗ್ತಿಲ್ಲ ಅಂತಾ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ರು. ಹಬ್ಬ ಹರಿದಿನಗಳಲ್ಲಿ ತಮ್ಮ ಕುಟುಂಬದ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಬಂಧು-ಬಳಗದ ಯಾವ ಶುಭ ಸಮಾರಂಭಗಳಲ್ಲೂ ಪಾಲ್ಗೊಳ್ಳಲು ಸಾಧ್ಯವಾಗದೇ ಹಗಲು-ರಾತ್ರಿ ನಾಲ್ಕು ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು. ನಮ್ಮ ಸಾರಿಗೆ ಸಂಸ್ಥೆ ಇಡೀ ದೇಶದಲ್ಲಿಯೇ ಅತ್ಯುತ್ತಮ. ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಸರ್ಕಾರ ಮಾತ್ರ ತಮ್ಮ ಅಧೀನದ ಬೇರೆ ನಿಗಮ, ಇಲಾಖೆ ಹಾಗೂ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ಕೊಡಬೇಕಾದ ಸೌಲಭ್ಯ ಕೊಡುತ್ತಿದೆ. ಆದರೆ, ಸರ್ಕಾರದ ಅಣತಿಯಂತೆ ನಡೆಯುತ್ತಿರುವ ಸಾರಿಗೆ ನೌಕರರಿಗೆ ಮಾತ್ರ ಮಲತಾಯಿ ಧೋರಣೆ ಮಾಡುವ ಮೂಲಕ ಸಾರಿಗೆ ನೌಕರರ ಬಾಳನ್ನು ಅತ್ಯಂತ ಹೀನಾಯ ಸ್ಥಿತಿಗೆ ತಳ್ಳದೆ ಎಂದು ತಮ್ಮ ಅಳಲು ತೋಡಿಕೊಂಡರು.

ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ..

ಆಂಧ್ರ ಸಿಎಂ ಜಗನ್‌ ಮೋಹನ್ ರೆಡ್ಡಿಯವರು ತಮ್ಮ ಚುನಾವಣಾ ಸಮಯದಲ್ಲಿ ಅಲ್ಲಿನ ಸಾರಿಗೆ ಸಂಸ್ಥೆಯನ್ನು ಸರ್ಕಾರದಲ್ಲಿ ವಿಲೀನಗೊಳಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತನ್ನು ತಪ್ಪದೇ ಈಗಾಗಲೇ ಆಂಧ್ರಪ್ರದೇಶ ಸಾರಿಗೆ ಸಂಸ್ಥೆಯನ್ನು ಸರ್ಕಾರದಲ್ಲಿ ವಿಲೀನಗೊಳಿಸಿ, ನೌಕರರ ಮನೆಯ ದೇವರಾಗಿದ್ದಾರೆ ಎಂದು ಉದಾಹರಣೆ ನೀಡಿದರು. ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮತ್ತು ಶಾಸಕರ ಮೇಲೆ ಅಪಾರ ಗೌರವವಿದೆ.

ಮಾನವ ಪ್ರಯತ್ನಗಳು ಫಲ ನೀಡದೆ ಇದ್ದಾಗ ದೇವರ ಮೊರೆ ಹೋಗುವುದು ಎಂಬಂತೆ ಬೇರೆ ದಾರಿ ಇಲ್ಲದೇ ಕಷ್ಟ ನಿವಾರಿಸಲು ಧರ್ಮಸ್ಥಳಕ್ಕೆ ಇತರೆ ಮಠಗಳಿಗೆ ಹೋಗಿ ಬರಲಾಗಿದೆ ಎಂದರು. ಕೂಡಲೇ ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರಿಗೆ ಇರುವ ಎಲ್ಲಾ ಸೌಲಭ್ಯವನ್ನು ನೀಡುವಂತೆ ಮನವಿ ಮಾಡಿದರು.

Intro:ಹಾಸನ: ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಘೋಷಣೆ ಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
     ಸಾರ್ವಜನಿಕರಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳಲ್ಲಿ ಸಾರಿಗೆಯು ಒಂದಾಗಿದೆ. ಆದರೇ ನೌಕರರ ನೋವುಗಳು ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ. ಕ.ರಾ.ರ.ಸಾ.ಸಂಸ್ಥೆಯು ನಾಲ್ಕು ನಿಗಮಗಳಲ್ಲಿ ೧ ಲಕ್ಷದ ೨೫ ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ತಮ್ಮ ಕುಟುಂಬದ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಬಂದು-ಬಳಗದ ಯಾವ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಹಗಲು-ರಾತ್ರಿ ನಾಲ್ಕು ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು.
ನಮ್ಮ ಸಾರಿಗೆ ಸಂಸ್ಥೆ ಇಡೀ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸರಕಾರ ಮಾತ್ರ ತಮ್ಮ ಅಧೀನದಲ್ಲಿರುವ ಬೇರೆ ನಿಗಮ, ಇಲಾಖೆ ಹಾಗೂ ಸರಕಾರಿ ನೌಕರರಿಗೆ ಕಾಲಕಾಲಕ್ಕೆ ಕೊಡಬೇಕಾದ ಸೌಲಭ್ಯವನ್ನು ಕೊಡುತ್ತಿದೆ. ಆದರೇ ಸರಕಾರದ ಅಣತಿಯಂತೆ ನಡೆಯುತ್ತಿರುವ ಸಾರಿಗೆ ನೌಕರರಿಗೆ ಮಾತ್ರ ಮಲತಾಯಿ ದೋರಣೆ ಮಾಡುವ ಮೂಲಕ ಸಾರಿಗೆ ನೌಕರರ ಬಾಳನ್ನು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ ತಮ್ಮ ಅಳಲು ತೋಡಿಕೊಂಡರು.
     ಆಂಧ್ರಪದೇಶದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿರವರು ತಮ್ಮ ಚುನಾವಣಾ ಸಮಯದಲ್ಲಿ ಅಲ್ಲಿನ ಸಾರಿಗೆ ಸಂಸ್ಥೆಯನ್ನು ಸರಕಾರದಲ್ಲಿ ವಿಲೀನಗೊಳಿಸುವ ಭರವಸೆ ನೀಡಿದಂತೆ ಕೊಟ್ಟ ಮಾತನ್ನು ತಪ್ಪದೇ ಈಗಾಗಲೇ ಆಂದ್ರಪ್ರದೇಶ ಸಾರಿಗೆ ಸಂಸ್ಥೆಯನ್ನು ಸರಕಾರದಲ್ಲಿ ವಿಲೀನಗೊಳಿಸಿ ಮನೆಯ ದೇವರಾಗಿದ್ದಾರೆ ಎಂದು ಉದಾಹರಣೆ ನೀಡಿದರು.
ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮತ್ತು ಶಾಸಕರ ಮೇಲೆ ಅಪಾರವಾದ ಗೌರವವಿದ್ದು, ಮಾನವ ಪ್ರಯತ್ನಗಳು ಫಲ ನೀಡದೆ ಇದ್ದಾಗ ದೇವರ ಮೊರೆ ಹೋಗುವುದು ಎಂಬಂತೆ ಬೇರೆ ದಾರಿ ಇಲ್ಲದೇ ಕಷ್ಟ ನಿವಾರಿಸಲು ಧರ್ಮಸ್ಥಳಕ್ಕೆ ಇತರೆ ಮಠಗಳಿಗೆ ಹೋಗಿ ಬರಲಾಗಿದೆ ಎಂದರು.
 ಕೂಡಲೇ ಕರ್ನಾಟಕ ಸರಕಾರವು ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳನ್ನು ಸರಕಾರದಲ್ಲಿ ವಿಲೀನಗೊಳಿಸಿ ಸರಕಾರಿ ನೌಕರರಿಗೆ ಇರುವ ಎಲ್ಲಾ ಸೌಲಭ್ಯವನ್ನು ನೀಡುವಂತೆ ನಮ್ಮ ದಶಕಗಳ ಕಷ್ಟಗಳನ್ನು ನಿವಾರಣೆ ಮಾಡಿಕೊಡಲು ಮನವಿ ಮಾಡಿದರು.

ಬೈಟ್ : ಚಂದ್ರಶೇಖರ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ
 
Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.