ಹಾಸನ: ಪ್ರತಿ ತಾಲೂಕಿಗೆ 15 ಕೆಎಸ್ಆರ್ಟಿಸಿ ಬಸ್ಗಳಂತೆ ಒಟ್ಟು 80 ಬಸ್ಗಳು ಸಂಚಾರ ಆರಂಭಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ನಿಯಂತ್ರಕ ಮಂಜುನಾಥ್ ತಿಳಿಸಿದರು.
‘ಈಟಿವಿ ಭಾರತ’ದೊಂದಿಗೆ ಮಾತನಾಡಿದ ಅವರು, ಕೊರೊನಾ ಪ್ರಕರಣದ 3ನೇ ಹಂತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಡಿಲಿಕೆ ಘೋಷಿಸಿದೆ. ನಾಳೆ ಕೇಂದ್ರ ಸ್ಥಾನದಿಂದ ನಗರ ಸಾರಿಗೆ ಬಸ್ಗಳನ್ನು ಒಳಗೊಂಡಂತೆ ಜಿಲ್ಲೆಯ ಎಂಟು ತಾಲೂಕುಗಳಿಗೆ 15 ಬಸ್ಗಳು ಸಂಚಾರಿಸಲಿವೆ ಎಂದರು.
ಪ್ರತಿ ಬಸ್ನಲ್ಲಿ 28ರಿಂದ 30 ಪ್ರಯಾಣಿಕರು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಚಾಲಕರಿಗೂ ಹಾಗೂ ನಿರ್ವಾಹಕನಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಗುತ್ತಿದ್ದು, ಬಸ್ನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಗರ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಕರು ಜಿಗ್ಜಾಗ್ ರೀತಿಯಲ್ಲಿ ಕುಳಿತು ಪ್ರಯಾಣಿಸಬೇಕು ಎಂದು ಸೂಚಿಸಿದ್ದಾರೆ.
ಹೊರ ಜಿಲ್ಲೆಗಳಿಗೆ ಸದ್ಯಕ್ಕೆ ಯಾವುದೇ ಬಸ್ಗಳು ಸಂಚರಿಸುತ್ತಿಲ್ಲ. ಜಿಲ್ಲಾಡಳಿತ ಅಥವಾ ಕೇಂದ್ರ ಸ್ಥಾನದಿಂದ ಅನುಮತಿ ಪತ್ರ ನೀಡಿದವರಿಗೆ 25ರಿಂದ 30 ಪ್ರಯಾಣಿಕರನ್ನು ವಿಶೇಷ ವಾಹನ ಎಂದು ಪರಿಗಣಿಸಿ, ಅವರನ್ನು ತಪಾಸಣೆಗೊಳಪಡಿಸಿ ನಂತರ ಕರೆಯಲಾಗುತ್ತದೆ ಎಂದರು.
ಇನ್ನು ಈಗಾಗಲೇ ಕೋವಿಡ್ ಪ್ರಕರಣದಿಂದ ಹಾಸನ ಜಿಲ್ಲೆಯ ವಿವಿಧ ಘಟಕಗಳಿಂದ ಒಟ್ಟಾರೆ 40 ಕೋಟಿಯಷ್ಟು ನಷ್ಟ ಉಂಟಾಗಿದ್ದು, ಮೂರನೇ ಹಂತದಲ್ಲಿ ಶೇಕಡಾ 50ರಷ್ಟು ಬಸ್ ಸಂಚಾರ ಮಾಡಲು ಸರ್ಕಾರ ಅನುಮತಿ ನೀಡಿರುವುದರಿಂದ ನಷ್ಟವನ್ನು ಸರಿದೂಗಿಸಲು ಕೊಂಚಮಟ್ಟಿನ ಅನುಕೂಲವಾಗುತ್ತದೆ. ಇನ್ನು ಕಳೆದ 40 ದಿನಗಳಿಂದ ಸಂಚಾರವಿಲ್ಲದೆ ಡಿಪೋಗಳಲ್ಲಿ ನಿಂತಿದ್ದ ಬಸ್ಗಳನ್ನು ಇಂದು ಸ್ವಚ್ಛಗೊಳಿಸಿ ಅವುಗಳ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗುತ್ತಿದೆ ಎಂದರು.