ಹಾಸನ : ಕರ್ನಾಟಕದಲ್ಲೇ ಕನ್ನಡ ಕಲಿಸುವ ಬಗ್ಗೆ ಕೆಲವರು ನಿರ್ಲಕ್ಷ್ಯ ವಹಿಸುತ್ತಿರುವಾಗ ದುಬೈನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಅಕ್ಷರಾಭ್ಯಾಸ ಮಾಡಿಸುವ ಸಲುವಾಗಿ ದುಬೈನಲ್ಲಿ ಕನ್ನಡ ಶಾಲೆ ತೆರೆದಿದ್ದಾರೆ.
ದುಬೈನಲ್ಲಿ ನೆಲೆಸಿರುವ ಸಮಾನ ಮನಸ್ಕ 50 ಜನರ ಕನ್ನಡಿಗರ ತಂಡ 2014ರಲ್ಲಿ ಸುಮಾರು 40 ವಿದ್ಯಾರ್ಥಿಗಳನ್ನ ಸೇರಿಸಿಕೊಂಡು ಕನ್ನಡ ಶಾಲೆ ತೆರಿದಿದ್ದು, ಇಂದು ಸುಮಾರು 310 ಮಕ್ಕಳು ಕನ್ನಡವನ್ನು ಕಲಿಯುತ್ತಿದ್ದಾರೆ. ತಾವು ವಿದೇಶದಲ್ಲಿ ನೆಲೆಸಿರುವುದರಿಂದ ತಮ್ಮ ಮಕ್ಕಳು ಆಂಗ್ಲ ಭಾಷೆಯಲ್ಲೇ ಶಿಕ್ಷಣ ಪಡೆಯುತ್ತಾರೆ.
ಇದರಿಂದಾಗಿ ಅವರು ಮಾತೃಭಾಷೆ ಕನ್ನಡದ ವಿಷ್ಯದಲ್ಲಿ ಅನಕ್ಷರಾಗುತ್ತಾರೆ. ಆದ್ದರಿಂದ ಮಾತೃಭಾಷೆ ಕಲಿಯುವುದು ಕನ್ನಡ ಕಂದನ ಹಕ್ಕು ಎಂಬ ಧ್ಯೇಯದೊಂದಿಗೆ 2014 ರಲ್ಲಿ ಉಚಿತವಾಗಿ ವಾರಾಂತ್ಯದ ಕನ್ನಡ ಶಾಲೆ ಆರಂಭಿಸಿದ್ದಾರೆ.
ಸುಮಾರು ಹತ್ತು ಜನ ಶಿಕ್ಷಕರು ಸ್ವಯಂಪ್ರೇರಿತವಾಗಿ ಉಚಿತವಾಗಿ ಕನ್ನಡ ಕಲಿಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ದುಬೈನಲ್ಲಿ ನೆಲೆಸಿರು ಕನ್ನಡಿಗರು ಈ ಬಗ್ಗೆ ಮಾಹಿತಿ ಹಂಚಿಕೊಂಡು ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಕೋವಿಡ್‌ನಿಂದ ಶಾಲೆ ತೆರೆಯರು ಆಗದ ಕಾರಣ ಇದೆ ನವೆಂಬರ್ 6ರಿಂದ ಕನ್ನಡ ಶಾಲೆ ಪ್ರಾರಂಭಿಸಲಾಗುವುದು ಎಂದರು.
ನಮ್ಮ ಶಾಲೆಯ ಅಧಿಕೃತ website
http://www.kannadashaale.com
ಶಾಲೆಯ youtube channel
- " class="align-text-top noRightClick twitterSection" data="">