ಅರಸೀಕೆರೆ : ಅರಸೀಕರೆ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಸುಮಾರು 900 ಸಸಿಗಳನ್ನು ನೆಡುವ ಮೂಲಕ ಜಲಾಮೃತ ಯೋಜನೆಗೆ ಚಾಲನೆ ನೀಡಲಾಗಿದೆ.
ಸಾಮಾಜಿಕ ಅರಣ್ಯ ಇಲಾಖೆ, ತಾಲೂಕು ಪಂಚಾಯತ್, ಕೃಷಿ ಇಲಾಖೆ ಇವರುಗಳ ಸಹಯೋಗದೊಂದಿಗೆ 2019ನ್ನು ಜಲವರ್ಷ ಎಂದು ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನಲೆಯಲ್ಲಿ ಈ ಜಲಾಮೃತ ಯೋಜನೆಗೆ ಚಾಲನೆ ನೀಡಲಾಗಿದೆ.
ಸಸಿಗಳನ್ನು ಬೆಳೆಸುವ ಮೂಲಕ ಹಳ್ಳಿಗಳನ್ನ ಹಸಿರಾಗಿಡುವ ದೃಷ್ಟಿಯಿಂದ ಗ್ರಾಮದ ಯುವಕರು ಹಸಿರು ಸೇನೆ ಎಂಬ ತಂಡವನ್ನು ಕಟ್ಟಿಕೊಂಡು ಗಿಡಗಳನ್ನ ನೆಟ್ಟು ಅದರ ಪಾಲನೆ ಪೋಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿರುವುದು ಶ್ಲಾಘನೀಯ.
ಯುವಕರ ಉತ್ಸಾಹವನ್ನು ಪ್ರೋತ್ಸಾಹಿಸುವ ಸಲುವಾಗಿ ಅರಣ್ಯ ಇಲಾಖೆ, ತಾಲೂಕು ಪಂಚಾಯತ್, ಕಂದಾಯ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು ಸಹಕರಿಸಿ ಇಂದು ಅದೇ ಗ್ರಾಮದಲ್ಲಿ ಜಲಾಮೃತ ಯೋಜನೆಯಡಿ ಸುಮಾರು 900 ಗಿಡಗಳನ್ನ ನೆಡುವ ಮೂಲಕ ಮಾದರಿಯಾಗಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಪಟೇಲ್ ಶಿವಪ್ಪ ಮಾತನಾಡಿ, ಯುವಕರ ಉತ್ಸಾಹವನ್ನು ಪ್ರಶಂಸಿದ್ದಾರೆ. ಇದೇ ಸಂದರ್ಭದಲ್ಲಿ ಇ.ಒ ಕೃಷ್ಣಮೂರ್ತಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಕೆ.ಆರ್. ನಗರ ಮಠದ ಶ್ರೀ ಶಿವಾನಂದಪುರಿ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.