ETV Bharat / state

ಹೆಚ್.ಡಿ. ರೇವಣ್ಣ ಆಪ್ತನ ಮನೆ ಮೇಲೆ ಐಟಿ ದಾಳಿ, ಪೆನಾಲ್ಟಿ ಹಾಕುತ್ತಿರೋದು ಯಾಕೆ?

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಪ್ತ, ಗುತ್ತಿಗೆದಾರ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು ಈ ವರ್ಷ ಮಾತ್ರ ನಾನು ಐಟಿ ರಿಟರ್ನ್ ಮಾಡಿರಲಿಲ್ಲ. ಹೀಗಾಗಿ ಪೆನಾಲ್ಟಿ ಕಟ್ಟುತ್ತೇನೆ ಎಂದಿದ್ದಾರೆ.

Shivakumar's house
ರೇವಣ್ಣ ಆಪ್ತ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ
author img

By

Published : Feb 12, 2020, 3:47 PM IST

ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತ, ಗುತ್ತಿಗೆದಾರ ಶಿವಕುಮಾರ್ ಮನೆ ಮೇಲೆ ಮಂಗಳವಾರ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಹಾಸನದ ಅಡ್ಲಿಮನೆ ರಸ್ತೆಯಲ್ಲಿರುವ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇವಣ್ಣ ಆಪ್ತ ಶಿವಕುಮಾರ್, ನಾನು ರೇವಣ್ಣ ಜೊತೆ ಇದ್ದೇನೆ. ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ ಹೆಚ್.ಡಿ.ರೇವಣ್ಣ ಆಪ್ತ ಎಂದು ನನ್ನ ಮೇಲೆ ಐಟಿ ರೇಡ್ ಮಾಡಿಲ್ಲ ಎಂದರು.

ರೇವಣ್ಣ ಆಪ್ತ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಸುಮಾರು 8 ಜನ ಐಟಿ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಸುಮಾರು 12:30 ರಿಂದ ಮಧ್ಯರಾತ್ರಿ 1 ಗಂಟೆವರೆಗೆ ದಾಖಲೆ ಪರಿಶೀಲನೆ ಮಾಡಿದ್ದಾರೆ. ಕಾನೂನು ಬದ್ಧವಾಗಿ ಏನನ್ನು ಕೇಳಿದ್ದಾರೆ ಎಲ್ಲವನ್ನೂ ಕೊಟ್ಟಿದ್ದೇನೆ.

ಇಂದು ನನ್ನನ್ನು ಐಟಿ ಕಚೇರಿಗೆ ಬರಲು ಹೇಳಿದ್ದಾರೆ. ಈ ವರ್ಷ ಮಾತ್ರ ನಾನು ಐಟಿ ರಿಟರ್ನ್ಸ್ ಫೈಲ್ ಮಾಡಿರಲಿಲ್ಲ. ಹೀಗಾಗಿ ಪೆನಾಲ್ಟಿ ಹಾಕುತ್ತೇನೆ ಎಂದಿದ್ದಾರೆ. ನಮ್ಮ ಟರ್ನ್ ಓವರ್ ಮೇಲೆ ಎಷ್ಟು ಪೆನಾಲ್ಟಿ ಎಂದು ಇಂದು ಗೊತ್ತಾಗುತ್ತೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.