ಅರಕಲಗೂಡು: ಮೊಬೈಲ್ ಆ್ಯಪ್ ಬಳಸಿ ಬೆಳೆ ಸಮೀಕ್ಷೆ ನಡೆಸಿ ನಿಗದಿತ ಸಮಯದಲ್ಲಿ ಅಪ್ಲೋಡ್ ಮಾಡುವಂತೆ ರೈತರಿಗೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಸೂಚಿಸಿದ್ದಾರೆ.
ರೈತರು ಬೆಳೆದ ಬೆಳೆಗಳ ವಿವರಗಳನ್ನು ಸ್ವತಃ ನೋಂದಾಯಿಸಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ತಮ್ಮ ಮೊಬೈಲ್‌ಗಳಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಜಮೀನುಗಳ ಸರ್ವೇ ನಂಬರ್, ಹಿಸ್ಸಾ ನಂಬರ್ ಹಾಗೂ ತಾವು ಬೆಳೆದ ಬೆಳೆಗಳ ಮಾಹಿತಿ ದಾಖಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ರಾಮನಾಥಪುರ ಹೋಬಳಿ ಮಲ್ಲಿರಾಜಪಟ್ಟಣ ಗ್ರಾಮದ ಸರ್ವೇ ನಂ. 4ರಲ್ಲಿ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಬೆಳೆ ಸಮೀಕ್ಷೆ ನಡೆಸಿದರು.