ಬೇಲೂರು: ಹೋಳಿ ಹುಣ್ಣಿಮೆ ಅಂಗವಾಗಿ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಭಸ್ಮಾಸುರ ಮೂಲೆಯಲ್ಲಿ ಕಾಮಣ್ಣ ದಹನ ಮಾಡಲಾಯಿತು.
ಸಾಂಪ್ರದಾಯಿಕವಾಗಿ ನಡೆದ ಆಚರಣೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ದೇವಾಲಯದ ಭಸ್ಮಾಸುರ ಮೂಲೆಯಲ್ಲಿ ಕಾಮಣ್ಣನ ದಹನಕ್ಕೆ ಸಿದ್ಧಪಡಿಸಿದ್ದ ಅಗ್ನಿ ಕುಂಡಕ್ಕೆ ವಿಶೇಷ ಪೂಜೆ ಮಾಡುವ ಮೂಲಕ ಬೆಂಕಿ ಹಚ್ಚಲಾಯಿತು. ಕಾಮಣ್ಣನ ಸುತ್ತ ಜನರು ಕುಣಿದು ಕುಪ್ಪಳಿಸಿದರು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಮಠದ ಅರ್ಚಕ ಸುಧೀಂದ್ರಾಚಾರ್ ಮತ್ತಿತರರು ಹಾಜರಿದ್ದರು.