ETV Bharat / state

ದೇವೇಗೌಡರ ಕುಟುಂಬಕ್ಕೆ ರಾಜಕಾರಣ 'ಲಾಭದಾಯಕ ಉದ್ದಿಮೆ': ವಿಶ್ವನಾಥ್ ವ್ಯಂಗ್ಯ - undefined

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಕುಟುಂಬಕ್ಕೆ ರಾಜಕಾರಣ 'ಲಾಭದಾಯಕ ಉದ್ದಿಮೆ' ಆಗಿದೆ ಎಂದು ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ವ್ಯಂಗ್ಯವಾಡಿದರು.

ಶಾಸಕ ಹೆಚ್.ಎಂ.ವಿಶ್ವನಾಥ್
author img

By

Published : Apr 16, 2019, 7:07 PM IST

Updated : Apr 16, 2019, 7:13 PM IST

ಹಾಸನ: ದೇವೇಗೌಡರ ಕುಟುಂಬಕ್ಕೆ ರಾಜಕಾರಣ 'ಲಾಭದಾಯಕ ಉದ್ದಿಮೆ'ಯಾಗಿದೆ. ಹಾಗಾಗಿ ಅವರೆಲ್ಲಾ ಸೂಕ್ತ ಸ್ಥಾನಮಾನ ಪಡೆಯಲು ಹವಣಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ಬಲ್ ಅವರಿಗೆ, ಸಚಿವ ರೇವಣ್ಣ 1.26 ಕೋಟಿ ರೂ, ಭವಾನಿ ರೇವಣ್ಣ 43 ಲಕ್ಷ ರೂ, ಅನುಸೂಯ ಮಂಜುನಾಥ್ 22 ಲಕ್ಷ ರೂ, ಸಿ.ಎನ್.ಪಾಂಡು 15 ಲಕ್ಷ ರೂ.ಗಳನ್ನು ಸಾಲವಾಗಿ ಕೊಟ್ಟಿರುವ ಬಗ್ಗೆ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಣ್ಣ ರೈತರು ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಜೊತೆಗೆ, ದೊಡ್ಡ ದೊಡ್ಡ ಕಾಫಿ ಬೆಳೆಗಾರರೂ ಮೈ ತುಂಬ ಸಾಲ ಮಾಡಿಕೊಂಡು ಪರದಾಟ ಅನುಭವಿಸುತ್ತಿದ್ದಾರೆ. ಹೀಗಿರುವಾಗ ದೇವೇಗೌಡರ ಸಂಬಂಧಿಕರು ಇಷ್ಟೊಂದು ಹಣವನ್ನು ಪ್ರಜ್ವಲ್‌ಗೆ ಕೊಡಲು ಶಕ್ತರಾಗಿದ್ದಾರೆಯೇ? ಎಂದು ಪ್ರಶ್ನಿಸಿದರು.

ದೇವೇಗೌಡರ ಕುಟುಂಬವನ್ನು ಟೀಕಿಸಿದ ಶಾಸಕ ಹೆಚ್.ಎಂ.ವಿಶ್ವನಾಥ್

ಇನ್ನೂ ಮುಂದುವರೆದು ಮಾತನಾಡಿದ ಶಾಸಕ, ಹಾಸನಕ್ಕೆ ನಮ್ಮ ಕುಟುಂಬ‌ ಮಾಡಿರುವಷ್ಟು ಅಭಿವೃದ್ಧಿಯನ್ನು ಯಾರೂ ಮಾಡಿಲ್ಲ ಎಂದು ದೇವೇಗೌಡರು ಹೇಳುತ್ತಿದ್ದಾರೆ. ಆದರೆ, ಜನತೆ ಇವರ ಕುಟುಂಬಕ್ಕೆ ನೀಡಿರುವಷ್ಟು ರಾಜಕೀಯ ಸ್ಥಾನಮಾನಗಳನ್ನು ಯಾವ ಕುಟುಂಬಕ್ಕೂ ನೀಡಿಲ್ಲ. ದೇವೇಗೌಡರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ, ಪ್ರಧಾನಿ ಹುದ್ದೆವರೆಗೂ ಏರಿದ್ದಾರೆ. ಹೀಗಿದ್ದರೂ ಕುಟುಂಬವನ್ನು ರಾಜಕೀಯದಲ್ಲಿ ಬೆಳೆಸುವ ‌ಆಸೆ ಅವರಿಗೆ ಇನ್ನೂ ಕಡಿಮೆ ಆಗಿಲ್ಲ ಎಂದು ಚುಚ್ಚಿದರು.

Intro:ದೇವೇಗೌಡ್ರು ಕುಟುಂಬ ರಾಜಕಾರಣ ಲಾಭದಾಯಕ ಉದ್ದಿಮೆ: ವಿಶ್ವನಾಥ್ ಹಾಸನ: ದೇವೇಗೌಡ್ರು ಕುಟುಂಬಕ್ಕೆ ರಾಜಕಾರಣ  ಒಂದು ಲಾಭದಾಯಕ ಉದ್ದಿಮೆ ಆಗಿದೆ ಎಂದು ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡ್ರು ಕುಟುಂಬಕ್ಕೆ ರಾಜಕಾರಣ ಲಾಭದಾಯಕ ಉದ್ದಿಮೆಯಾಗಿದೆ. ಹಾಗಾಗಿ ಅವರ ಕುಟುಂಬದ ಸದಸ್ಯರೆಲ್ಲರಿಗೂ ರಾಜಕೀಯ ಸ್ಥಾನಮಾನ ಪಡೆಯಲು ಅವಣಿಸುತ್ತಿದೆ ಎಂದು ದೂರಿದರು. ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ಬಲ್  ಸಲ್ಲಿಸಿರುವ ಆಸ್ತಿ ವಿವರದಲ್ಲಿ ಸಚಿವ ರೇವಣ್ಣ 1.26 ಕೋಟಿ, ಭವಾನಿ ರೇವಣ್ಣ 43 ಲಕ್ಷ ಅನಸೂಯ ಮಂಜುನಾಥ್ 22 ಲಕ್ಷ, ಸಿ.ಎನ್.ಪಾಂಡು 15 ಲಕ್ಷ ಹೀಗೆ ಹಲವರು ಸಾಲ ಕೊಟ್ಟಿದ್ದಾರೆ. ಸಣ್ಣ ರೈತರು ಸಾಲಭಾದೆ ತಳಾಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ,ಡೊಡ್ಡ ಕಾಫಿ ಬೆಳೆಗಾರರೂ ಮೈತುಂಬ ಸಾಲ ಮಾಡಿದ್ದಾರೆ.ಹೀಗಿರುವಾಗ ಅವರ ಸಂಧಿಕರು ಇಷ್ಟೊಂದು ಹಣವನ್ನು ಕೊಡಲು ಶಕ್ತರಾಗದ್ದಾರೆಯೇ ಎಂದು ಪ್ರಶ್ನಿಸಿದರು. ಹಾಸನಕ್ಕೆ ನಾವು ನಮ್ಮ ಕುಟುಂಬ‌ ಮಾಡಿರುವಷ್ಟು ಅಭಿವೃದ್ಧಿಯನ್ನು ಯಾರೂ ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ, ಇವರ ಕುಟುಂಬಕ್ಕೆ ನೀಡಿರುವಷ್ಟು ರಾಜಕೀಯ ಸ್ಥಾನಮಾನಗಳನ್ನು ಯಾವ ಕುಟುಂಬಕ್ಕೂ ನೀಡಿಲ್ಲ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ.ಹೀಗಿದ್ದರೂ ಕುಟುಂಬ ಬೆಳೆಸುವ ‌ಆಸೆ ಕಡಿಮೆ ಆಗಿಲ್ಲ ಎಂದರು. - ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.‌

Body:0

Conclusion:0
Last Updated : Apr 16, 2019, 7:13 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.