ETV Bharat / state

ವಿಶ್ವನಾಥ್ ಪರಿಸ್ಥಿತಿ ಕಂಡು ನನಗೂ ನೋವಾಗುತ್ತಿದೆ: ಹೆಚ್ಎಂ.ರೇವಣ್ಣ

author img

By

Published : Jan 29, 2021, 7:59 PM IST

ವಿಶ್ವನಾಥ್ ಪರಿಸ್ಥಿತಿ ಕಂಡು ನನಗೂ ನೋವಾಗುತ್ತಿದೆ. ವಿಶ್ವನಾಥ್ ಅವನತಿಗೆ ಅವರು ರಾಜಕೀಯ ಇಚ್ಛಾಶಕ್ತಿ ಇಟ್ಟುಕೊಂಡು ಮಾಡಿದ ಕೆಲಸವೇ ಕಾರಣ. ಅದ್ದರಿಂದ ಅವರಿಗೆ ಅನ್ಯಾಯವಾಗುತ್ತಿದೆ ಎಂದು ಭಾವಿಸಿದ್ದೇನೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಹೇಳಿದರು.

ಹೆಚ್ಎಂ.ರೇವಣ್ಣ
ಹೆಚ್ಎಂ.ರೇವಣ್ಣ

ಹಾಸನ: ಹೆಚ್.ವಿಶ್ವನಾಥ್ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಅವರು ಏನೋ ಮಾಡಲು ಹೋಗಿ ಏನೆನೋ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಹೇಳಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಎಂ.ರೇವಣ್ಣ

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಪರಿಸ್ಥಿತಿ ಕಂಡು ನನಗೂ ನೋವಾಗುತ್ತಿದೆ. ವಿಶ್ವನಾಥ್ ಅವನತಿಗೆ ಅವರು ರಾಜಕೀಯ ಇಚ್ಛಾಶಕ್ತಿ ಇಟ್ಟುಕೊಂಡು ಮಾಡಿದ ಕೆಲಸವೇ ಕಾರಣ. ಅದ್ದರಿಂದ ಅವರಿಗೆ ಅನ್ಯಾಯವಾಗುತ್ತಿದೆ ಎಂದು ಭಾವಿಸಿದ್ದೇನೆ. ವಿಶ್ವನಾಥ್ ಇಲ್ಲದಿದ್ದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಅವರೇ ಮೂಲ ಕಾರಣಕರ್ತರಾಗಿದ್ದಾರೆ. ರಮೇಶ್ ಜಾರಕಿಹೊಳಿ ಎಷ್ಟೇ ಪ್ರಯತ್ನಪಟ್ಟರು ನಂಬರ್ ಗೇಮ್ ಆಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಮುಂಬೈಗೆ ಟೀಂ ಒಗ್ಗೂಡಿಸಿದ್ದೇ ಹೆಚ್.ವಿಶ್ವನಾಥ್. ಅವರಿಗೆ ಅನ್ಯಾಯ ಆಗಿದ್ದು, ಇನ್ನಾದರೂ ನೆಮ್ಮದಿ ಸಿಗಲಿ ಎಂದರು.

ಕುರುಬ ಸಮುದಾಯವನ್ನು ಎಸ್​ಟಿ ಮೀಸಲಾತಿಗೆ ಸೇರಿಸುವ ಹೋರಾಟದಲ್ಲಿ ಸಿದ್ದರಾಮಯ್ಯ ವಿರುದ್ಧ ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ರಾಜ್ಯದ ಅತ್ಯುತ್ತಮ ಮುಖ್ಯಮಂತ್ರಿ ಆಗಿದ್ದವರು. ನಾನು ಒಂದು ಸಮಾಜಕ್ಕೆ ಸೀಮಿತ ಆದವನಲ್ಲ ಎಂಬ ಭಾವನೆ ಅವರಲ್ಲಿದೆ. ಆದರೆ ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿದ್ದಾರೆ. ಆದರೂ ಕೂಡ ಕುರುಬ ಸಮುದಾಯವನ್ನು ಎಸ್​ಟಿ ಮೀಸಲಾತಿಗೆ ಸೇರಿಸುವ ಹೋರಾಟಕ್ಕೆ ಅವರನ್ನು ಕರೆ ತರಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.