ETV Bharat / state

ಗೋಹತ್ಯೆ ನಿಷೇಧಿಸಿ, ಬಿಗ್​ಬಾಸ್-13 ರಿಯಾಲಿಟಿ ಶೋ ಬ್ಯಾನ್​ ಗೆ ಒತ್ತಾಯ! - ಹಿಂದೂ ಜನಜಾಗೃತಿ ಸಮಿತಿ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಮತ್ತೆ ಜಾರಿಗೊಳಿಸುವಂತೆ ಹಾಗೂ ಬಿಗ್​ಬಾಸ್-13 ರಿಯಾಲಿಟಿ ಶೋ ರದ್ದುಗೊಳಿಸುವಂತೆ ​ ಒತ್ತಾಯಿಸಿ, ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಗೋಹತ್ಯೆ ನಿಷೇಧಗೊಳಿಸಿ,ಬಿಗ್​ಬಾಸ್-13 ರಿಯಾಲಿಟಿ ಶೋ ಬ್ಯಾನ್​ ಮಾಡಿ!
author img

By

Published : Nov 16, 2019, 10:07 PM IST

ಹಾಸನ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಮತ್ತೆ ಜಾರಿಗೊಳಿಸುವಂತೆ ಹಾಗೂ ಬಿಗ್​ಬಾಸ್-13 ರಿಯಾಲಿಟಿ ಶೋ ರದ್ದುಗೊಳಿಸುವಂತೆ ​ಒತ್ತಾಯಿಸಿ, ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಗೋಹತ್ಯೆ ನಿಷೇಧಗೊಳಿಸಿ,ಬಿಗ್​ಬಾಸ್-13 ರಿಯಾಲಿಟಿ ಶೋ ಬ್ಯಾನ್​ ಮಾಡಿ!

2010ರಲ್ಲಿ ಆಗಿನ ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಗೊಳಿಸಿತ್ತು. 2014ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಕ್ಷಣವೇ ಆ ಕಾನೂನನ್ನು ರದ್ದುಗೊಳಿಸಿತ್ತು. ಈಗ ಮತ್ತೆ ಭಾರತೀಯ ಜನತಾ ಪಕ್ಷವು ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಪುನಃ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಬೇಕು ಮತ್ತು ಗೋಮಾಂಸ ಮಾರಾಟ ಮತ್ತು ಸಾಗಣೆ ಮೇಲೆ ಕಠಿಣ ನಿರ್ಬಂಧ ವಿಧಿಸಬೇಕು. ಗೋವುಗಳ ಕಳ್ಳ ಸಾಗಣೆ ಮಾಡುವವರನ್ನು ತಡೆಯುವ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಒದಗಿಸಬೇಕು. ಹಿಂದೂ ಕಾರ್ಯಕರ್ತರ ಮೇಲಾಗಿರುವ ಆಕ್ರಮಣಗಳಲ್ಲಿ ಸಂಬಂಧಿಸಿದ ಗೋವುಗಳ ಕಳ್ಳಸಾಗಣೆದಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೇ,​ ಅಶ್ಲೀಲತೆ ಮತ್ತು ಲವ್ ಜಿಹಾದ್ ಪ್ರೋತ್ಸಾಹಿಸುವ ಬಿಗ್​ಬಾಸ್-13 ರಿಯಾಲಿಟಿ ಶೋ ನಿಷೇಧಿಸುವಂತೆ ಆಗ್ರಹಿಸಿದರು.

Intro:ಹಾಸನ: ಕರ್ನಾಟಕದಲ್ಲಿ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾನೂನನ್ನು ಮತ್ತೆ ಜಾರಿಗೊಳಿಸುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
​ ​ ​ ೨೦೧೦ ರಲ್ಲಿ ಆಗಿನ ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ೨೦೧೦ ಕಾನೂನು ಜಾರಿಗೊಳಿಸಿತ್ತು. ೨೦೧೪ರಲ್ಲಿ ಕಾಂಗ್ರೆಸ್ ಆಡಳಿತ ಸರಕಾರ ಅಧಿಕಾರಕ್ಕೆ ಬಂದ ಬಳಿಕ ತಕ್ಷಣವೇ ಆ ಕಾನೂನನ್ನು ರದ್ದುಗೊಳಿಸಿತ್ತು. ಈಗ ಮತ್ತೆ ಭಾರತೀಯ ಜನತಾಪಕ್ಷವು ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪರವರು ರಾಜ್ಯದಲ್ಲಿ ಪುನಃ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಬೇಕು ಮತ್ತು ಗೋಮಾಂಸ ಮಾರಾಟ ಮತ್ತು ಸಾಗಾಣಿಕೆಯ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸಬೇಕೆಂದು ಎಂದರು.
ಗೋವುಗಳ ಕಳ್ಳ ಸಾಗಾಣಿಕೆ ಮಾಡುವವರನ್ನು ತಡೆಯುವ ಹಿಂದೂ ಕಾರ್ಯಕರ್ತರಿಗೆ ರಕ್ಷಣೆಯನ್ನು ಒದಗಿಸಬೇಕು, ಹಿಂದೂ ಕಾರ್ಯಕರ್ತರ ಮೇಲಾಗಿರುವ ಆಕ್ರಮಣಗಳಲ್ಲಿ ಸಂಬಂಧಿಸಿದ ಗೋವುಗಳ ಕಳ್ಳಸಾಗಾಣಿಕೆದಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
​ ​ ​ ​ ​ ​ ಅಶ್ಲೀಲತೆ ಮತ್ತು ಲವ್ ಜಿಹಾದ್ ಪ್ರೋತ್ಸಾಹಿಸುವ ‘ಬಿಗ್ ಬಾಸ್ -೧೩’ ಈ ರಿಯಾಲಿಟಿ ಶೋ ನಿಷೇಧಿಸಿರಿ! ಟಿವಿ’ ಮಾಧ್ಯಮದಲ್ಲಿ ಪ್ರಾರಂಭವಾಗಿರುವ‘ ಬಿಗ್ ಬಾಸ್-೧೩’ ಈ ರಿಯಾಲಿಟಿ ಶೋದಲ್ಲಿ ‘ಬೆಡ್ ಫ್ರೆಂಡ್ಸ ಫಾರೆವರ್’ ಹೆಸರಿನಡಿಯಲ್ಲಿ ಮಹಿಳಾ ಮತ್ತು ಪುರುಷ ಸ್ಪರ್ಧಿಗಳನ್ನು ಜೊತೆ ಮಾಡಿ ಅವರನ್ನು ಒಂದೇ ಮಂಚದ ಮೇಲೆ ಒಂದೆಡೆ ಮಲಗುವಂತೆ ಮಾಡುವುದು, ಈ ಮೂಲಕ ಸಾಮಿಪ್ಯತೆ ಸಾಧಿಸುವುದು, ಹಣ್ಣು, ತರಕಾರಿಗಳನ್ನು ಬಾಯಿಯಿಂದ ಎತ್ತುವ ಷರತ್ತು ವಿಧಿಸಿ, ಮಹಿಳೆ -
ಪುರುಷ ಸ್ಪರ್ಧಿಗಳನ್ನು ಶಾರೀರಿಕವಾಗಿ ಸಾಮಿಪ್ಯತೆಯನ್ನು ಸಾಧಿಸುವಂತೆ ಮಾಡುವುದು, ಚುಂಬನ ದೃಶ್ಯಗಳನ್ನು ತೋರಿಸುವುದು, ಮೊದಲಾದವನ್ನು ಕುಟುಂಬದವರೊಂದಿಗೆ ನೋಡಲು ಸಾಧ್ಯವಿಲ್ಲದ ಅಶ್ಲೀಲ ಮತ್ತು ನಾಚಿಕೆಯಾಗುವಂತಹ ದೃಶ್ಯಗಳನ್ನು ತೋರಿಸಲಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಒಬ್ಬ ಕಾಶ್ಮೀರಿ ಮುಸಲ್ಮಾನ ಯುವಕನೊಂದಿಗೆ ಒಬ್ಬ ಹಿಂದೂ ಬ್ರಾಹ್ಮಣ ಯುವತಿ ಮಲಗುವುದನ್ನು ತೋರಿಸಿ‘ ಲವ್ ಜಿಹಾದ್’ ಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಭಾರತೀಯ ಪರಂಪರೆಯು ‘ಯತ್ರ ನಾರ್ಯಸ್ತು ಪೂಜಂತೆ, ರಮಂತೆ ತತ್ರ ದೇವತಾ!’ ಈ ವಚನದಂತೆ ಮಹಿಳೆಯನ್ನು ಗೌರವಿಸಲು ಕಲಿಸುತ್ತದೆ; ಆದರೆ ಮಹಿಳೆಯರನ್ನು ಉಪಭೋಗದ ವಸ್ತುವಿನಂತೆ ತೋರಿಸಿ ಅಶ್ಲೀಲತೆಯನ್ನು ಹರಡುವ ಮತ್ತು ಲವ್ ಜಿಹಾದ್ ಪ್ರೋತ್ಸಾಹಿಸುವ ‘ ಬಿಗ್ ಬಾಸ್-೧೩’ ಈ ರಿಯಾಲಿಟಿ ಶೋ ವನ್ನು ತಕ್ಷಣವೇ ನಿಷೇಧಿಸಬೇಕು, ಅಲ್ಲದೇ ಕಾರ್ಯಕ್ರಮದ ನಿರ್ಮಾಪಕರು- ನಿರ್ದೇಶಕರ ಮೇಲೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
​ ​ ​ ​ ​ ​ ತೇಲಂಗಾಣದಲ್ಲಿ ದಸರೆಯ ನಿಮಿತ್ತ ರೇಲ್ವೆ ಫ್ಲಾಟ್ ಫಾರ್ಮ ಟಿಕೀಟುಗಳಲ್ಲಿ ಮಾಡಿರುವ ದರಹೆಚ್ಚಳವನ್ನು ತಕ್ಷಣವೇ ರದ್ದುಗೊಳಿಸಬೇಕು; ನವರಾತ್ರಿ ಉತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಶ್ರೀ ದುರ್ಗಾದೇವಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲೆಸೆದ ಮತಾಂಧರ ಮೇಲೆ ಕಠಿಣ ಕ್ರಮ ಜರುಗಿಸಬೇಕು; ತ್ರಿಪುರಾದ ಶ್ರೀ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ನಡೆಯುವ ಬಲಿ ಪದ್ಧತಿಯ ಮೇಲೆ ಹೇರಲಾಗಿರುವ ನಿಷೇಧವನ್ನು ಹಿಂಪಡೆಯಲು ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಬೇಕು. ಮೇಘಾಲಯದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಶಿಕ್ಷಣ ಸಂಸ್ಥೆಯ ಕಟ್ಟಡದಿಂದ ತೆಗೆಯಲಾಗಿರುವ ಶ್ರೀ ಗಣೇಶ ಮೂರ್ತಿಯನ್ನು ಪುನಃ ಗೌರವದಿಂದ ಪ್ರತಿಷ್ಠಾಪಿಸಬೇಕು ಎಂದು ಇದೆ ವೇಳೆ ತಮ್ಮ ಮನವಿಯಲ್ಲಿ ತಿಳಿಸಲಾಯಿತು.Body:ಬೈಟ್ : ಹಿಂದೂ ಜನಜಾಗೃತಿ ಸಮಿತಿ ಸದಸ್ಯೆ, ಕವಿತಾ.Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.