ETV Bharat / state

ಹಾಸನದಲ್ಲಿ ಈ ವರ್ಷ ಮತ್ತೆ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ - etv bharat

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಶಿರವಾಗಿಲು ಬಳಿ ಮಳೆಯಿಂದ ಇಂದು ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಕಂಡು ಬಂದಿದ್ದು. ಸದ್ಯ ಯಾವುದೇ ಅಪಾಯ ಇಲ್ಲ ಹಾಗೂ ರೈಲು ಸಂಚಾರ ಶೀಘ್ರ ಆರಂಭವಾಗುವುದಾಗಿ ರೈಲ್ವೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಹಾಸನದಲ್ಲಿ ಈ ವರ್ಷ ಮತ್ತೆ ಗುಡ್ಡ ಕುಸಿತ
author img

By

Published : Jul 5, 2019, 10:52 AM IST

ಹಾಸನ: ಮಂಗಳೂರು - ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ಇಂದು ಗುಡ್ಡ ಕುಸಿದ ಪರಿಣಾಮ ತಾತ್ಕಾಲಿಕವಾಗಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಶಿರವಾಗಿಲು ಬಳಿ ಮಳೆಯಿಂದ ಇಂದು ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಕಂಡುಬಂದಿದೆ. ಮಾರ್ಗದ 86ನೇ ಮೈಲಿಯ ಸಮೀಪದಲ್ಲಿ ಇರುವ ರೈಲ್ವೆ ಸುರಂಗದ ಬಳಿ ಮಣ್ಣು ಕುಸಿಯುತ್ತಿದ್ದು, ರೈಲ್ವೆ ಕಾರ್ಮಿಕರು ತೆರವು ಕಾರ್ಯ ಮುಂದುವರಿಸಿದ್ದಾರೆ.

ಸದ್ಯ ಯಾವುದೇ ಅಪಾಯ ಇಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರೈಲು ಸಂಚಾರ ಶೀಘ್ರ ಆರಂಭವಾಗುವುದಾಗಿ ಮಾಹಿತಿ ನೀಡಿದ್ದಾರೆ. ಕಳೆದ ವರ್ಷವೂ ಇದೇ ಭಾಗದಲ್ಲಿ ಗುಡ್ಡ ಕುಸಿದು 40ಕೋಟಿಗೂ ಅಧಿಕ ನಷ್ಟ ಉಂಟಾಗಿ ರೈಲು ಮಾರ್ಗವನ್ನು ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಇಷ್ಟಾದರೂ ಈ ಕುರಿತು ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರ್ಲಕ್ಷ್ಯವಹಿಸಿದ್ದು, ಗುಡ್ಡ ಕುಸಿತದ ಕುರಿತು ಸುರಕ್ಷತೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Intro:ಹಾಸನ: ಮಂಗಳೂರು-ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ಇಂದು ಗುಡ್ಡ ಕುಸಿದ ಪರಿಣಾಮ ತಾತ್ಕಾಲಿಕವಾಗಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಶಿರವಾಗಿಲು ಬಳಿ ಮಳೆಯಿಂದ ಇಂದು ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಕಂಡುಬಂದಿದೆ. ಮಾರ್ಗದ 86ನೇ ಮೈಲಿಯ ಸಮೀಪದಲ್ಲಿ ಇರುವ ರೈಲ್ವೆ ಸುರಂಗದ ಬಳಿ ಮಣ್ಣು ಕುಸಿಯುತ್ತಿದ್ದು ರೈಲ್ವೆ ಕಾರ್ಮಿಕರು ತೆರವು ಕಾರ್ಯ ಮುಂದುವರಿಸಿದ್ದಾರೆ.

ಸದ್ಯ ಯಾವುದೇ ಅಪಾಯ ಇಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರೈಲು ಸಂಚಾರ ಶೀಘ್ರ ಆರಂಭವಾಗುವುದಾಗಿ ಮಾಹಿತಿ ನೀಡಿದ್ದಾರೆ. ಕಳೆದ ವರ್ಷವೂ ಇದೇ ಭಾಗದಲ್ಲಿ ಗುಡ್ಡ ಕುಸಿದು 40ಕೋಟಿಗೂ ಅಧಿಕ ನಷ್ಟ ಉಂಟಾಗಿ ರೈಲು ಮಾರ್ಗವನ್ನು ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಇಷ್ಟಾದರೂ ಸಹ ಈ ಕುರಿತು ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರ್ಲಕ್ಷ್ಯವಹಿಸಿದ್ದು, ಗುಡ್ಡ ಕುಸಿತದಿಂದ ಸುರಕ್ಷತೆಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.