ETV Bharat / state

ದಿನದಿಂದ ದಿನಕ್ಕೆ ಹೈಟೆಕ್ ಆಗ್ತಿದೆ ಹಾಸನದ ಹಿಮ್ಸ್ ಆಸ್ಪತ್ರೆ.. - ದಿನದಿಂದ ದಿನಕ್ಕೆ ಹೈಟೆಕ್ ಆಕ್ತಿದೆ ಹಾಸನದ ಹಿಮ್ಸ್ ಸಂಸ್ಥೆ

ಹಾಸನದ ಜಯಚಾಮರಾಜೇಂದ್ರ ಕಣ್ಣಿನ ಆಸ್ಪತ್ರೆಯಲ್ಲಿ ಹೈಟೆಕ್ ಚಿಕಿತ್ಸೆ ಲಭ್ಯವಾಗಲಿದ್ದು, ಖಾಸಗಿ ಆಸ್ಪತ್ರೆಗಿಂತ ಕಡಿಮೆ ದರದಲ್ಲಿ ಇಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಇದಕ್ಕಾಗಿ 2.5 ಕೋಟಿ ರೂ. ಮೌಲ್ಯದ ಯಂತ್ರಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.

ದಿನದಿಂದ ದಿನಕ್ಕೆ ಹೈಟೆಕ್ ಆಗ್ತಿದೆ ಹಾಸನದ ಹಿಮ್ಸ್ ಆಸ್ಪತ್ರೆ..
author img

By

Published : Jul 22, 2019, 8:55 PM IST

ಹಾಸನ: ಸರ್ಕಾರಿ ಆಸ್ಪತ್ರೆ ಎಂದರೆ ಅವ್ಯವಸ್ಥೆಗಳ ಆಗರ ಎಂಬ ಮಾತಿದೆ ಆದರೆ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಇದಕ್ಕೆ ತದ್ವಿರುದ್ಧವಾಗಿದ್ದು, ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದೆ.

ದಿನದಿಂದ ದಿನಕ್ಕೆ ಹೈಟೆಕ್ ಆಗ್ತಿದೆ ಹಾಸನದ ಹಿಮ್ಸ್ ಆಸ್ಪತ್ರೆ..

ನಾನಾ ದೃಷ್ಟಿ ಸಮಸ್ಯೆಗಳಿಗೆ ಇನ್ಮುಂದೆ ಖಾಸಗಿ ಆಸ್ಪತ್ರೆಗೆ ಹೋಗಬೇಕಿಲ್ಲ. ಬದಲಿಗೆ ನಗರದ ಸರ್ಕಾರಿ ಹಿಮ್ಸ್ ಆಸ್ಪತ್ರೆಯಲ್ಲಿಯೇ ಹೈಟೆಕ್ ಚಿಕಿತ್ಸೆ ಲಭ್ಯವಾಗಲಿದ್ದು, ದೃಷ್ಟಿ ಸಮಸ್ಯೆಗೆ ಕನ್ನಡಕ ಹಾಕಲು ಇಚ್ಛಿಸದವರಿಗೆ ಕಡಿಮೆ ವೆಚ್ಚದಲ್ಲಿ ಲೇಸರ್ ಚಿಕಿತ್ಸೆ ದೊರೆಯಲಿದೆ. ಖಾಸಗಿ ಆಸ್ಪತ್ರೆಗಿಂತ ಕಡಿಮೆ ದರದಲ್ಲಿ ಇಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು,ಇದಕ್ಕಾಗಿ 2.5 ಕೋಟಿ ರೂ. ಮೌಲ್ಯದ ಯಂತ್ರಗಳನ್ನು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.

2006 ರಿಂದ ಜಯ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸೆ ಮಾಡಲಾಗುತ್ತಿದೆಯಾದ್ರೂ, ಇತ್ತೀಚಿನ ದಿನಗಳಲ್ಲಿ ರೋಗಿಗಳು ಬೇರೆಡೆ ಹೋಗದಂತೆ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸುವ ಮೂಲಕ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ದರ್ಜೆಗೆ ಏರಿಸುವ ಮೂಲಕ ಜನ ಸ್ನೇಹಿಯಾಗುತ್ತಿದೆ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯು ಬಡ ರೋಗಿಗಳಿಗೆ ಉತ್ತಮ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದ್ದು, ನೇತ್ರ ಚಿಕಿತ್ಸಾ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಕೋರ್ಸ್​ಗಳನ್ನ ಪ್ರಾರಂಭಿಸಿ ದಿನೇ ದಿನೇ ತನ್ನ ಸೇವೆಗಳನ್ನು ಉತ್ತಮಪಡಿಸಿಕೊಳ್ಳುತ್ತಿದೆ.

ಈ ನಿಟ್ಟಿನಲ್ಲಿ ಆಸ್ಪತ್ರೆಯ ನೇತ್ರ ವಿಭಾಗದ ಅವಶ್ಯಕ ಸೇವೆಗಳಾದ ರೆಟಿನಾ, ಕಣ್ಣಾಲಿ ಮತ್ತು ಗ್ಲುಕೋಮಾ ವಿಭಾಗವನ್ನು ವಿಶ್ವ ದರ್ಜೆಯ ಮಾದರಿಯಲ್ಲಿ ಉನ್ನತೀಕರಿಸಲಾಗಿದೆ. ಅತ್ಯುನ್ನತ ತಂತ್ರಜ್ಞಾನ ಹೊಂದಿದ ಓ.ಸಿ.ಟಿ, ಸ್ಪೆಕ್ಯೂಲರ್ ಮೈಕ್ರೋಸ್ಕೋಪಿ, ಆಟೋರೇಫ್ಕೆ, ವಿಟ್ರಾಕ್ಟಮಿ, ಎಲ್.ಇ.ಡಿ. ಶಸ್ತ್ರಚಿಕಿತ್ಸಾ ಮೈಕ್ರೋಸ್ಕೋಪ್, ಎನ್.ಡಿ.ಯಾಗ್ ಲೇಸರ್, ಗ್ರೀನ್ ಲೇಸರ್, ಬಿ.ಸ್ಕಾನ್, ಪೆರಿಮೀಟರ್ ಒಳಗೊಂಡಂತೆ ಆತ್ಯಾಧುನಿಕ ಉಪಕರಣಗಳನ್ನು 2 ಕೋಟಿ ವೆಚ್ಚದಲ್ಲಿ ಅಳವಡಿಸಲಾಗಿದೆ.

ಕೇಂದ್ರ ಸರ್ಕಾರದಿಂದ ನೇತ್ರ ವಿಭಾಗಕ್ಕೆ ಹಣ ನೀಡಿ ಎಂದು ಮನವಿ ಮಾಡಲಾಗಿತ್ತು. ಕೇಂದ್ರ ಸರ್ಕಾರದಿಂದ ಕಣ್ಣಿನ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಪ್ರತಿ ವಿದ್ಯಾರ್ಥಿಗೆ 1.6 ಕೋಟಿ ಸಹಾಯಧನ ನೀಡುತ್ತಿದ್ದು, ಕಾಲೇಜಿನ ಇಬ್ಬರು ವಿದ್ಯಾರ್ಥಿಗೆ ಪ್ರತಿ ವರ್ಷ 3-2 ಕೋಟಿ ಸಹಾಯ ಧನ ನೀಡಲು ಒಪ್ಪಿದೆ. ಸಹಾಯಧನ ಬಂದ ಮೇಲೆ ಇನ್ನು ಉತ್ತಮ ಕೆಲಸ ಮಾಡಲು ಮುಂದಾಗುತ್ತೇವೆ.

ಸಂಸ್ಥೆಯ ನೇತ್ರ ಚಿಕಿತ್ಸಾ ವಿಭಾಗವನ್ನು ಉನ್ನತೀಕರಿಸಲಾಗಿದ್ದು, ಕಣ್ಣಿನ ಮಧುಮೇಹ, ಕಣ್ಣಿನ ಒತ್ತಡ ಸಂಬಂಧಿ ಮತ್ತು ಕಣ್ಣಾಲಿಯ ಖಾಯಿಲೆ ಹಾಗೂ ಇತರೆ ಕಣ್ಣಿನ ಖಾಯಿಲೆಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿ, ಖಾಸಗಿ ವಲಯದಲ್ಲಿ ಅತಿ ದುಬಾರಿಯಾದ ಈ ಚಿಕಿತ್ಸೆಗಳನ್ನು ಜನ ಸಾಮಾನ್ಯರಿಗೆ ಹಾಗೂ ಬಡರೋಗಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಖಾಸಗಿ ವಲಯಕ್ಕಿಂತ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲು ಮುಂದಾಗಿದ್ದೇವೆ ಎಂದು ಹಿಮ್ಸ್ ನಿರ್ದೇಶಕ ರವಿಕುಮಾರ್​ ತಿಳಿಸಿದ್ದಾರೆ.

Intro:ಹಾಸನ: ಸರ್ಕಾರಿ ಆಸ್ಪತ್ರೆ ಎಂದರೆ ಅವ್ಯವಸ್ಥೆಗಳ ಆಗರ ಎಂಬ ಮಾತಿದೆ ಆದರ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಇದಕ್ಕೆ ತದ್ವಿರುದ್ಧವಾಗಿದ್ದು, ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದ್ದು, ಕಣ್ಣಿನ ಘಟಕ ಮತ್ತಷ್ಟು ಉತ್ಕೃಷ್ಟಗೊಂಡಿದೆ.ಅದ್ರ ಒಂದು ವರದಿ ಇಲ್ಲಿದೆ ನೋಡಿ....

ಹೌದು, ನಾನಾ ದೃಷ್ಟಿ ಸಮಸ್ಯೆಗಳಿಗೆ ಇನ್ನು ಮುಂದೆ ಖಾಸಗಿ ಆಸ್ಪತ್ರೆಗೆ ಹೋಗಬೇಕಿಲ್ಲ. ಬದಲಿಗೆ ನಗರದ ಸರ್ಕಾರಿ ಹಿಮ್ಸ್ ಆಸ್ಪತ್ರೆಯಲ್ಲಿಯೇ ಹೈಟೆಕ್ ಚಿಕಿತ್ಸೆ ಲಭ್ಯವಾಗಲಿದೆ. ದೃಷ್ಟಿ ಸಮಸ್ಯೆಗೆ ಕನ್ನಡಕ ಹಾಕಲು ಇಚ್ಛಿಸದವರಿಗೆ ಇನ್ನು ಮುಂದೆ ಅತೀ ಕಡಿಮೆ ವೆಚ್ಚದಲ್ಲಿ ಇಲ್ಲಿ ಲೇಸರ್ ಚಿಕಿತ್ಸೆ ದೊರೆಯಲಿದ್ದು, ಖಾಸಗಿ ಆಸ್ಪತ್ರೆಗಿಂತ ಕಡಿಮೆ ದರದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಇದಕ್ಕಾಗಿ 2.5 ಕೋಟಿ ರೂ. ಮೌಲ್ಯದ ಯಂತ್ರಗಳನ್ನು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.

2006 ರಿಂದ ಹಿಮ್ಸ್ನಲ್ಲಿ ನೇತ್ರ ಚಿಕಿತ್ಸೆ ಮಾಡಲಾಗುತ್ತಿದೆಯಾದ್ರೂ ಇತ್ತೀಚಿನ ದಿನಗಳಲ್ಲಿ ರೋಗಿಗಳು ಬೇರೆಡೆ ಹೋಗದಂತೆ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸುವ ಮೂಲಕ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ದರ್ಜೆಗೆ ಏರಿಸುವ ಮೂಲಕ ಜನ ಸ್ನೇಹಿಯಾಗುತ್ತಿದೆ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯು ಬಡ ರೋಗಿಗಳಿಗೆ ಉತ್ತಮ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದ್ದು, ನೇತ್ರ ಚಿಕಿತ್ಸಾ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಕೋರ್ಸ್ಗಳನ್ನು ಪ್ರಾರಂಭಿಸಿ ದಿನೇ ದಿನೇ ತನ್ನ ಸೇವೆಗಳನ್ನು ಉತ್ತಮಪಡಿಸಿಕೊಳ್ಳುತ್ತಿದೆ.

ಈ ನಿಟ್ಟಿನಲ್ಲಿ ಆಸ್ಪತ್ರೆಯ ನೇತ್ರ ವಿಭಾಗದ ಅವಶ್ಯಕ ಸೇವೆಗಳಾದ ರೆಟೀನಾ, ಕಣ್ಣಾಲೆ ಮತ್ತು ಗ್ಲಾಕೋಮಾ ವಿಭಾಗವನ್ನು. ವಿಶ್ವ ದರ್ಜೆಯ ಮಾದರಿಯಲ್ಲಿ ಉನ್ನತೀಕರಿಸಲಾಗಿದೆ. ಅತ್ಯುನ್ನತ ತಂತ್ರಜ್ಞಾನ ಹೊಂದಿದ ಸುಮಾರು 2 ಕೋಟಿ ವೆಚ್ಚದಲ್ಲಿ ಓ.ಸಿ.ಟಿ, ಸ್ಪೆಕ್ಯೂಲರ್ ಮೈಕ್ರೋಸ್ಕೋಪಿ, ಆಟೋರೇಫ್ಕೆ, ವಿಟ್ರಾಕ್ಟಮಿ, ಎಲ್.ಇ.ಡಿ. ಶಸ್ತ್ರಚಿಕಿತ್ಸಾ ಮೈಕ್ರೋಸ್ಕೋಪ್, ಎನ್.ಡಿ. ಯಾಗ್ ಲೇಸರ್, ಗ್ರೀನ್ ಲೇಸರ್, ಬಿ.ಸ್ಕಾನ್, ಪೆರಿಮೀಟರ್ ಒಳಗೊಂಡಂತೆ ಆತ್ಯಾಧುನಿಕ ಉಪಕರಣಗಳನ್ನು ಹಿಮ್ಸ್ ನಲ್ಲಿಯೆ ಅಳವಡಿಸಲಾಗಿದೆ.

ಡಾ.ಕವಿತಾ, ನೇತ್ರ ತಜ್ಞರು, ಹಿಮ್ಸ್, ಹಾಸನ.

ಕೇಂದ್ರಸರಕಾರದಿಂದ ನೇತ್ರ ವಿಭಾಗಕ್ಕೆ ಹಣ ನೀಡಿ ಎಂದು ಮನವಿ ಮಾಡಲಾಗಿತ್ತು. ಕೇಂದ್ರ ಸರಕಾರದಿಂದ ಕಣ್ಣಿನ ಸ್ನಾತಕೋತ್ತರ ಪ್ರತಿ ವಿದ್ಯಾರ್ಥಿಗೆ 1.6 ಕೋಟಿ ಸಹಾಯಧನ ನೀಡುತ್ತಿದ್ದು,. ಕಾಲೇಜಿನ ಇಬ್ಬರಿಗೆ ವಿದ್ಯಾರ್ಥಿಗೆ ಪ್ರತಿ ವರ್ಷ 3-2 ಕೋಟಿ ಸಹಾಯ ಧನ ನೀಡಲು ಒಪ್ಪಿದೆ. ಸಹಾಯಧನ ಬಂದ ಮೇಲೆ ಇನ್ನು ಉತ್ತಮ ಕೆಲಸ ಮಾಡಲು ಮುಂದಾಗುತ್ತೇವೆ. ಸಂಸ್ಥೆಯ ನೇತ್ರ ಚಿಕಿತ್ಸಾ ವಿಭಾಗವನ್ನು ಉನ್ನತೀಕರಿಸಲಾಗಿದ್ದು, ಕಣ್ಣಿನ ಮಧುಮೇಹ, ಕಣ್ಣಿನ ಒತ್ತಡ ಸಂಬಂಧಿ ಮತ್ತು ಕಣ್ಣಾಲೆಯ ಖಾಯಿಲೆ ಹಾಗೂ ಇತರೆ ಕಣ್ಣಿನ ಖಾಯಿಲೆಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಖಾಸಗಿ ವಲಯದಲ್ಲಿ ಅತಿ ದುಬಾರಿಯಾದ ಈ ಚಿಕಿತ್ಸೆಗಳನ್ನು ಜನಸಾಮಾನ್ಯರಿಗೆ ಹಾಗೂ ಬಡರೋಗಿಗಳಿಗೆ ಕೈಗೆಟಕುವ ಬೆಲೆಯಲ್ಲಿ ಖಾಸಗಿ ವಲಯಕ್ಕಿಂತ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲು ಮುಂದಾಗಿದ್ದೇವೆ.

ಬೈಟ್: ಡಾ. ರವಿಕುಮಾರ್, ಹಿಮ್ಸ್ ನಿರ್ದೇಶಕ.

ಒಟ್ಟಾರೆ, ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದ್ದು, ಬಡವರ ಪಾಲಿನ ಭಗೀರಥನಂತೆ ಜಿಲ್ಲೆಯ ಬಡರೋಗಿಗಳಿಗೆ ಆಸ್ಪತ್ರೆ ವರದಾನವಾಗಿದ್ದು, ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷಾಂತರ ರೂ.ಗಳನ್ನ ಖರ್ಚು ಮಾಡುವ ಬದಲು ಈಗ ಸರ್ಕಾರಿ ಆಸ್ಪತ್ರೆಯಲ್ಲಿಯೇ ಮೊದಲ ಬಾರಿಗೆ ಹೈಟೆಕ್ ಉಪಕರಣಗಳ ಮೂಲಕ ಕಣ್ಣಿನ ಚಿಕಿತ್ಸೆ ಮಾಡುವ ಕಾರ್ಯಕ್ಕೆ ಹಿಮ್ಸ್ ಮುಂದಾಗಿರೋದು ಹೆಮ್ಮೆಯ ವಿಷಯವೇ ಸರಿ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.