ETV Bharat / state

ಹಾಸನದಲ್ಲಿ ಮಳೆಯ ಆರ್ಭಟ: ಪ್ರವಾಹ ಭೀತಿ ಸೃಷ್ಟಿಸಿದ ಹೇಮಾವತಿ, ಯಗಚಿ! - ಪ್ರವಾಹದ ಎಚ್ಚರಿಕೆ

ಬೇಲೂರಿನ ಯಗಚಿ ಹಾಗೂ ಆಲೂರಿನ ವಾಟೆಹೊಳೆ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಗೊರೂರಿನ ಹೇಮಾವತಿ ಜಲಾಶಯ ತುಂಬುವ ಹಂತದಲ್ಲಿದ್ದು, ಕೇವಲ 18 ಅಡಿ ಮಾತ್ರ ಬಾಕಿ ಇದೆ. ಯಗಚಿ ಹಾಗೂ ವಾಟೆಹೊಳೆ ಜಲಾಶಯಗಳಿಂದ ನದಿಗೆ ನೀರು ಹರಿಬಿಡುತ್ತಿರುವ ಕಾರಣ ನದಿ ಪಾತ್ರದ ನಿವಾಸಿಗರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

heavy rain in hassan
ಹಾಸನದಲ್ಲಿ ಮಳೆಯ ಆರ್ಭಟ
author img

By

Published : Aug 6, 2020, 4:21 AM IST

ಹಾಸನ: ಜಿಲ್ಲಾದ್ಯಂತ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ಹೇಮಾವತಿ, ಯಗಚಿ, ವಾಟೆಹೊಳೆ ಹಾಗೂ ಗಡಿ ಭಾಗದ ಕಾವೇರಿ ನದಿ ತುಂಬಿ ಹರಿದು ಪ್ರವಾಹ ಭೀತಿ ಸೃಷ್ಟಿಸಿವೆ.

ಬೇಲೂರಿನ ಯಗಚಿ ಹಾಗೂ ಆಲೂರಿನ ವಾಟೆಹೊಳೆ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಗೊರೂರಿನ ಹೇಮಾವತಿ ಜಲಾಶಯ ತುಂಬುವ ಹಂತದಲ್ಲಿದ್ದು, ಕೆಲವೇ ಅಡಿ ಮಾತ್ರ ಬಾಕಿ ಇದೆ. ಯಗಚಿ ಹಾಗೂ ವಾಟೆಹೊಳೆ ಜಲಾಶಯಗಳಿಂದ ನದಿಗೆ ನೀರು ಹರಿಬಿಡುತ್ತಿರುವ ಕಾರಣ ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಹಾಸನದಲ್ಲಿ ಮಳೆಯ ಆರ್ಭಟ

ಹೇಮಾವತಿ ನದಿ ಈಗಾಗಲೇ ಸಕಲೇಶಪುರದ ಮಲ್ಲೇಶ್ವರ ಸ್ವಾಮಿ ದೇಗುಲದ ಮೆಟ್ಟಿಲು ಮುಳುಗಿಸಿದೆ. ಅತ್ತ ಮೈಸೂರು ಗಡಿ ಭಾಗದಲ್ಲಿನ ರಾಮನಾಥಪುರ ಬಳಿ ಕಾವೇರಿ ನದಿ ಸಹ ಭೋರ್ಗರೆದು ತುಂಬಿ ಹರಿಯುತ್ತಿದೆ. ಜಿಲ್ಲೆಯಾದ್ಯಂತ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಜನ ಜೀವನವೂ ಅಸ್ತವ್ಯಸ್ಥವಾಗಿದೆ. ರಸ್ತೆ ಮತ್ತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಕಳೆದ 24 ಗಂಟೆಗಳಲ್ಲಿ ಮಲೆನಾಡಿನ ಸಕಲೇಶಪುರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ತಾಲೂಕಿನ ಘಟ್ಟ ಪ್ರದೇಶವಾದ ಮಾರನಹಳ್ಳಿಯಲ್ಲಿ ಗರಿಷ್ಠ 219.1 ಮಿ.ಮೀ. ಮಳೆ ಸುರಿದಿದೆ. ಚನ್ನರಾಯಪಟ್ಟಣ ತಾಲೂಕಿನ ಕಸಬಾದಲ್ಲಿ ಕನಿಷ್ಠ 2.6 ಮಿ.ಮೀ. ಮಳೆಯಾಗಿದೆ.

ತಾಲೂಕುವಾರು ಮಳೆ ವಿವರ (ಮಿ.ಮೀ.ಗಳಲ್ಲಿ)

ಹಾಸನ ತಾಲೂಕಿನ ಸಾಲಗಾಮೆ 28.6, ಹಾಸನ 24.8, ದುದ್ದ 21, ಶಾಂತಿಗ್ರಾಮ 15.2, ಕಟ್ಟಾಯ 28.3, ಗೊರೂರು 31.2, ಸಕಲೇಶಪುರದ ಹೊಸೂರು 13.2, ಶುಕ್ರವಾರ ಸಂತೆ 158, ಹೆತ್ತೂರು 180.4, ಯಸಳೂರು 172, ಸಕಲೇಶಪುರ 126.3 ಬಾಳ್ಳುಪೇಟೆ 55, ಬೆಳಗೋಡು 86.2, ಮಾರನಹಳ್ಳಿ 219.1, ಹಾನುಬಾಳು 138.4 ಅರಸೀಕೆರೆಯ ಜಾವಗಲ್ 8.2, ಗಂಡಸಿ 12.2, ಕಸಬಾ 9.5, ಕಣಕಟ್ಟೆ 8.8, ಯಳವಾರೆ 10.8.

ಹೊಳೆನರಸೀಪುರದ ಹಳ್ಳಿ ಮೈಸೂರು 14.3, ಹೊಳೆನರಸೀಪುರ 13.4, ಹಳೆಕೋಟೆ 18.6, ಅರಕಲಗೂಡಿನ ಮಲ್ಲಿಪಟ್ಟಣ 26, ಕಸಬಾ 40.3, ದೊಡ್ಡಮಗ್ಗೆ 19.2, ರಾಮನಾಥಪುರ 32, ಬಸವಪಟ್ಟಣ 14.2, ಕೊಣನೂರು 24.6, ದೊಡ್ಡಬೆಮ್ಮತ್ತಿ 46.4, ಆಲೂರು 35.2, ಕುಂದೂರು 37, ಕೆ. ಹೊಸಕೋಟೆ 125, ಪಾಳ್ಯ 34.8, ಬೇಲೂರಿನ ಹಳೆಬೀಡು 29.8, ಬೇಲೂರು 51.6, ಹಗರೆ 27.2, ಬಿಕ್ಕೋಡು 61, ಗೆಂಡೆಹಳ್ಳಿ 116, ಅರೆಹಳ್ಳಿ 91, ಚನ್ನರಾಯಪಟ್ಟಣದ ಕಸಬಾ 2.6, ಉದಯಪುರ 10, ಬಾಗೂರು 14, ನುಗ್ಗೆಹಳ್ಳಿ 4, ಶ್ರವಣಬೆಳಗೊಳ 8.7

ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಎಚ್ಚರಿಕೆ

ಬೇಲೂರಿನ ಯಗಚಿ ಹಾಗೂ ಆಲೂರು ಸಮೀಪದ ವಾಟೆಹೊಳೆ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಜಲಾಶಯಗಳಿಗೆ ಒಳ ಹರಿವು ಹೆಚ್ಚಿದ್ದು ಯಾವುದೇ ಕ್ಷಣದಲ್ಲಿ ಈ ಅಣೆಕಟ್ಟುಗಳಿಂದ ನೀರು ಹೊರಬಿಡುವ ಸಂಭವವಿದೆ. ನದಿ ಪಾತ್ರದ ನಿವಾಸಿಗರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಜಲಾಶಯಗಳ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್​ಗಳು ಪ್ರಕಟಣೆಗಳಲ್ಲಿ ಮುನ್ನೆಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.