ಬೆಂಗಳೂರು: ಹಾಸನ ಜಿಲ್ಲಾ ಪಂಚಾಯತ್ನಿಂದ ಜಿಲ್ಲಾ ಆಯುಷ್ ಇಲಾಖೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸಕಲೇಶಪುರ ಮತ್ತು ಅರಸೀಕೆರೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹುದ್ದೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಹಾಸನ ಜಿಲ್ಲಾ ಪಂಚಾಯತ್ನಿಂದ ಕೆಳಗಿನ ಹುದ್ದೆಗಳ ನೇಮಕಾತಿ ನಡೆಯಲಿದೆ
- ಸ್ಪೆಷಲಿಸ್ಟ್ ಡಾಕ್ಟರ್ (ಆಯುಷ್) - 1
- ಸ್ಪೆಷಲಿಸ್ಟ್ ಡಾಕ್ಟರ್ (ಬಿಎನ್ವೈಎಸ್) - 1
- ಫಾರ್ಮಸಿಸ್ಟ್ - 5
- ಮಸಾಜಿಸ್ಟ್ - 2
- ಮಲ್ಟಿ ಪರ್ಪಸ್ ವರ್ಕರ್ - 1
- ಸಮುದಾಯ ಆರೋಗ್ಯ ಅಧಿಕಾರಿ - 3
ವಿದ್ಯಾರ್ಹತೆ:
- ಸ್ಪೆಷಲಿಸ್ಟ್ ಡಾಕ್ಟರ್ (ಆಯುಷ್) - ಬಿಎಎಂಎಸ್, ಎಂಎಸ್, ಎಂಡಿ
- ಸ್ಪೆಷಲಿಸ್ಟ್ ಡಾಕ್ಟರ್ (ಬಿಎನ್ವೈಎಸ್) - ಬಿಎನ್ವೈಎಸ್, ಸ್ನಾತಕೋತ್ತರ ಪದವಿ
- ಫಾರ್ಮಸಿಸ್ಟ್ - 10ನೇ ತರಗತಿ, ಡಿಪ್ಲೊಮಾ
- ಮಸಾಜಿಸ್ಟ್ - 7ನೇ ತರಗತಿ
- ಮಲ್ಟಿ ಪರ್ಪಸ್ ವರ್ಕರ್ - 10ನೇ ತರಗತಿ
- ಸಮುದಾಯ ಆರೋಗ್ಯ ಅಧಿಕಾರಿ - ಬಿಎಎಂಎಸ್, ಬಿಯುಎಂಎಸ್
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಪರಿಶಿಷ್ಟ ಜಾರಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಹುದ್ದೆ ಆಯ್ಕೆ : ಈ ಹುದ್ದೆಗಳಿಗೆ ಮೆರಿಟ್ ಮತ್ತು ಸಂದರ್ಶನದ ಮೂಲಕ ಹುದ್ದೆಗೆ ಆಯ್ಕೆ ನಡೆಸಲಾಗುವುದು
ಅರ್ಜಿ ಸಲ್ಲಿಕೆ ವಿಧಾನ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅಧಿಕೃತ ಅಧಿಸೂಚನೆ ಜೊತೆಯಲ್ಲಿ ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ಶೈಕ್ಷಣಿಕ ದಾಖಲಾತಿ, ಮೀಸಲಾತಿ ಪ್ರಮಾಣ ಸೇರಿದಂತೆ ಇನ್ನಿತರ ಪ್ರಮಾಣಪತ್ರಗಳನ್ನು ಸೇರಿಸಿ. ಈ ಕೆಳಗಿನ ವಿಳಾಸಕ್ಕೆ ಸಲ್ಲಿಕೆ ಮಾಡಬೇಕಿದೆ.
ಕಾರ್ಯದರ್ಶಿಗಳು, ಜಿಲ್ಲಾ ಆಯುಷ್ ಅಧಿಕಾರಿಗಳು, ಹೊಸಲೈನ್ ರೋಡ್, ಹಾಸನ- 573201
ಈ ಹುದ್ದೆಗಳಿಗೆ ನವೆಂಬರ್ 29 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್ 28 ಆಗಿದೆ.
ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು hassanzp.kar.nic.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡದಲ್ಲಿ 250 ಮ್ಯಾನೇಜರ್ ಹುದ್ದೆಗಳ ನೇಮಕಾತಿ; ಇಲ್ಲಿದೆ ಮಾಹಿತಿ