ETV Bharat / state

ಹಾಸನಕ್ಕೆ ನಾನೇ ಮುಂದಿನ ಸಾರಥಿ... ಎಫ್​ಬಿಯಲ್ಲಿ ಜೋರಾಗಿದೆ ಮಾಜಿ ಎಂಎಲ್ಎ ಪುತ್ರನ ಪೋಸ್​! - hassan news

ಸದ್ಯ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್​ನಲ್ಲಿ ಪ್ರಬಲ ನಾಯಕನ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರೆ ಹಾಸನದಿಂದ ಸ್ಪರ್ಧಿಸಲು ಜೆಡಿಎಸ್​​​ನಿಂದ ಪ್ರಮುಖ ಅಭ್ಯರ್ಥಿಯೇ ಇಲ್ಲದಂತಾಗಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಯುವ ರಾಜಕಾರಣಿ ಸ್ವರೂಪ್ ಮುಂದಾಗಿದ್ದಾರೆ. ಕೂಸು ಹುಟ್ಟುವುದಕ್ಕೂ ಮುನ್ನವೇ ಕುಲಾಯಿ ಹೊಲೆಸಿದ್ರು ಎನ್ನುವಂತೆ ಹಾಸನದ ಮುಂದಿನ ಶಾಸಕ ತಾನೇ ಅಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಸ್ವರೂಪ್​.

ಸ್ವರೂಪ್
author img

By

Published : Oct 15, 2019, 4:15 PM IST

ಹಾಸನ: ಜಿಲ್ಲೆಯ ಹಾಸನ ವಿಧಾನಸಭ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿಲ್ಲ. ಯಾಕೆಂದರೆ ಸದ್ಯ ಬಿಜೆಪಿಯ ಪ್ರೀತಂ ಗೌಡ ಶಾಸಕರಾಗಿದ್ದಾರೆ. ಆದ್ರೆ ಮಾಜಿ ಶಾಸಕರ ಪುತ್ರರೊಬ್ಬರು ತಾನೇ ಹಾಸನದ ಮುಂದಿನ ಶಾಸಕ ಎಂದು ಹೇಳಿಕೊಳ್ಳುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಆಯ್ಕೆಯಾಗಿದ್ದರೆ, ಹಾಸನ ಕ್ಷೇತ್ರ ಮಾತ್ರ ಬಿಜೆಪಿ ಪಾಲಾಗಿತ್ತು. 4 ಬಾರಿ ಶಾಸಕರಾಗಿದ್ದ ದಿ. ಹೆಚ್.ಎಸ್. ಪ್ರಕಾಶ್ ಅವರನ್ನ ಆಗಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಪ್ರೀತಂಗೌಡ ಮಣಿಸಿದ್ದರು. ಈ ನಡುವೆ ಅನಾರೋಗ್ಯದಿಂದ ಬಳಲುತ್ತಿದ್ದ ಹೆಚ್.ಎಸ್. ಪ್ರಕಾಶ್, ಈ ಸೋಲಿನ ಬಳಿಕ ಆರೋಗ್ಯ ಮತ್ತಷ್ಟು ಹದಗೆಟ್ಟು ಕೊನೆಯುಸಿರೆಳೆದರು. ಆದರೀಗ ಅವರ ಮಗ ಸ್ವರೂಪ್ ರಾಜಕೀಯವಾಗಿ ಮಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್​ನಲ್ಲಿ ನಾನೇ ಹಾಸನದ ಮುಂದಿನ ಶಾಸಕ ಎಂದು ಖಾತೆ ಹೊಂದಿರುವ ಸ್ವರೂಪ್​

ಸದ್ಯ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೊರತೆ ಎದ್ದುಕಾಣುತ್ತಿದೆ. ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರೆ ಹಾಸನದಿಂದ ಸ್ಪರ್ಧಿಸಲು ಜೆಡಿಎಸ್​​​ನಿಂದ ಪ್ರಮುಖ ಅಭ್ಯರ್ಥಿಯೇ ಇಲ್ಲದಂತಾಗಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಯುವ ರಾಜಕಾರಣಿ ಸ್ವರೂಪ್ ಮುಂದಾಗಿದ್ದಾರೆ. ಕೂಸು ಹುಟ್ಟುವುದಕ್ಕೂ ಮುನ್ನವೇ ಕುಲಾಯಿ ಹೊಲೆಸಿದ್ರು ಎನ್ನುವಂತೆ ತಾನೇ ಹಾಸನದ ಮುಂದಿನ ಶಾಸಕ ಅಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಜೊತೆ ಓಡಾಡಿಕೊಂಡು ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಸ್ವರೂಪ್ ಅವರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಗಾದಿಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಈ ನಡುವೆ ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸ್ವರೂಪ್, ತಮ್ಮ ಫೇಸ್‌ಬುಕ್ ಖಾತೆಯನ್ನ 'ಹಾಸನದ ಮುಂದಿನ ಶಾಸಕ ಸ್ವರೂಪ್' ಅಂತಾ ಬದಲಾಯಿಸಿಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರೋ ಅವರು ಒಂದಿಲ್ಲೊಂದು ಫೋಟೋ, ಶುಭಾಶಯಗಳನ್ನ ಹಂಚಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಯಾವುದೇ ಮಧ್ಯಂತರ ಚುನಾವಣೆ ಘೋಷಣೆಯಾಗದೇ ಇದ್ದರೂ, ಜೆಡಿಎಸ್​ ಅಥವಾ ಇತರೇ ಪಕ್ಷಗಳಿಂದ ಮುಂದೆ ನಡೆಯಬಹುದಾದ ಚುನಾವಣೆಯಲ್ಲಿ ಟಿಕೆಟ್​ ಸಿಗುವ ಖಚಿತತೆ ಇಲ್ಲದಿದ್ದರೂ ಕೂಡ ಹೀಗೆ ಫೇಸ್​ಬುಕ್​ನಲ್ಲಿ 'ಹಾಸನದ ಮುಂದಿನ ಶಾಸಕ ಸ್ವರೂಪ್' ಎಂದು ಬರೆದುಕೊಂಡಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

Intro:ಹಾಸನ : ನಾನೇ ಮುಂದಿನ ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕ ಅಂತಾ ಹೇಳ್ತಿರೋದು ಯಾರು? ಅನ್ನೋದನ್ನ ಹೇಳ್ತೀವಿ.. ಅದಕ್ಕೂ ಮುನ್ನ ಹಾಸನ ರಾಜಕೀಯ ವಿದ್ಯಾಮಾನಗಳ ಬಗ್ಗೆ ಒಂದಿಷ್ಟು ನೋಡುವುದಾದ್ರೆ, ಹಾಸನ ಜೆಡಿಎಸ್ ಭದ್ರಕೋಟೆ, ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾಲ್ಯ ಜೋರಾಗೇ ಇದೆ.

ಹೌದು... ಹಾಸನ ವಿಧಾನ ಸಭಾ ಕ್ಷೇತ್ರವನ್ನು ಹೊರತುಪಡಿಸಿ ಜಿಲ್ಲೆಯ ಮಿಕ್ಕೆಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಆಯ್ಕೆಯಾಗಿದ್ದರೆ ಆದ್ರೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಜೆಡಿಎಸ್ ಕೈ ತಪ್ಪಿ ಬಿಜೆಪಿ ಪಾಲಾಗಿತ್ತು, ೪ಭಾರಿ ಶಾಸಕರಾಗಿದ್ದ ದಿ||ಹೆಚ್.ಎಸ್.ಪ್ರಕಾಶ್ ಅವರನ್ನ ಆಗಿನ್ನ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ಪ್ರೀತಂಗೌಡ ಮಣಿಸಿ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲವನ್ನರಳಿಸುವಲ್ಲಿ ಯಶಸ್ವಿಯಾದ್ರು, ಈ ನಡುವೆ ಮೊದಲ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯುವಕನೆದುರು ಸೋಲನ್ನೊಪ್ಪಿಕೊಳ್ಳಬೇಕಾದ ಸನ್ನಿವಶ ಹೆಚ್.ಎಸ್.ಪ್ರಕಾಶ್ ಅವರಿಗೆದುರಾಯ್ತು, ಮೊದಲೇ ಅನರೋಗ್ಯದಿಂದ ಬಳಲುತ್ತಿದ್ದ ಪ್ರಕಶ್ ಅವರು ಸೋಲನನ್ನುಭವಿಸಿದ ನಂತರ ಅದೇ ಚಿಂತೆಯಲ್ಲಿ ಅರೋಗ್ಯದೆಡೆ ಹೆಚ್ಚು ಗಮನ ನೀಡದೇ ಕೊನೆಯುಸಿರೆಳೆದ್ರು.

ಸಜ್ಜನ ರಾಜಕಾರಣಿ ಎಂದೇ ಹೆಸರು ಮಾಡಿದ ಪ್ರಕಾಶ್ ಅವರ ಸಾವು ಜೆಡಿಎಸ್ ಪಾಲಿಗೆ ಅಕ್ಷರಶಃ ನುಂಗಲಾರದಾ ತುಪ್ಪವಾಗಿ ಪರಿಣಮಿಸಿತು, ಸದ್ಯ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೊರತೆ ಎದ್ದುಕಾಣುತ್ತಿದ್ದು, ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿರುವಂತೆ ಮಧ್ಯಂತರ ಚುನಾವಣೆ ನಡೆದಿದ್ದೇಯಾದಲ್ಲಿ ಹಾಸನದಿಂದ ಸ್ಪರ್ಧಿಸಲು ಜೆಡಿಎಸ್ ನಿಂದ ಅಭ್ಯರ್ಥಿಯೇ ಇಲ್ಲದಂತಾಗಿದೆ, ಈ ಪರಿಸ್ಥಿತಿಯಾ ಲಭ ಪಡೆದುಕೊಳ್ಳಲು ಮುಂದಾಗಿರೋ ಆ ಯುವ ರಾಜಕಾರಣಿ, ಕೂಸು ಹುಟ್ಟೋ ಮುನ್ನವೇ ಕುಲಾವೆ ಹೊಲ್ಸಿದ್ರು ಅನ್ನೋಹಾಗೆ  ನಾನೇ ಮುಂದಿನ ವಿಧಾನ ಸಭಾ ಕ್ಷೇತ್ರದ ಶಾಸಕ ಅಂತಾ ಸಮಾಜಿಕ ಜಾಲತಾಣಗಳಲ್ಲಿ ಬೀಗುತಿದ್ದಾರೆ.. ಇಂದು ನೆನ್ನೆಯಲ್ಲ, ಕಳೆದ ಹಲವಾರು ತಿಂಗಳುಗಳಿಂದಲೂ ನನೇ ಹಾಸನ ವಿಧಾನ ಸಭಾ ಕ್ಷೇತ್ರದ ಮುಂದಿನ ಶಾಸಕ ಅಂತಾ ಹೇಳ್ಕೊಂಡು ತಿರುಗುತ್ತಿದ್ದಾರೆ. ಹಾಗಿದ್ರೆ ಯಾರವ್ರು..? ಯಾರೂ ಅಷ್ಟೋಂದು ಓವರ್ ಕಾನ್ಫಿಡೆಂಸ್‌ನಲ್ಲಿರೋರು ಅಂತಾ ನೋಡುವುದಾದ್ರೆ ಅವ್ರು ಮತ್ಯಾರು ಅಲ್ಲ.. ಹಾಸನದ ಮಾಜಿ ಶಾಸಕ ಹೆಚ್.ಎಸ್ ಪ್ರಕಾಶ್ ಅವರ ಮನೆಯ ಸದಸ್ಯರಲ್ಲೊಬ್ಬರು..

ಹೌದು, ೪ ಭಾರಿ ಹಾಸನವನ್ನು ಪ್ರತಿನಿಧಿಸಿದ್ದ ಮಾಜಿ ಶಾಸಕರ ಮನೆಯವರೇ ಮತ್ತೊಮ್ಮೆ ಅಖಾಡಕ್ಕಿಳಿಯಲು ಸಿದ್ದತೆ ನಡೆಸಿಕೊಳ್ಳುತ್ತಿದ್ದಾರೆ, ಇನ್ನೂ ಹೆಚ್,ಎಸ್,ಪ್ರಕಾಶ್ ಅವರ ಮನೆ ಮಂದಿಯೆಲ್ಲಾ ರಾಜಕೀಯದಲ್ಲಿತೊಡಗಿಸಿಕೊಂಡಿರೋದ್ರಿಂದ ನಾವು ಹೇಳ ಹೊರಟಿರೋದು ಯಾರಬಗ್ಗೆ ಅಂತಾ ಗೆಸ್ ಮಾಡೋದು ಕೊಂಚ ಕಷ್ಟವಾಗಬಹುದು..
ಯೆಸ್.. ಹೆಚ್.ಎಸ್.ಪ್ರಕಾಶ್ ಅವರ ಸಹೋದರ ಹೆಚ್.ಎಸ್.ಅನೀಲ್ ಕುಮಾರ್ ಮಾಜಿ ನಗರಸಭಾ ಸದಸ್ಯರಾಗಿದ್ದವರು ಆದ್ರೆ ಕಳೆದ ನಗರಸಭಾ ಚುನಾವಣೆಯಲ್ಲೇ ರಾಜಕೀಯದಿಂದ ಹಿಂದೆ ಸರಿದಿದ್ದಾರೆ, ಮತ್ತೊಬ್ಬ ಸಹೋದರ ದೇವು ಸಹಾ ರಾಜಕೀಯವಾಗಿ ತೊಡಗಿಸಿಕೊಂಡಿದ್ದಾರಾದ್ರೂ ಮುಖ್ಯವಾಹಿನಿಗಿನ್ನು ಬಂದಿಲ್ಲ, ಇನ್ನು ಉಳಿದಿದ್ದು ಅವರ ಪುತ್ರ ಸ್ವರೂಪ್.. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಹಿಂದೆ ಮುಂದೆ ಓಡಾಡಿಕೊಂಡು ಪ್ರಜ್ವಲ್ ರೇವಣ್ಣ ಅವರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿರೋ ಸ್ವರೂಪ್ ಇದೇ ಗ್ಯಾಪ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕೃಪಾಕಟಾಕ್ಷದೊಂದಿಗೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷಗಾಧೆಯನ್ನೂ ಅನುಭವಿಸುತ್ತಿದ್ದಾರೆ. ಈ ನಡುವೆ ತಂದೆಯ ಸ್ಥಾನ ತುಂಬಲು ಮುಂದಾಗಿರೋ ಸ್ವರೂಪ್ ಊರಿಗ್ ಮುಂಚೇನೇ ಹಾಸನ ವಿಧಾನ ಸಭಾ ಚುನಾವಣೆ ಟಿಕೇಟ್‌ಗೆ ಟವೆಲ್ ಹಾಕಿರೋಹಾಗೆ ಕಾಣ್ತಿದೆ, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತಮ್ಮ ಫೇಸ್‌ಬುಕ್ ಖಾತೆಯನ್ನ ಹಾಸನದ ಮುಂದಿನ ಶಾಸಕ ಸ್ವರೂಪ್ ಅಂತಾ ಬದಲಾಯಿಸಿಕೊಂಡಿದ್ದು, ಈ ಖಾತೆಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರೋ ಸ್ವರೂಪ್.. ತಮ್ಮ ವಾಲ್‌ನಲ್ಲಿ ಪ್ರತಿದಿನ ಫೋಟೋಗಳು... ಶುಭಾಷಯಗಳನ್ನ ಹಂಚಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಟಿಕೇಟ್ ಗಿಟ್ಟಿಸಿಕೊಳ್ಳೋ ಮುನ್ನವೇ ನಾನೇ ಶಾಸಕ ಅಂತಿರೋ ಸ್ವರೂಪ್‌ಗೆ ಜೆಡಿಎಸ್ ಟಿಕೇಟ್ ಲಭಿಸುತ್ತಾ...? ಸ್ವರೂಪ್‌ಗೆ ಅಖಾಡಕ್ಕಿಳಿದ್ರೆ ಅನುಕಂಪದ ಅಲೆ ಅವರಿಗೆ ಪ್ಲೆಸ್ ಆಗುತ್ತಾ..? ಒಂದೆಡೆ ಮೋದಿ ಅಲೆ ಮತ್ತೊಂದೆಡೆ ಪ್ರೀತಂಗೌಡರ ವರ್ಚಸ್ಸಿನೆದುರು ಸ್ವರೂಪ್ ಗೆದ್ದು ಬೀಗ್ತಾರಾ ಎಂಬುದನ್ನ ಕಾದುನೋಡಬೇಕಿದೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Body:೦Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.