ಹಾಸನ: ಕರ್ನಾಟಕ ರಾಜ್ಯ ಸರ್ಕಾರವು 2011-12ನೇ ಸಾಲಿನಲ್ಲಿ ಜಾರಿಗೆ ತಂದಿರುವ ಸಕಾಲ ಕಾಯ್ದೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಸಕಾಲ ಜಿಲ್ಲಾ ಶ್ರೇಯಾಂಕ ಮತ್ತು ಕಂದಾಯ ಇಲಾಖೆಯ ಶ್ರೇಯಾಂಕದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಸಕಾಲ ಯೋಜನೆಯಲ್ಲಿ ಅರ್ಜಿಗಳ ಸ್ವೀಕಾರ, ವಿಲೇವಾರಿ ಕಾಲಮಿತಿಯೊಳಗೆ ಆಗಿರುವುದನ್ನು ಪರಿಗಣಿಸಿ ಜಿಲ್ಲೆಗೆ ಮೊದಲ ಸ್ಥಾನ ನೀಡಲಾಗಿದೆ. ಜಿಲ್ಲೆಯಲ್ಲಿ 2019ರ ಸಾಲಿನಲ್ಲಿ ಈವರೆಗೆ ಒಟ್ಟು 2,26,507 ಅರ್ಜಿಗಳು ಸ್ವೀಕೃತವಾಗಿದ್ದು, 2,41,196 ಅರ್ಜಿಗಳು ಈಗಾಗಲೇ ವಿಲೇವಾರಿಯಾಗಿವೆ.
ಉಳಿದಂತೆ ಹಾಸನ ಜಿಲ್ಲೆಯಲ್ಲಿನ ತಾಲೂಕು ಶ್ರೇಯಾಂಕವನ್ನು ನೋಡುವುದಾದ್ರೆ, ಸಕಲೇಶಪುರ, ಹಾಸನ, ಅರಕಲಗೂಡು, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ, ಆಲೂರು, ಅರಸೀಕೆರೆ ಸಕಾಲ ಕಾಯ್ದೆಯಡಿ ಹಾಸನ ಜಿಲ್ಲೆ ಪ್ರಗತಿಯಲ್ಲಿ ಪ್ರಥಮ ಶ್ರೇಯಾಂಕ ಪಡೆಯಲು ಸಹಕರಿಸಿದ ಜಿಲ್ಲೆಗಳು. ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿ, ಇದೇ ಶ್ರೇಯಾಂಕವನ್ನು ಮುಂದುವರೆಸಿಕೊಂಡು ಹೋಗುವಂತೆ ಕೋರಿದ್ದಾರೆ.
ಉಡುಪಿ ಜಿಲ್ಲೆಯು ಅರ್ಜಿ ವಿಲೇವಾರಿಯಲ್ಲಿ 2 ನೇ ಸ್ಥಾನಗಳಿಸಿದ್ರೆ, ಚಿಕ್ಕಮಗಳೂರು ಜಿಲ್ಲೆ 3 ನೇ ರ್‍ಯಾಂಕ್ ಗಳಿಸಿದೆ. ಬೀದರ್ ಜಿಲ್ಲೆ 30ನೇ ಸ್ಥಾನಗಳಿಸಿದೆ.