ಹಾಸನ: ಬರ ನಿರ್ವಹಣೆ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಬರ ನಿರ್ವಹಣೆ ಅನುದಾನ ಸರಿಯಾಗಿ ಬಿಡುಗಡೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಚಿವ ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಬರ ಪರಿಸ್ಥಿತಿ ಪರಿಶೀಲನೆ ಮಾಡಿದ್ದೇವೆ.ಅರಸೀಕೆರೆಯಲ್ಲಿ ಬಾಡಿಗೆ ನೀಡಿ ಕೊಳವೆ ಬಾವಿಗಳಿಂದ ನೀರು ಖರೀದಿಸಿ ಜನತೆಗೆ ಒದಗಿಸುತ್ತಿದ್ದೇವೆ. ಟ್ಯಾಂಕರ್‌ಗಳಿಂದಲೂ ನೀರು ಪೂರೈಸುವ ಕಾರ್ಯ ನಡೆಯುತ್ತಿದೆ. ಬರ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಕ್ತಾಯದ ಹಂತದಲ್ಲಿದೆ.ತಹಸೀಲ್ದಾರರಿಗೆ ಬರ ನಿರ್ವಹಣೆಯ ಹಣ ಬಿಡುಗಡೆಯಾಗುತ್ತಿದೆ ಎಂದರು.
ಅರಸೀಕೆರೆ, ಬೇಲೂರು ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇದ್ದು, ಬಿತ್ತನೆ ಆಲೂಗಡ್ಡೆಗೆ ಸಬ್ಸಿಡಿ ಕುರಿತು ನಿರ್ದೇಶನ ನೀಡುತ್ತೇವೆ. ಇಲಾಖೆಯಿಂದ ಪರಿಷ್ಕೃತ ಆಲೂಗೆಡ್ಡೆ ನೀಡುವ ಉದ್ದೇಶ ಇಲ್ಲ. ವರ್ತಕರೇ ಬಿತ್ತನೆಗೆ ಉತ್ತಮವಾದ ಆಲೂಗೆಡ್ಡೆ ಮಾರಾಟ ಮಾಡುತ್ತಾರೆ. ಸರ್ಕಾರದ ಸೂಚನೆಯಂತೆ ವರ್ತಕರು ನಡೆದುಕೊಳ್ಳಬೇಕು.ಈಗಾಗಲೇ ತಾಲ್ಲೂಕಿನ ತಹಸೀಲ್ದಾರ್ ಖಾತೆಗೆ ಹಣ ಹಾಕಿದ್ದೇವೆ ಎಂದರು. ಅರಸೀಕೆರೆ, ಬೇಲೂರು ತಾಲ್ಲೂಕಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ತಂಡ ರಚನೆ ಮಾಡಲಾಗಿದೆ.ಆಲೂಗೆಡ್ಡೆ ಬೆಳೆಗೆ ಸಂಬಂಧ ಪಟ್ಟಂತೆ ಸಭೆ ನಡೆಸಿದ್ದು, ಅಧಿಕಾರಿಗಳು ಹಾಗೂ ರೈತರ ಜೊತೆ ಮಾತನಾಡಿದ್ದೇನೆ. ಗರಿಷ್ಠ ಮಿತಿಯಲ್ಲಿ ಮಾರಾಟ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದೇವೆ ಎಂದ್ರು.