ಹಾಸನ: ಕೊರೊನಾ ಪಾಸಿಟಿವ್ ದೃಢವಾದ ತಮ್ಮ ಸಿಬ್ಬಂದಿಯನ್ನು ವ್ಯವಸ್ಥೆಗಳಿಲ್ಲದ ಕೋಣೆಯೊಳಗೆ ಕೂಡಿ ಕಂಪನಿಯೊಂದು ಅಮಾನವೀಯವಾಗಿ ನಡೆಸಿಕೊಂಡ ಘಟನೆ ನಗರದ ಹೊರವಲಯದ ಕೈಗಾರಿಕಾ ಪ್ರದೇಶದ ನಡೆದಿದೆ.
ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ 130 ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರನ್ನು ಒಂದು ಕೋಣೆಯೊಳಗೆ ಕೂಡಿ ಹಾಕಿ ಮೂಲಸೌಕರ್ಯ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.
ಸೋಂಕಿತರು ಇರುವ ಕೊಠಡಿಯಲ್ಲಿ ಮಲಗಲು ಹಾಸಿಗೆ ಸೇರಿದಂತೆ ಯಾವುದೇ ವ್ಯವಸ್ಥೆಗಳಿಲ್ಲ. ಐವತ್ತಕ್ಕೂ ಹೆಚ್ಚು ಜನ ಇಕ್ಕಟ್ಟಿನ ಜಾಗದಲ್ಲಿ ನೆಲದಲ್ಲೇ ರಟ್ಟಿನ ತುಂಡುಗಳ ಮೇಲೆ ಮಲಗುತ್ತಿದ್ದಾರೆ. ಜೊತೆಗೆ ಸೋಂಕಿತರಿಗೆ ಯಾವುದೇ ಚಿಕಿತ್ಸೆಯನ್ನೂ ನೀಡಲಾಗ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ತಮ್ಮ ದುಸ್ಥಿಯ ಕುರಿತು ಸೋಂಕಿತ ಸಿಬ್ಬಂದಿ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.