ETV Bharat / state

'ಕೊರೊನಾ ಬಂದಿದ್ದಕ್ಕೆ ಸರ್ಕಾರ ಸೇಫ್​, ಇಲ್ಲದಿದ್ರೆ ರಕ್ತಪಾತವಾಗ್ತಿತ್ತು' - ಶಿವಲಿಂಗೇಗೌಡ ಹೇಳಿಕೆ

ಶಾಸಕ ಕೆ.ಎಂ.ಶಿವಲಿಂಗೇಗೌಡ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಕೊರೊನಾ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ರಕ್ತಪಾತವಾಗಿರುತ್ತಿತ್ತು ಎಂಬ ಹೇಳಿಕೆ ನೀಡಿದ್ಧಾರೆ.

Shivalingegouda
ಶಿವಲಿಂಗೇಗೌಡ ಹೇಳಿಕೆ
author img

By

Published : Aug 15, 2020, 7:37 PM IST

ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ವಿರೋಧಿ ಕಾನೂನುಗಳನ್ನು ಜಾರಿ ಮಾಡಿದೆ. ಕೊರೊನಾ ಇಲ್ಲದೇ ಹೋಗಿದ್ದರೆ ದೇಶದಲ್ಲಿ ರಕ್ತಪಾತ ಆಗುತ್ತಿತ್ತು. ಆದ್ರೆ ಕೊರೊನಾದಿಂದ ಅವ್ರು ಬಚಾವಾಗಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಶಿವಲಿಂಗೇಗೌಡ ಹೇಳಿಕೆ

ಹಾಸನದಲ್ಲಿ ಜೆಡಿಎಸ್ ವತಿಯಿಂದ ನಡೆಸಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತ ರಾಷ್ಟ್ರದ ಬೆನ್ನಲುಬು ಅಂತ ಹೇಳಲಾಗುತ್ತೆ. ಆದರೆ, ಸರ್ಕಾರ ಇಂಥ ಕಾನೂನುಗಳನ್ನು ತಂದು ರೈತ ವಿರೋಧಿಯಾಗಿದೆ ಹರಿಹಾಯ್ದರು.

ನಮ್ಮ ಮೇಲೆ ದೇವೇಗೌಡರ ಆಶೀರ್ವಾದ ಇರುವವರೆಗೂ ನಾವು ನಿಮ್ಮನ್ನು ಕೇರ್ ಮಾಡುವುದಿಲ್ಲ. ಕೊರೊನಾ ಬಂದು ನಿಮ್ಮೆನ್ನೆಲ್ಲಾ ಬಚಾವ್​ ಆಗುವಂತೆ ಮಾಡಿದೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.

ರಾಷ್ಟ್ರದಲ್ಲಿ ಎಲ್ಲಿ ಬೇಕಾದರೂ ಇ-ಟೆಂಡರ್ ಅಂತ ನೀವು ಹೇಳ್ತಿರಾ. ಆದ್ರೆ ನೀವು ಹೇಳುತ್ತಿರುವ ಯೋಜನೆಗಳಿಂದ ಯಾರಿಗಾದರೂ ಉಪಯೋಗ ಆಗಿದೆಯೇ?, ಸುಮ್ಮನೆ ಬೋಗಸ್ ಯೋಜನೆ ತಂದು ಜನರನ್ನು ದಿಕ್ಕೆಡಿಸುತ್ತಿದ್ದೀರಿ, ನಿಮಗೆ ಒಳ್ಳೆಯದಾಗಲ್ಲ, ಭೂ ತಾಯಿ ನಿಮ್ಮನ್ನ ಕ್ಷಮಿಸುವುದಿಲ್ಲ ಎಂದು ಕಿಡಿ ಕಾರಿದರು.

ಬಿಜೆಪಿ ಸರ್ಕಾರಕ್ಕೆ ರೈತರ ಹಿತ ಮುಖ್ಯವಲ್ಲ, ರೈತರಿಂದ ಭೂಮಿ ಕಸಿದುಕೊಂಡು ಕೈಗಾರಿಕೆ, ಗಾರ್ಮೆಂಟ್ಸ್‌ ಸ್ಥಾಪನೆ ಮಾಡುವುದಾಗಿ ಹೇಳಿ ಜಮೀನ್ದಾರನಾಗಿದ್ದವನಿಗೆ ಕಾವಲುಗಾರನ ಕೆಲಸ ನೀಡಿ ಸೀಟಿ ಹೊಡೆಸಿ ದುಡಿಸಿಕೊಳ್ಳುವ ಹುನ್ನಾರ ನಿಮ್ಮದು ಎಂದು ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.