ETV Bharat / state

ಹಾಸನದಲ್ಲಿ ಜಿಲೆಟಿನ್ ಸ್ಫೋಟಗೊಂಡು ಇಬ್ಬರು ಮಕ್ಕಳಿಗೆ ಗಾಯ

author img

By

Published : Jun 21, 2021, 9:06 PM IST

ಆಕಸ್ಮಿಕವಾಗಿ ಕೈಗೆ ಸಿಕ್ಕ ಜಿಲೆಟಿನ್ ತಂತಿಯನ್ನು ಅರಿಯದೇ ಕಲ್ಲಿನಿಂದ ಜಜ್ಜುವಾಗ ಸ್ಫೋಟಗೊಂಡು ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

gelatin-blast-two-children-injured-in-hassan
ಹಾಸನದಲ್ಲಿ ಜಿಲೆಟಿನ್ ಸ್ಟೋಟಗೊಂಡು ಇಬ್ಬರು ಮಕ್ಕಳಿಗೆ ಗಾಯ

ಹಾಸನ/ಆಲೂರು: ಮಕ್ಕಳು ಆಟವಾಡುವ ಸಂದರ್ಭದಲ್ಲಿ ಸಿಕ್ಕಿದ ಜಿಲೆಟಿನ್​ ತಂತಿಯನ್ನು ಅರಿಯದೇ ಕಲ್ಲಿನಿಂದ ಜಜ್ಜಿದ್ದ ಪರಿಣಾಮ ಸ್ಫೋಟಗೊಂಡು ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ವಾಟೆಹೊಳೆ ಜಲಾಶಯ ಸಮೀಪದ ಚನ್ನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅಭಿಷೇಕ್ (12), ಕೃತಿಕ (ಕವನ) ಎಂಬುವರು ಗಾಯಗೊಂಡವರು. ಘಟನೆಯಲ್ಲಿ ಮಕ್ಕಳ ಮುಖಕ್ಕೆ ಗಂಭೀರ ಗಾಯವಾಗಿದೆ. ಸ್ಥಳೀಯರು ಕೂಡಲೇ ಆ್ಯಂಬುಲೆನ್ಸ್ ಮೂಲಕ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಎತ್ತಿನಹೊಳೆ ಯೋಜನೆಗೆ ಒಳಪಡುವ ಕಾರ್ಮಿಕರು ಎರಡು ವರ್ಷದ ಹಿಂದೆ ಚನ್ನಹಳ್ಳಿ ಗ್ರಾಮದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದರು.

ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ಕಲ್ಲು ಸ್ಫೋಟಿಸಲು ಬಳಸುತ್ತಿದ್ದ ಜೆಲೆಟಿನ್‌ ಕಡ್ಡಿಯನ್ನು ಆಕಸ್ಮಿಕವಾಗಿ ಬಿಟ್ಟು ಹೋದ ಪರಿಣಾಮ ಘಟನೆ ಸಂಭವಿಸಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓದಿ:ರಾಜ್ಯದಲ್ಲಿಂದು 4867 ಮಂದಿಗೆ ಕೊರೊನಾ : ಸೋಂಕಿಗೆ ಉಸಿರು ಚೆಲ್ಲಿದ್ದ 142 ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.