ಹಾಸನ: ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರಸಭೆ ಪ್ರಯತ್ನಿಸುತ್ತಿದ್ದರೆ, ಇತ್ತ ಎಲ್ಲೆಂದರಲ್ಲಿ ಬಿಸಾಡುವ ಕಸದಿಂದ ಜನರು ಪ್ರತಿದಿನ ತೊಂದರೆ ಅನುಭವಿಸಬೇಕಾಗಿದೆ. ಖಾಲಿ ನಿವೇಶನಗಳಲ್ಲೂ ಹೆಚ್ಚಾಗಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳು ತೊಂದರೆ ಅನುಭವಿಸುವುದು ತಪ್ಪಿಲ್ಲ. ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಕಸದಿಂದಾಗಿ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ದನಕರುಗಳು ಕಸದ ರಾಶಿಯಲ್ಲಿ ಸಿಗುವ ಪ್ಲಾಸ್ಟಿಕ್ ತಿಂದು ಸಾವಿಗೀಡಾಗುತ್ತಿವೆ.
ಹಾಸನದಲ್ಲಿ ಕಸ ವಿಲೇವಾರಿ ಸಮಸ್ಯೆ: ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ - ಕಸ ಸಂಗ್ರಹ ಆಟೊ ಟಿಪ್ಪರ್‌ಗಳು ನಿಯಮಿತವಾಗಿ ಹೋಗುವುದಿಲ್ಲ
ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರಸಭೆ ಪ್ರಯತ್ನಿಸುತ್ತಿದ್ದರೆ, ಇತ್ತ ಎಲ್ಲೆಂದರಲ್ಲಿ ಬಿಸಾಡುವ ಕಸದಿಂದ ಜನರು ಪ್ರತಿದಿನ ತೊಂದರೆ ಅನುಭವಿಸಬೇಕಾಗಿದೆ.
ಹಾಸನ: ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರಸಭೆ ಪ್ರಯತ್ನಿಸುತ್ತಿದ್ದರೆ, ಇತ್ತ ಎಲ್ಲೆಂದರಲ್ಲಿ ಬಿಸಾಡುವ ಕಸದಿಂದ ಜನರು ಪ್ರತಿದಿನ ತೊಂದರೆ ಅನುಭವಿಸಬೇಕಾಗಿದೆ. ಖಾಲಿ ನಿವೇಶನಗಳಲ್ಲೂ ಹೆಚ್ಚಾಗಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳು ತೊಂದರೆ ಅನುಭವಿಸುವುದು ತಪ್ಪಿಲ್ಲ. ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಕಸದಿಂದಾಗಿ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ದನಕರುಗಳು ಕಸದ ರಾಶಿಯಲ್ಲಿ ಸಿಗುವ ಪ್ಲಾಸ್ಟಿಕ್ ತಿಂದು ಸಾವಿಗೀಡಾಗುತ್ತಿವೆ.
ಹೌದು...., ಖಾಲಿ ನಿವೇಶನಗಳಲ್ಲೂ ಹೆಚ್ಚಾಗಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳು ತೊಂದರೆ ಅನುಭವಿಸುವುದು ತಪ್ಪಿಲ್ಲ. ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಕಸದಿಂದಾಗಿ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ. ದನಕರುಗಳು ಕಸದ ರಾಶಿಯಲ್ಲಿ ಸಿಗುವ ಪ್ಲಾಸ್ಟಿಕ್ ತಿಂದು ಸಾವಿಗೀಡಾಗುತ್ತಿವೆ.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೂ ಹಲವು ಹೋಟೆಲ್, ಅಂಗಡಿ, ರೆಸ್ಟೋರೆಂಟ್‌ಗಳಲ್ಲಿ ಆಹಾರ ಪದಾರ್ಥ ಪಾರ್ಸಲ್‌ಗಳಿಗೆ ಈಗಲೂ ಬಳಸಲಾಗುತ್ತಿದೆ. ರಸ್ತೆ ಬದಿ, ಖಾಲಿ ನಿವೇಶನ, ಎಲ್ಲೆಂದರಲ್ಲಿ ಕಸ ಬಿಸಾಡದಂತೆ ನಗರಸಭೆ ಅರಿವು ಮೂಡಿಸುತ್ತಿದ್ದರೂ ನಾಗರಿಕರು ತಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.
ನಗರದಲ್ಲಿ ನಿತ್ಯ 72 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಸಂಗ್ರಹವಾಗುವ ಮನೆ, ಹೋಟೆಲ್, ಇತರೆ ತ್ಯಾಜ್ಯವನ್ನು ಅಗಿಲೆ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ಹಾಕಲಾಗುತ್ತಿದೆ. ಹಾಸನ ನಗರದ ತ್ಯಾಜ್ಯದ ಜತೆಗೆ ಸಕಲೇಶಪುರ ಪಟ್ಟಣದ ತ್ಯಾಜ್ಯವನ್ನು ಈ ಘಟಕಕ್ಕೆ ಸಾಗಿಸಲಾಗುತ್ತಿದೆ. ಮೂರು ವರ್ಷಗಳ ತ್ಯಾಜ್ಯ ವಿಲೇವಾರಿ ಕಾರ್ಯ ಪ್ರಗತಿಯಲ್ಲಿದೆ.
ನಗರದ ಕೆಲ ಬಡಾವಣೆಗಳಿಗೆ ಕಸ ಸಂಗ್ರಹ ಆಟೊ ಟಿಪ್ಪರ್‌ಗಳು ನಿಯಮಿತವಾಗಿ ಹೋಗುವುದಿಲ್ಲ. ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ರೂಪಿಸಿಲ್ಲ. ಎಲ್ಲವೂ ಒಂದೇ ಸ್ಥಳಕ್ಕೆ ಹೋಗಿ ರಾಶಿ ಬೀಳುತ್ತಿದೆ. ವೈಜ್ಞಾನಿಕ ಕಸ ವಿಲೇವಾರಿ ವಿಧಾನ ಅಳವಡಿಸಿಕೊಳ್ಳದಿದ್ದರೆ ನಗರಸಭೆ ಎನ್‌ಜಿಟಿ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಘನತ್ಯಾಜ್ಯ ವಸ್ತುಗಳಲ್ಲಿನ ರಾಸಾಯನಿಕಗಳು ಭೂಮಿ ಒಡಲು ಸೇರಿ ಅಂತರ್ಜಲ ಕಲುಷಿಗೊಳ್ಳುತ್ತಿದೆ. ಇದರಿಂದ ಹಸಿ, ಒಣ ಹಾಗೂ ಅಪಾಯಕಾರಿ ತ್ಯಾಜ್ಯವನ್ನು ಕಡ್ಡಾಯವಾಗಿ ಮನೆಗಳಲ್ಲೇ ವಿಂಗಡನೆ ಮಾಡಿ ಸಂಗ್ರಹಿಸಬೇಕು. ಸಾಧ್ಯವಾಗದಿದ್ದಲ್ಲಿ ಸಮುದಾಯ ಗೊಬ್ಬರ ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಗೊಬ್ಬರವನ್ನು ರೈತರಿಗೆ ಕಡಿಮೆ ದರದಲ್ಲಿ ನೀಡಲು ಯೋಜನೆ ರೂಪಿಸಬೇಕು ಎನ್ನುವುದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನಿರ್ದೇಶನವಾಗಿದೆ.
ಒಟ್ಟಿನಲ್ಲಿ ಶೂನ್ಯ ತ್ಯಾಜ್ಯ ನಗರವಾಗಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕೆಲ ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ನಿತ್ಯವೂ ಮನೆಗಳಿಂದ ಹಸಿ ಕಸವನ್ನು ಮಾತ್ರವೇ ಸಂಗ್ರಹಿಸಬೇಕು. ವಾರಕ್ಕೆ ಎರಡು ದಿನಗಳು ಒಣ ಕಸವನ್ನು ಪ್ರತ್ಯೇಕವಾಗಿ ಪಡೆಯಬೇಕು. ಪ್ರತಿ ಮನೆಯಲ್ಲಿಯೂ ಉತ್ಪತ್ತಿಯಾಗುವ ಕಸವನ್ನು ಆಯಾ ಸ್ಥಳೀಯ ಸಂಸ್ಥೆಯ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಬೇಕು. ಆ ರೀತಿ ಮಾಡದಿದ್ದರೆ ದಂಡ ವಿಧಿಸಬಹುದಾಗಿದೆ.
ಬೈಟ್ 1 : ಆರ್.ಕೃಷ್ಣಮೂರ್ತಿ, ನಗರಸಭೆ ಆಯುಕ್ತ.
ಬೈಟ್ 2 : ಸಾಗರ್‌ಗೌಡ, ನಗರ ನಿವಾಸಿ.
- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Body:0
Conclusion:0
TAGGED:
ನಿತ್ಯ 72 ಟನ್ ತ್ಯಾಜ್ಯ ಸಂಗ್ರಹ