ETV Bharat / state

ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನ: ಹಾಸನದಲ್ಲಿ ನಾಲ್ವರ ಬಂಧನ

ಕೊಲೆ ಮಾಡಿ ಬಳಿಕ ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಆರೋಪಿಗಳನ್ನು ಹಾಸನ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

arrest
ನಾಲ್ವರ ಬಂಧನ
author img

By

Published : Oct 12, 2022, 6:50 AM IST

Updated : Oct 12, 2022, 12:15 PM IST

ಹಾಸನ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಬಳಿಕ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಮೂಲದ ಆನಂದ್ ಅಲಿಯಾಸ್ ಉಮೇಶ್ ಕೊಲೆಯಾದ ವ್ಯಕ್ತಿ. ಆಂಧ್ರಪ್ರದೇಶ ಮೂಲದ ರಘು (32), ಗದಗದ ಶಶಿ (28), ಬೆಂಗಳೂರಿನ ಹೊಸಕೋಟೆಯ ರವಿಕುಮಾರ್ (33) ಹಾಗೂ ಬಾಗಲಕೋಟೆ ಜಿಲ್ಲೆಯ ರಾಜ (32) ಬಂಧಿತ ಆರೋಪಿಗಳು.

ಬಣಗಟ್ಟೆ ರೈಲ್ವೆ ಸೇತುವೆ ಬಳಿ ನಡೆದ ಅಪಘಾತ

ಏನಿದು ಪ್ರಕರಣ?: ಹಾಸನ ಜಿಲ್ಲೆಯ ಶಾಂತಿಗ್ರಾಮ ಸಮೀಪದ ಬಣಗಟ್ಟೆ ರೈಲ್ವೆ ಸೇತುವೆ ಬಳಿ ಬುಲೆರೋ ವಾಹನದಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹಳಿ ಮೇಲಿಂದ ಬಿದ್ದು ವಾಹನ ಅಪಘಾತಕೀಡಾಗಿತ್ತು. ಈ ಕುರಿತು ಸ್ಥಳೀಯರು ಶಾಂತಿಗ್ರಾಮ ಪೊಲೀಸರಿಗೆ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಬಂದ ಪೊಲೀಸರು 40 ಅಡಿ ಎತ್ತರದಿಂದ ಬಿದ್ದ ವಾಹನದಲ್ಲಿದ್ದವರನ್ನು ರಕ್ಷಣೆ ಮಾಡಲು ಮುಂದಾದಾಗ, ಅದರಲ್ಲಿದ್ದ ಓರ್ವ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಓಡುತ್ತಿದ್ದ ಆರೋಪಿ ರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದು ಅಪಘಾತವಲ್ಲ, ಕೊಲೆ ಪ್ರಕರಣ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಆರೋಪಿಗಳು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದ ಬಳಿಕ ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Last Updated : Oct 12, 2022, 12:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.