ETV Bharat / state

ಹೆಚ್ಚಾದ ಕಾಡಾನೆ ಹಾವಳಿ... ಭಯದ ವಾತಾವರಣದಲ್ಲಿ ಹಾಸನ ಜನತೆ

ಬೇಲೂರು ತಾಲೂಕಿನ ಅರೆಹಳ್ಳಿ ಹೋಬಳಿಯ ಸುತ್ತ - ಮುತ್ತಲಿನ ಪ್ರದೇಶದಲ್ಲಿ ಈಗ ಎರಡು ಕಾಡಾನೆಗಳು ಮನಸೋಇಚ್ಛೆ ಓಡಾಡುತ್ತಿದ್ದು, ಜನರು ಭಯಭೀತರಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

forest elephants problem at hassan
ಹೆಚ್ಚಾದ ಕಾಡಾನೆ ಹಾವಳಿ.....ಭಯದ ವಾತಾವರಣದಲ್ಲಿ ಹಾಸನ ಜನತೆ
author img

By

Published : Jan 9, 2021, 12:20 PM IST

ಹಾಸನ: ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಆನೆಗಳ ಹಾವಳಿ ಹೆಚ್ಚಾಗುತ್ತಲೇ ಇದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ.

ಜ. 3ರಂದು ಬೇಲೂರು ತಾಲೂಕಿನಲ್ಲಿ ರಾಜನ್ ಎಂಬ ಕೂಲಿ ಕಾರ್ಮಿಕನೋರ್ವನನ್ನು ಬಲಿ ತೆಗೆದುಕೊಂಡಿದ್ದ ಪುಂಡಾನೆಯೊಟ್ಟಿಗೆ ಮತ್ತೊಂದು ಆನೆ ಸೇರ್ಪಡೆಯಾಗಿ ತಾಲೂಕಿನ ಕೆಲ ಭಾಗಗಳಲ್ಲಿ ಮತ್ತೆ ಲಗ್ಗೆ ಇಟ್ಟಿವೆ. ಬೇಲೂರು ತಾಲೂಕಿನ ಅರೆಹಳ್ಳಿ ಹೋಬಳಿಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಈಗ ಎರಡು ಕಾಡಾನೆಗಳು ಮನಸೋ ಇಚ್ಛೆ ಓಡಾಡುತ್ತಿದ್ದು, ಜನರು ಭಯಭೀತರಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಾದ ಕಾಡಾನೆ ಹಾವಳಿ... ಅರಣ್ಯ ಇಲಾಖೆ ಕ್ರಮ

ಅಂದಹಾಗೆ ಇಂದು ಬೆಳ್ಳಂಬೆಳಗ್ಗೆಯೇ ಅರೆಹಳ್ಳಿ ಸಮೀಪದ ಲಿಂಗಾಪುರ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳಕ್ಕೆ ರೈತರು ಮತ್ತು ಕಾಫಿ ತೋಟದ ಕೆಲಸಗಾರರು ಕೆಲಸಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಪಟಾಕಿ ಸಿಡಿಸಿ ಆನೆ ಓಡಿಸಲು ಪ್ರಯತ್ನಪಟ್ಟ ಗ್ರಾಮಸ್ಥರನ್ನು ಓಡಿಸಿಕೊಂಡು ಬಂದಿದ್ದು, ಆನೆಯಿಂದ ಕೂದಲೆಳೆಯ ಅಂತರದಲ್ಲಿ ಕೆಲವರು ಪಾರಾಗಿರುವ ಘಟನೆ ಕೂಡ ನಡೆದಿದೆ.

ಎರಡು ಪುಂಡಾನೆಗಳ ಹಾವಳಿಯಿಂದ ಅರಣ್ಯ ಇಲಾಖೆ ಈಗಾಗಲೇ ಎಚ್ಚೆತ್ತುಕೊಂಡಿದೆ. ಲಿಂಗಾಪುರ ಅರೆಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಹನದಲ್ಲಿ ಮೈಕ್​ ಅಳವಡಿಸಿ, ಅನಾವಶ್ಯಕವಾಗಿ ರಾತ್ರಿ ವೇಳೆ ಓಡಾಡದಂತೆ ಮೈಕ್ ಮೂಲಕ ಪ್ರಕಟಣೆ ಹೊರಡಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಹಗಲಿರುಳೆನ್ನದೇ ಆನೆಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: ಕಾಫಿನಾಡಲ್ಲಿ ಅಬ್ಬರಿಸಿ ಬೊಬ್ಬರಿಯುತ್ತಿರುಬವ ಮಳೆರಾಯ; ಜನರು ಕಂಗಾಲು

ಆನೆಗಳನ್ನು ಸ್ಥಳಾಂತರಿಸಲು ಈಗಾಗಲೇ ಸರ್ಕಾರಕ್ಕೆ ಹಾಸನ ಅರಣ್ಯ ಇಲಾಖೆಯವರು ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಮೂರ್ನಾಲ್ಕು ದಿನದೊಳಗೆ ಸರ್ಕಾರದಿಂದ ಆದೇಶ ಹೊರಬಿದ್ದರೆ ಆನೆ ಹಿಡಿಯುವ ಕಾರ್ಯಕ್ಕೂ ನಾವು ಸಜ್ಜಾಗಿದ್ದೇವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.