ETV Bharat / state

ಕಾಡಾನೆಗಳ ಹಾವಳಿ : ರೈತರಿಂದ ರಸ್ತೆ ತಡೆದು ಬೃಹತ್​ ಪ್ರತಿಭಟನೆ - Elephants destroying the crop

ಕಳೆದ ಆರು ತಿಂಗಳಿನಿಂದ ಆನೆಗಳು ಜಾನುವಾರಗಳಂತೆ ಎಲ್ಲೆಂದರಲ್ಲಿ ಓಡಾಟ ನಡೆಸುತ್ತಿವೆ. ಇದಕ್ಕೆ ಯಾವುದೇ ರೀತಿಯಾದಂತಹ ಕ್ರಮವನ್ನು ಅರಣ್ಯ ಇಲಾಖೆ ಜರುಗಿಸಿಲ್ಲ. ಅರಣ್ಯ ಇಲಾಖೆಯವರು ಪಟಾಕಿ ಹೊಡೆದು ಓಡಿಸಿ ಎನ್ನುತ್ತಾರೆ. ಪ್ರತಿಬಾರಿ ಪಟಾಕಿ ಹೊಡೆದು ಓಡಿಸಲು ನಮಗೆ ಹಣ ಎಲ್ಲಿಂದ ಬರಬೇಕು. ನಷ್ಟವಾದ ಬೆಳೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ..

Farmerst protest against Elephants attack
ಕಾಡಾನೆಗಳ ಹಾವಳಿ: ರೈತರಿಂದ ರಸ್ತೆ ತಡೆದು ಬೃಹತ್​ ಪ್ರತಿಭಟನೆ
author img

By

Published : Feb 15, 2021, 7:55 PM IST

ಹಾಸನ : ಆನೆಗಳ ಹಾವಳಿಯಿಂದ ಬೇಸತ್ತ ಜಿಲ್ಲೆಯ ನೂರಾರು ರೈತರು ರಸ್ತೆ ತಡೆದು ಬೃಹತ್​ ಪ್ರತಿಭಟನೆ ನಡೆಸಿದರು.

ಕಾಡಾನೆಗಳ ಹಾವಳಿ.. ರೈತರಿಂದ ರಸ್ತೆ ತಡೆದು ಬೃಹತ್​ ಪ್ರತಿಭಟನೆ..

ಮೂರು ದಿನಗಳ ಹಿಂದಷ್ಟೇ ಆನೆ ದಾಳಿಗೆ ಬಲಿಯಾದ ಕೂಲಿ ಕಾರ್ಮಿಕರ ಶವವನ್ನು ಜಿಲ್ಲಾಧಿಕಾರಿ ಕಚೇರಿ ಮುಂದಿಟ್ಟು ಶಾಸಕ ಹೆಚ್ ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟಿಸಿದ್ದರು. ಆನೆ ದಾಳಿಗೆ ಇನ್ಮುಂದೆ ಯಾರೂ ಬಲಿಯಾಗಬಾರದು. ಇದೇ ಕೊನೆ ಪ್ರಕರಣವಾಗಬೇಕು. ಆನೆ ದಾಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ, ಹಾಸನ ತಾಲೂಕಿನ ಮಾದಿಹಳ್ಳಿ, ರಾಯಪುರ, ಸೀಗೆ, ಕೊಂಡಜ್ಜಿ, ವೀರಾಪುರ, ರಾಮದೇವಪುರ ಭಾಗದಲ್ಲಿ ಮತ್ತೆ ಕಾಡಾನೆಗಳು ಕಾಣಿಸಿದ್ದು, ರೈತರ ಕೃಷಿ ಉಪಕರಣಗಳು ಸೇರಿ ಬೆಳೆಗಳನ್ನು ನಾಶ ಮಾಡಿವೆ. ಭಾನುವಾರ ಮೂರು ಕಾಡಾನೆಗಳು ರಾಯಪುರದ ಹಲವು ರೈತರ ಬೆಳೆಗಳ ಮೇಲೆ ದಾಳಿ ನಡೆಸಿವೆ. ಇದರಿಂದ ಬೇಸತ್ತ ರೈತರು, ಇಂದು ರಸ್ತೆ ತಡೆದು ಬೃಹತ್​ ಪ್ರತಿಭಟನೆ ನಡೆಸಿದರು.

ರಾಯಪುರ ಮತ್ತು ಮಾದಿಹಳ್ಳಿ ಭಾಗದ ಸುಮಾರು ನಾಲ್ಕು ಹಳ್ಳಿಗಳ ಜನರು, ಹಳೇಬೀಡು-ಹಾಸನ ರಸ್ತೆಯಲ್ಲಿ ಕುಳಿತು ಸುಮಾರು ಮೂರರಿಂದ ನಾಲ್ಕು ಗಂಟೆಯ ಕಾಲ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ.

ವರ್ಷದಿಂದ ಬೆಳೆದ ಬೆಳೆ ಕೈಗೆ ಬರುವ ಹೊತ್ತಿಗೆ ಈ ರೀತಿಯಾದರೆ ನಾವು ಹೇಗೆ ಬದುಕಬೇಕು. ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಸ್ಥಳ ಪರಿಶೀಲನೆ ನಡೆಸಿ, ಫೋಟೋ ತೆಗೆದುಕೊಂಡು ಹೋಗುತ್ತಾರೆ ಅಷ್ಟೇ.. ಇದುವರೆಗೂ ಯಾವುದೇ ಪರಿಹಾರ ಕೂಡ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಆರು ತಿಂಗಳಿನಿಂದ ಆನೆಗಳು ಜಾನುವಾರಗಳಂತೆ ಎಲ್ಲೆಂದರಲ್ಲಿ ಓಡಾಟ ನಡೆಸುತ್ತಿವೆ. ಇದಕ್ಕೆ ಯಾವುದೇ ರೀತಿಯಾದಂತಹ ಕ್ರಮವನ್ನು ಅರಣ್ಯ ಇಲಾಖೆ ಜರುಗಿಸಿಲ್ಲ. ಅರಣ್ಯ ಇಲಾಖೆಯವರು ಪಟಾಕಿ ಹೊಡೆದು ಓಡಿಸಿ ಎನ್ನುತ್ತಾರೆ. ಪ್ರತಿಬಾರಿ ಪಟಾಕಿ ಹೊಡೆದು ಓಡಿಸಲು ನಮಗೆ ಹಣ ಎಲ್ಲಿಂದ ಬರಬೇಕು. ನಷ್ಟವಾದ ಬೆಳೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಬೆಳಗ್ಗೆಯಿಂದ ಪ್ರತಿಭಟನೆ ಮಾಡುತ್ತಿದ್ದರೂ ಕೂಡ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಯಾಗಲಿ ಅಥವಾ ವಲಯ ಅರಣ್ಯಾಧಿಕಾರಿಯಾಗಲಿ ಸ್ಥಳಕ್ಕೆ ಬಾರದೇ ಉದ್ಧಟತನ ತೋರುತ್ತಿದ್ದಾರೆ. ಇದಲ್ಲದೆ ನಮ್ಮ ಸುತ್ತಮುತ್ತ ಗ್ರಾಮದಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ. ಇದರ ಬಗ್ಗೆ ಯಾರೂ ಚಿಂತನೆ ನಡೆಸುತ್ತಿಲ್ಲ ಎಂದರು.

ಸ್ಥಳಕ್ಕಾಗಮಿಸಿದ ಹಾಸನ ಗ್ರಾಮಾಂತರ ಪೊಲೀಸರು, ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಪ್ರತಿಭಟನಾಕಾರರು ಪೊಲೀಸರ ಮಾತಿಗೂ ಕ್ಯಾರೇ ಎನ್ನದೆ ಪ್ರತಿಭಟನೆ ಮುಂದುವರಿಸಿದರು. ಕೊನೆಗೆ ದೂರವಾಣಿ ಮೂಲಕ ಮಾತನಾಡಿದ ಜಿಲ್ಲಾಧಿಕಾರಿ, ನಾಳೆ ಹಾಸನಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆಗಮಿಸುತ್ತಿದ್ದಾರೆ.

ಸಕಲೇಶಪುರ ಮತ್ತು ಆಲೂರು ಭಾಗದಲ್ಲಿರುವ ಆನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಚಿವರು ಸೂಕ್ತಕ್ರಮ ಕೈಗೊಳ್ಳುತ್ತಾರೆ. ಇದಕ್ಕೆ ತಾವುಗಳು ಸಹಕರಿಸಬೇಕು ಎಂದು ಮನವಿ ಮಾಡಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.