ETV Bharat / state

ರೈತರಿಗೆ ಸಿಹಿ ಸುದ್ದಿ: ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಮಾಡಲು ತೀರ್ಮಾನ... ಬಿಎಸ್​ವೈ - ಕರ್ನಾಟಕ ರೈತರ ಬಡ್ಡಿ ಮನ್ನಾ

ಸಿಎಂ ಬಿಎಸ್​ವೈ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಸಹಕಾರ ಬ್ಯಾಂಕ್, ಪಿಎಲ್​​ಡಿ ಬ್ಯಾಂಕ್​​ಗಳಲ್ಲಿ ಕೃಷಿ ಉಪಕರಣಗಳಿಗಾಗಿ ಮಾಡಿದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ.

Farmers loan interest waived off
ರೈತರ ಸಾಲದ ಮೇಲಿನ ಬಡ್ಡಿ ಮನ್ನಾ: ಬಿಎಸ್​ವೈ ಘೋಷಣೆ
author img

By

Published : Feb 9, 2020, 10:55 PM IST

Updated : Feb 9, 2020, 11:16 PM IST

ಹಾಸನ‌: ಸಹಕಾರ ಬ್ಯಾಂಕ್, ಪಿಎಲ್​​ಡಿ ಬ್ಯಾಂಕ್​​ಗಳಲ್ಲಿ ಕೃಷಿ ಉಪಕರಣ, ಟ್ರಾಕ್ಟರ್, ಟಿಲ್ಲರ್ ಖರೀದಿಗೆ ರೈತರು ಮಾಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿಯ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಜಿಲ್ಲೆಯ ಹಳೇಬೀಡು ಬಳಿ ಆಯೋಜಿಸಿದ್ದ ತರಳಬಾಳು ಹುಣ್ಣಿಮೆ ‌ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ‌ಪಾಲ್ಗೊಳ್ಳಲು ಆಗಮಿಸಿದ ವೇಳೆ ಮಾಯಗೊಂಡನ ಹಳ್ಳಿ ಹೆಲಿಪ್ಯಾಡ್​​ನಲ್ಲಿ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮದು ರೈತ ಪರ ಸರ್ಕಾರ, ರಾಜ್ಯದಲ್ಲಿ ಕೃಷಿಕರು ಸಂಕಷ್ಟದಲ್ಲಿದ್ದಾರೆ, ಅವರ ಹಿತಕಾಯುವ ಉದ್ದೇಶದಿಂದ 500 ಕೋಟಿ ರೂ ಬಡ್ಡಿ, ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲು ತೀರ್ಮಾನ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲೇ ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದರು‌.

ರೈತರ ಸಾಲದ ಮೇಲಿನ ಬಡ್ಡಿ ಮನ್ನಾ: ಬಿಎಸ್​ವೈ ಘೋಷಣೆ

ಜಲಾಶಗಳಿಂದ ನೀರನ್ನು ‌ ತೆಗೆದು ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಈಗಾಗಲೇ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಬರಲಾಗಿದೆ. ಮಂದಿನ‌ ಬಜೆಟ್​​ನಲ್ಲಿಯೂ ಕೃಷಿಕರಿಗೆ ಅನಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಲಿಂಗೇಶ್, ಪ್ರೀತಂ ಜೆ ಗೌಡ ಮತ್ತಿತರರು ಹಾಜರಿದ್ದರು.

Last Updated : Feb 9, 2020, 11:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.