ETV Bharat / state

ಜೀವ ಹಿಂಡುವ ಪುಂಡಾನೆಗಳಿಂದ ಸಾಕ್‌ ಸಾಕಾಯ್ತು, ಇವುಗಳಿಗೇನ್‌ ಮಾಡೋದೆಂದು ತಿಳಿಯುತ್ತಿಲ್ಲ.. - elephant destroy farmers land in hasan

ಸಕಲೇಶಪುರ ಮತ್ತು ಕೊಡಗು ಕಾಡಂಚಿನ ಭಾಗದ ಕಾಡನೆಗಳು ಈಗ ಹಾಸನ ಮತ್ತು ಆಲೂರು ಭಾಗದ ಸಮೀಪ ಬರುತ್ತಿದ್ದು, ನಿತ್ಯ ಕಾಡಾನೆಗಳ ಹಾವಳಿಯಿಂದ ಮಲೆನಾಡು ಮತ್ತು ಅರೆಮಲೆನಾಡು ಭಾಗದ ರೈತರ ಕಂಗಲಾಗಿದ್ದಾರೆ.

ಜೀವ ಹಿಂಡುವ ಪುಂಡಾನೆಗಳಿಂದ ಸಾಕ್‌ ಸಾಕಾಯ್ತು
author img

By

Published : Sep 3, 2019, 7:15 PM IST

ಹಾಸನ:ಸಕಲೇಶಪುರ ಮತ್ತು ಕೊಡಗು ಕಾಡಂಚಿನ ಭಾಗದ ಕಾಡನೆಗಳು ಈಗ ಹಾಸನ ಮತ್ತು ಆಲೂರು ಭಾಗದ ಸಮೀಪ ಬರುತ್ತಿದ್ದು, ನಿತ್ಯ ಇವುಗಳ ಹಾವಳಿಯಿಂದ ಮಲೆನಾಡು ಮತ್ತು ಅರೆಮಲೆನಾಡು ಭಾಗದ ರೈತರು ಕಂಗಾಲಾಗಿದ್ದಾರೆ. ಇಂದು ಕೂಡಾ ಪಾಳ್ಯ ಸಮೀಪ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ರೈತನ ಜೀವನವನ್ನು ಹಿಂಡಲು ಶುರುಮಾಡಿವೆ.

ಜೀವ ಹಿಂಡುವ ಪುಂಡಾನೆಗಳಿಂದ ಸಾಕ್‌ ಸಾಕಾಯ್ತು..

ಮಲೆನಾಡಿನಲ್ಲಿ ಕಾಡಂಚಿನ ಗ್ರಾಮಗಳ ಜನ ಮತ್ತು ಕಾಡು ಪ್ರಾಣಿಗಳ ಮಧ್ಯೆ ಸಂಘರ್ಷವೇರ್ಪಟ್ಟಿದೆ. ಮೊದಲು ಸಕಲೇಶಪುರ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಿತ್ತು. ಆದರೆ, ಈಗ ದೊಡ್ಡಬೆಟ್ಟದ ಸಮೀಪ ಹರಿಯುತ್ತಿರುವ ಹೇಮಾವತಿ ನದಿ ದಾಟಲಾಗದೇ ಆನೆಗಳು ಕಾಡಿನಲ್ಲಿ ಉಳಿದಿವೆ.

ಆದರೆ, ಈಗ ಮತ್ತೆ ಆಲೂರಿನಿ ಕೆಂಚಮ್ಮನ ಹೊಸಕೋಟೆ, ಕುಂದೂರು ಭಾಗದಲ್ಲಿ 20-30 ಆನೆ ನದಿ ದಾಟಿ ಕಾಡಿನ ಕಡೆಗೆ ಹೋಗಲು ಸಾಧ್ಯವಾಗದೇ ಈ ಭಾಗದಲ್ಲಿಯೇ ಉಳಿದಿವೆ. ಇಂದು ಆಲೂರು ಭಾಗದ ಪಾಳ್ಯ ಹೋಬಳಿಯ ಹರೇಹಳ್ಳದ ಕೊಪ್ಪಲು, ಚಿಗಳೂರು ಕಿಡ್ಲೂರು, ಹೊನ್ನವಳ್ಳಿಯ ಭಾಗದಲ್ಲಿ 6 ಆನೆ ದಾಳಿ ನಡೆಸಿವೆ. ಮೂರು ದಿನಗಳಿಂದ ಜಿಲ್ಲೆಯಲ್ಲಿ ತುಂತುರು ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗಲೇ ಹಿಂಡು ಹಿಂಡಾಗಿ ಆನೆ ಕಾಣಿಸಿ ಕೃಷಿ ಚಟುವಟಿಕೆ ಸ್ಥಗಿತಗೊಳಿಸಿ ರೈತರು ಎದ್ನೋ ಬಿದ್ನೋ ಅಂತಾ ಮನೆ ದಾರಿ ಹಿಡಿಯುವಂತಾಗಿದೆ.

ಆನೆಗಳು ಆಲೂರು-ಸಕಲೇಶಪುರ ಭಾಗದಲ್ಲಿ ಜೋಳ, ಕಾಫಿ, ಮೆಣಸು ಹಾಳು ಮಾಡುತ್ತಿದ್ದು, ನಾನು ಸಾಕಷ್ಟು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿರುವೆ. ಅರಣ್ಯ ವಿಭಾಗದಿಂದ ಹೆಚ್ಚಿನ ಸಿಬ್ಬಂದಿ ನೇಮಿಸಿ ಜನರಿಗೆ ಅಗತ್ಯ ನೆರವು ಹಾಗೂ ಮಾಹಿತಿ ನೀಡಬೇಕು. ಸಂತ್ರಸ್ತ ರೈತರಿಗೆ ಸೂಕ್ತ ನೆರವು ನೀಡಬೇಕೆಂದು ಸರ್ಕಾರಕ್ಕೆ ಸ್ಥಳೀಯ ಶಾಸಕ ಹೆಚ್ ಕೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಹಿಂದೆ ಮೈತ್ರಿ ಸರ್ಕಾರವಿದ್ದಾಗಲೇ ಶಾಸಕರು ಕಾಫಿಬೆಳೆಗಾರರ ಜತೆಗೂಡಿ ಬಾಳ್ಳುಪೇಟೆಯಲ್ಲಿ ವಾರಗಟ್ಟಳೆ ರಸ್ತೆಯ ಬದಿ ಕುಳಿತು ನಿರಂತರ ಪ್ರತಿಭಟನೆ ಮಾಡಿದ್ದರು. ಕೇರಳ ಮಾದರಿ ಸಕಲೇಶಪುರ ಕಾಡಂಚಿನ ಭಾಗದಲ್ಲಿ ತಂತಿಬೇಲಿ ಹಾಕಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದರು. ಈಗಿನ ಸರ್ಕಾರ ಸಮಸ್ಯೆ ಪರಿಹರಿಸದಿದ್ರೇ ಉಗ್ರ ಹೋರಾಟ ನಡೆಸೋದಾಗಿ ಸ್ಥಳೀಯರು ಎಚ್ಚರಿಸಿದಾರೆ.

Intro:ಹಾಸನ: ರೈತರ ಜೀವನವನ್ನ ಹಿಂಡುತ್ತಿರುವ ಹಿಂಡಾನೆಗಳು :
ಸಕಲೇಶಪುರದ ಮತ್ತು ಕೊಡಗು ಕಾಡಂಚಿನ ಭಾಗದ ಕಾಡನೆಗಳು ಈಗ ಹಾಸನ ಮತ್ತು ಆಲೂರು ಭಾಗದ ಸಮೀಪ ಬರುತ್ತಿದ್ದು, ನಿತ್ಯ ಕಾಡಾನೆಗಳ ಹಾವಳಿಯಿಂದ ಮಲೆನಾಡು ಮತ್ತು ಅರೆಮಲೆನಾಡು ಭಾಗದ ರೈತರ ಕಂಗಲಾಗಿದ್ದಾರೆ. ಇಂದು ಕೂಡಾ ಪಾಳ್ಯ ಸಮೀಪ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ರೈತನ ಜೀವನವನ್ನ ಹಿಂಡಲು ಶುರುಮಾಡಿವೆ.

ಹೌದು ಮಲೆನಾಡ ಜನ್ರ ಬದುಕು ದಿನದಿಂದ ದಿನಕ್ಕೆ ಪ್ರಾಣಿಗಳ ಉಪಟಳದಿಂದ ಕುಸಿಯುತ್ತಿದೆ. ಬದುಕುವುದಕ್ಕೆ ಒಂದಿಷ್ಟು ಬೆಳೆ ಬೆಳೆದುಕೊಳ್ಳೋಣ ಎಂದ್ರೆ ಕಾಡು ಪ್ರಾಣಿಗಳು ತಿಂದು ಮುಗಿಸುವ ಜೊತೆಗೆ ಹಾಳು ಮಾಡುತ್ತಿವೆ. ಮಲೆನಾಡು ಭಾಗವಾದ ಸಕಲೇಶಪುರದಲ್ಲಿ ಆನೆಗಳ ಉಪಟಳ ಹೆಚ್ಚಾಗಿತ್ತು. ಪ್ರವಾಹ ಬಂದ ಬಳಿಕ ಆ ಭಾಗದಲ್ಲಿ ಕೊಂಚ ಕಾಡಾನೆಗಳು ಕಡಿಮೆಯಾಗಿದೆ. ದೊಡ್ಡ ಬೆಟ್ಟದ ಸಮೀಪ ಹರಿಯುತ್ತಿರುವ ಹೇಮಾವತಿ ನದಿಯನ್ನ ದಾಟಲು ಸಾಧ್ಯವಾಗದೇ ಕೆಲವು ಆನೆಗಳು ಕಾಡಿನ ಭಾಗದಲ್ಲಿ ಉಳಿದುಕೊಂಡಿದ್ದು, ಆಲೂರಿನಿ ಕೆಂಚಮ್ಮನ ಹೊಸಕೋಟೆ, ಕುಂದೂರು ಭಾಗದಲ್ಲಿ 20-30 ಆನೆಗಳು ನದಿಯನ್ನ ದಾಟಿ ಕಾಡಿನ ಕಡೆಗೆ ಹೋಗಲು ಸಾಧ್ಯವಾಗದೇ ಈ ಭಾಗದಲ್ಲಿಯೇ ಉಳಿದಿವೆ.

ಇಂದು ಆಲೂರು ಭಾಗದ ಪಾಳ್ಯ ಹೋಬಳಿಯ ಹರೇಹಳ್ಳದ ಕೊಪ್ಪಲು, ಚಿಗಳೂರು ಕಿಡ್ಲೂರು, ಹೊನ್ನವಳ್ಳಿಯ ಭಾಗದಲ್ಲಿ ಇಂದು 6 ಆನೆಗಳು ದಾಳಿ ನಡೆಸಿವೆ. ಮೂರು ದಿನಗಳಿಂದ ಜಿಲ್ಲೆಯಲ್ಲಿ ತುಂತುರು ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ದ್ವಿದಳ ಧಾನ್ಯದ ಬೆಳೆಗಳನ್ನ ಭಿತ್ತಲು ಶುರುಮಾಡಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗಲೇ ಹಿಂಡು ಹಿಂಡಾಗಿ ಆನೆ ಕಾಣಿಸಿಕೊಂಡಿದ್ದರಿಂದ ಕೃಷಿ ಚಟುವಟಿಕೆಯನ್ನ ಸ್ಥಗಿತಗೊಳಿಸಿ ಎದ್ದನೋ ಬಿದ್ದನೋ ಎಂಬಂತೆ ಮನೆಯನ್ನ ಸೇರಿಕೊಳ್ಳುತ್ತಿದ್ದಾರೆ.

ಇನ್ನು ಈ ಕಾಡಾನೆಗಳು ಬಂದಿರುವ ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಹಿಸಿದ್ದು, ಪಟಾಕಿ ಸಿಡಿಸಿ ದೊಡ್ಡಬೆಟ್ಟದ ತಪ್ಪಲಿನ ಭಾಗಕ್ಕೆ ಓಡಿಸುವ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಪ್ರತಿನಿತ್ಯ ಪಟಾಕಿ ಸಿಡಿಸಿ ಓಡಿಸಲು ಸಾಧ್ಯವಾಗದು. ಆದ್ರೆ ಇದಕ್ಕೊಂದು ಶಾಶ್ವತ ಪರಿಹಾರವನ್ನ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಬೇಕಿದೆ. ಕಾರಣ ರೈತರ ಹೊಲ ಗದ್ದೆಗಳ ಮೇಲೆ ದಾಳಿ ನಡೆಸಿ ಬೆಳೆಯನ್ನ ತಿಂದ ಬಳಿಕವೂ ಬೆಳೆಯ ಮಧ್ಯೆ ಹಿಂಡು ಹಿಂಡಾಗಿ ಓಡಾಡುವುದರಿಂದ ಈಗಾಗಲೇ ಈ ಭಾಗದಲ್ಲಿ ಊಹೆಗೂ ಮೀರದಷ್ಟು ಹಾನಿಯಾಗಿದ್ದು, ಪರಿಹಾರ ಕೂಡಾ ಮರಿಚಿಕೆಯಾಗಿದೆ.          

ಇನ್ನು ಪಾಳ್ಯಕ್ಕೆ ಆಗಮಿಸಿದ ಶಾಸಕ ಮಾಧ್ಯಮದವರೊಂದಿಗೆ ಮಾತನಾಡಿ, ಆನೆಗಳ ಹಾವಳಿ ಮಿತಿಮೀರಿದ್ದು, ಆಲೂರು-ಸಕಲೇಶಪುರ ಭಾಗದಲ್ಲಿ ಜೋಳ, ಕಾಫಿ, ಮೆಣಸು ಹಾಳು ಮಾಡುತ್ತಿದ್ದು, ನಾನು ಸಾಕಷ್ಟು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಷ್ಟೆಯಲ್ಲದೇ ಹೆಚ್ಚಿನ ಸಿಬ್ಬಂದಿಯನ್ನ ಕರೆಸಿ ಈ ಬಾಗದಲ್ಲಿ ಉಪ ವಿಭಾಗವನ್ನ ತೆರೆದು ಜನರಿಗೆ ಮಾಹಿತಿ ನೀಡುಲು ಮುಂದಾಗಬೇಕು. ಅಲ್ಲದೇ ಜನ್ರ ಬೆಳೆಗಳಿಗೆ ಆಗಿರುವ ಸುಮಾರು 1ಕೋಟಿಗೂ ಹೆಚ್ಚು ನಷ್ಟವನ್ನ ಆದಷ್ಟು ಬೇಗ ಬಿಡುಗಡೆ ಮಾಡಬೇಕು. ಮಗ್ಗೆ ಭಾಗದಲ್ಲಿ ಒಂದು ಉಪವಿಭಾಗವನ್ನ ತೆರೆದು ಜನರ ಸಂಕಷ್ಟಕ್ಕೆ ಸ್ಪಂದಿಸುವಂತಹ ಕಾರ್ಯವಾಗಬೇಕೆಂದು ಸರ್ಕಾರಕ್ಕೆ ಒತ್ತಡ ಹಾಕಿದ್ರು.

ಬೈಟ್: ಹೆಚ್.ಕೆ.ಕುಮಾರಸ್ವಾಮಿ, ಸಕಲೇಶಪುರ-ಆಲೂರು ಶಾಸಕ (ಜೆಡಿಎಸ್ ರಾಜ್ಯಾಧ್ಯಕ್ಷ)

ಒಟ್ಟಾರೆ ದಿನದಿಂದ ದಿನಕ್ಕೆ ಮತ್ತೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಮೈತ್ರಿ ಸರ್ಕಾರದ ಸಂದರ್ಭದಲ್ಲಿಯೇ ಸ್ಥಳೀಯ ಶಾಸಕ ಕಾಫಿಬೆಳೆಗಾರರ ಜೊತೆಗೂಡಿ ಬಾಳ್ಳುಪೇಟೆಯಲ್ಲಿ ವಾರಗಟ್ಟಳೆ ರಸ್ತೆಯ ಬದಿಯಲ್ಲಿಯೇ ಕುಳಿತು ನಿರಂತರ ಪ್ರತಿಭಟನೆ ಮಾಡಿದ್ರು. ಕೇರಳ ಮಾದರಿಯಲ್ಲಿಯೇ ಸಕಲೇಶಪುರ ಭಾಗದಲ್ಲಿ ತಂತಿಬೇಲಿ ಹಾಕಿಸುವ ಭರವಸೆಯನ್ನ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದುಕೊಂಡಿದ್ರು. ಸರ್ಕಾರ ಪತನದ ಬಳಿಕ ಆ ಭರವಸೆಯೂ ಬಹುಶಃ ಮರೆತುಹೋಗಿದೆ. ಈ ಸರ್ಕಾರಕ್ಕೆ ಗೊತ್ತಾಗುವುದಕ್ಕೆ ನಾವು ಮತ್ತೆ ಪ್ರತಿಭಟನೆ ಮಾಡಬೇಕಾ ಎಂಬುದು ಮಲೆನಾಡು ಭಾಗದ ಜನ್ರ ಮಾತು. ಜೊತೆಗೆ ಮುಂದಿನ ದಿನದಲ್ಲಿ ಸರ್ಕಾರ ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಕಾರ್ಯಮಾಡದಿದ್ದರೇ ಉಗ್ರಹೋರಾಟದ ಎಚ್ಚರಿಕೆಯನ್ನ ನೀಡಿದ್ದಾರೆ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.